ನವದೆಹಲಿ:ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ವಾಪಸ್ ಕಳಿಸಿ, ವಿವಿಧೆಡೆ ಅಲೆಯುವಂತೆ ಮಾಡುವ ಆಸ್ಪತ್ರೆಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ರಕ್ತ ಬದಲಾವಣೆ, ಡಯಾಲಿಸಿಸ್ ಮುಂತಾದ ಪ್ರಕ್ರಿಯೆಗಳಿಗೆ ಕಾಯಲು ಸಾಧ್ಯವಿಲ್ಲ. ಕ್ಷುಲ್ಲಕ ಕಾರಣಕ್ಕೆ ರೋಗಿಗಳನ್ನು ಅಲೆದಾಡಿಸಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಖಾಸಗಿ ಆಸ್ಪತ್ರೆಗಳಿಗೆ ತಾಕೀತು ಮಾಡಿದ್ದಾರೆ.
ಚಿಕಿತ್ಸೆ ನೀಡದೆ ಬೇರೆ ಬೇರೆ ಆಸ್ಪತ್ರೆಗಳಿಗೆ ಕಳಿಸುವುದರಿಂದ ಒಂದು ಜೀವವೇ ನಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಹರ್ಷವರ್ಧನ್ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
‘ಕರೊನಾ ಹಾವಳಿ ಇರುವ ಈ ಕಾಲವು ಪ್ರತಿಯೊಬ್ಬರಿಗೂ ಪರೀಕ್ಷಾ ಸಮಯವಾಗಿದೆ. ಅನಾರೋಗ್ಯಪೀಡಿತ ಹಾಗೂ ತುರ್ತಾಗಿ ವೈದ್ಯಕೀಯ ಆರೈಕೆ ಅಗತ್ಯವಾದ ರೋಗಿಗಳು ಆಸ್ಪತ್ರೆ ಹುಡುಕಲೇ ಪರದಾಡುವಂತಾಗಿದೆ’ ಎಂದು ಡಾ. ಹರ್ಷವರ್ಧನ್ ಆತಂಕ ವ್ಯಕ್ತಪಡಿಸಿದ್ದಾರೆ.
ಆಡಳಿತ ಪಕ್ಷದ ಶಾಸಕನ ಕಿರುಕುಳಕ್ಕೆ ವೈದ್ಯ ಆತ್ಮಹತ್ಯೆ, ಶಾಸಕನ ಕಿರುಕುಳಕ್ಕೆ ಕಾರಣ ಏನು ಗೊತ್ತಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 − fourteen =
Remember me
