ನವದೆಹಲಿ:ಲೋಕಸಭಾಧ್ಯಕ್ಷರಾಗಿ ಆಯ್ಕೆಯಾದ ಮರುನಿಮಿಷವೇ ಓಂ ಬಿರ್ಲಾ ಅವರು ತುರ್ತಪರಿಸ್ಥಿತಿಯನ್ನು ಖಂಡಿಸುವ ನಿರ್ಣಯ ಮಂಡಿಸಿದ್ದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದರಲ್ಲದೆ ಸದನದ ಕಲಾಪ ಮುಂದೂಡಿಕೆಗೆ ಕಾರಣರಾದರು. ಸ್ಪೀಕರ್ ಸ್ಥಾನ ಅಲಂಕರಿಸಿದ ಬಳಿಕ ಎಲ್ಲರ ಸಹಕಾರ ಕೋರಿ ಮಾತು ಆರಂಭಿಸಿದ ಓಂ ಬಿರ್ಲಾ, ‘1975ರ ಜೂ. 26ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯು ದೇಶದ ಸಂವಿಧಾನದ ಮೇಲೆ ನಡೆದ ದಾಳಿ’ ಎಂದು ಬಣ್ಣಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಪ್ರತಿಭಟಿಸತೊಡಗಿದರು. ‘ಆಗಿನ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಿ ಜೈಲಿಗೆ ಕಳಿಸಿತು. ಮಾಧ್ಯಮ, ನ್ಯಾಯಾಂಗದ ಸ್ವಾತಂತ್ರ್ಯನ್ನೂ ಕಿತ್ತುಕೊಂಡಿತು. ಆ ಕರಾಳ ಅಧ್ಯಾಯಕ್ಕೆ ಇಂದಿಗೆ 50 ವರ್ಷ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ರಕ್ಷಿಸುವ ಬದ್ಧತೆಯನ್ನು 18ನೇ ಲೋಕಸಭೆ ಪುನರುಚ್ಚರಿಸುತ್ತದೆ’ ಎಂದು ಬಿರ್ಲಾ, ಕಾಂಗ್ರೆಸ್ ಸದಸ್ಯರ ಗದ್ದಲ-ಘೊಷಣೆಗಳ ನಡುವೆ ಹೇಳಿದರು.
ಮೋದಿ ಸ್ವಾಗತ:ಸ್ಪೀಕರ್ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿ, ‘ಸರ್ವಾಧಿಕಾರ ಎಂದರೆ ಏನೆಂಬುದನ್ನು ತುರ್ತು ಪರಿಸ್ಥಿತಿ ತೋರಿಸಿದೆ’ ಎಂದು ಹೇಳಿದರು.
ಬಿಜೆಪಿ ಪ್ರತಿಭಟನೆ:ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಪ್ರತಿಭಟನೆ ಮಾಡಿದರೆ ಬಿಜೆಪಿ ಸದಸ್ಯರು ಸಂಸತ್ ಭವನದ ಮೆಟ್ಟಿಲುಗಳ ಮೇಲೆ ದೊಡ್ಡ ಸಂಖ್ಯೆಯಲ್ಲಿ ಸೇರಿ, 49 ವರ್ಷ ಹಿಂದಿನ ತುರ್ತಪರಿಸ್ಥಿತಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಹುಲ್​ಗೆ ಸ್ಪೀಕರ್ ಮನ್ನಣೆ:ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷ ಕಳಿಸಿದ್ದ ಪತ್ರಕ್ಕೆ ಸ್ಪೀಕರ್ ಓಂ ಬಿರ್ಲಾ ಮನ್ನಣೆ ನೀಡಿದ್ದಾರೆ. ಈ ಸಂಬಂಧ ಲೋಕಸಭಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಗುರುವಾರ ರಾಷ್ಟ್ರಪತಿ ಭಾಷಣ:ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುಮು ಗುರುವಾರ ಭಾಷಣ ಮಾಡಲಿದ್ದಾರೆ.
ವಿಪಕ್ಷ ಒಕ್ಕೂಟದಲ್ಲಿ ಬಿರುಕು?:ಎಮರ್ಜೆನ್ಸಿ ಪ್ರಸ್ತಾಪ ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಇಂಡಿಯಾ ಒಕ್ಕೂಟದ ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಭಾಗವಹಿಸದೇ ಇರುವುದು ಆ ಒಕ್ಕೂಟದಲ್ಲಿ ಉಂಟಾಗಿರುವ ಬಿರುಕಿಗೆ ಸಾಕ್ಷಿ ಎಂದು ಬಿಜೆಪಿ ವಕ್ತಾರ, ಸಂಸದ ಸಂಬಿತ್ ಪಾತ್ರಾ ಬಣ್ಣಿಸಿದ್ದಾರೆ. ತುರ್ತು ಪರಿಸ್ಥಿತಿ ವಿರುದ್ಧ ಮೌನಾಚರಣೆಗೆ ಸದನ ಮುಂದಾದಾಗ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸುತ್ತಿದ್ದರೆ ಇಂಡಿಯಾ ಒಕ್ಕೂಟದ ಸದಸ್ಯರು ಮೌನಾಚರಣೆಯಲ್ಲಿ ಪಾಲ್ಗೊಂಡರು. ತಮ್ಮ ಸೀಟಿನಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಕೂಡ ಇವರೆಲ್ಲರನ್ನು ನೋಡಿ ಗೊಂದಲಕ್ಕೆ ಒಳಗಾದರಲ್ಲದೆ ಕೂಡಲೇ ಎದ್ದು ನಿಂತರು ಎಂದು ಪಾತ್ರಾ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 11 =
Remember me
