ಬೆಂಗಳೂರು:ಬಿಗ್ ಬಾಸ್ ಒಟಿಟಿ 2 ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಪೊಲೀಸರ ವಿಚಾರಣೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಎಲ್ವಿಶ್ ಹಾವಿನ ವಿಷವನ್ನು ಆರ್ಡರ್ ಮಾಡಿರುವ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಈ ಯೂಟ್ಯೂಬರ್ ಅನ್ನು ನಿನ್ನೆ ಭಾನುವಾರ ಬಂಧಿಸಲಾಯಿತು. ನಂತರ ಅವರನ್ನು 14 ದಿನಗಳ ರಿಮಾಂಡ್‌ಗೆ ಕಳುಹಿಸಲಾಗಿದೆ.
ಅಪರಾಧವನ್ನು ಒಪ್ಪಿಕೊಂಡಿದ್ದಾರೆಯೇ?ಮಾಧ್ಯಮ ವರದಿಗಳ ಪ್ರಕಾರ, ಎಲ್ವಿಶ್ ಯಾದವ್ ಹಾವಿನ ವಿಷವನ್ನು ಆರ್ಡರ್ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ನೋಯ್ಡಾದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಎಲ್ವಿಶ್ ಹಾವಿನ ವಿಷವನ್ನು ಕೇಳಿದ್ದರು. ಅಷ್ಟೇ ಅಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಜತೆ ಸಂಪರ್ಕದಲ್ಲಿದ್ದಿರುವುದಾಗಿಯೂ ಎಲ್ವಿಶ್ ತಪ್ಪೊಪ್ಪಿಕೊಂಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಹಾವಿನ ವಿಷದ ಪ್ರಕರಣದಲ್ಲಿ ಎಲ್ವಿಶ್ ಹೆಸರು ಕೇಳಿ ಬರುತ್ತಿತ್ತು. ಆದರೆ ಎಲ್ವಿಶ್ ಇದನ್ನು ಮೊದಲಿನಿಂದಲೂ ನಿರಾಕರಿಸಿದ್ದಾರೆ. ಆದರೀಗ ಈಗ ಅನೇಕ ಮಾಧ್ಯಮ ವರದಿಗಳು ನ್ಯಾಯಾಂಗ ಬಂಧನಕ್ಕೆ ಹೋದ ನಂತರ, ಎಲ್ವಿಶ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ಎಂದು ಹೇಳುತ್ತಿವೆ. ರೇವ್ ಪಾರ್ಟಿಯಲ್ಲಿ ತಾನು ಹಾವಿನ ವಿಷವನ್ನು ಬಳಸಿದ್ದೇನೆ ಎಂದು ಎಲ್ವಿಶ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಔಪಚಾರಿಕ ಮಾಹಿತಿ ನೀಡಿಲ್ಲ.
ಎಲ್ವಿಶ್ ಯಾದವ್ ಬಂಧನಎಲ್ವಿಶ್ ಯಾದವ್ ಅವರನ್ನು ಭಾನುವಾರ ಸಂಜೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಹಾವಿನ ವಿಷಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಎಲ್ವಿಶ್‌ನನ್ನು ವಿಚಾರಣೆಗೆ ಕರೆದಿದ್ದರು. ನಂತರ ಎಲ್ವಿಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನೋಯ್ಡಾ ಪೊಲೀಸರ ಬೇಡಿಕೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಎಲ್ವಿಶ್ ನನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಈ ಸಮಯದಲ್ಲಿ, ಎಲ್ವಿಶ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ, ಇದರಲ್ಲಿ ಜಾಮೀನು ಸುಲಭವಾಗಿ ಸಿಗುವುದಿಲ್ಲ.
ಏನಿದು ವಿಷಯ?ನವೆಂಬರ್ 8, 2023 ರಂದು ಎಲ್ವಿಶ್ ಯಾದವ್ ನೋಯ್ಡಾದಲ್ಲಿ ರೇವ್ ಪಾರ್ಟಿ ಮಾಡಿದರು. ಅಲ್ಲಿ ಹಾವಿನ ವಿಷ ಪೂರೈಸಿದ ಆರೋಪ ಕೇಳಿಬಂದಿತ್ತು. ಈ ವಿಷಯ ಬೆಳಕಿಗೆ ಬಂದ ನಂತರ, ಎಲ್ವಿಶ್ ಜೈಲಿಗೆ ಹೋಗುತ್ತಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಎಲ್ವಿಶ್, ಹಾವಿನ ವಿಷ ತೆಗೆದುಕೊಂಡಿರುವ ವಿಚಾರವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಆದರೆ ನಂತರ ಬಂದ ಎಫ್ಎಸ್ಎಲ್ ತನಿಖಾ ವರದಿಯೂ ಹಾವಿನ ವಿಷ ತೆಗೆದುಕೊಂಡಿರುವುದನ್ನು ದೃಢಪಡಿಸಿದೆ. ಎಫ್‌ಎಸ್‌ಎಲ್ ವರದಿ ಬಂದಾಗಿನಿಂದಲೂ ಎಲ್ವಿಷ್​​ಗೆ ತೊಂದರೆಗಳ ಮೇಲೆ ತೊಂದರೆಯುಂಟಾಗುತ್ತಿದೆ.
ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಬಿಗ್​ಬಾಸ್ ಒಟಿಟಿ​ ವಿನ್ನರ್ ಎಲ್ವಿಸ್ ಯಾದವ್​​ ಅರೆಸ್ಟ್​​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
