ನವದೆಹಲಿ :‘ಜೈಕೋವಿ-ಡಿ’ ಎಂಬ ತನ್ನ ಕರೊನಾ ಲಸಿಕೆಗೆ ತುರ್ತು ಬಳಕೆ ಪರವಾನಗಿಗಾಗಿ ಜೈಡಸ್​ ಕಾಡಿಲಾ ಔಷಧ ಕಂಪೆನಿ ಅರ್ಜಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಈ ಪ್ಲಾಸ್ಮಿಡ್​ ಡಿಎನ್​ಎ ವ್ಯಾಕ್ಸಿನ್ನಿನ ಪ್ರಯೋಗಗಳ ಫಲಿತಾಂಶಗಳನ್ನು ಡ್ರಗ್​ ಕಂಟ್ರೋಲರ್ ಜನರಲ್ ಆಫ್​ ಇಂಡಿಯ(ಡಿಸಿಜಿಐ) ಕಛೇರಿಗೆ ಸಲ್ಲಿಸಿದೆ ಎಂದು ಕಂಪೆನಿ ಸುದ್ದಿಗಾರರಿಗೆ ತಿಳಿಸಿದೆ.
ಜೈಕೋವಿ-ಡಿ ಲಸಿಕೆಗೆ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಅತಿದೊಡ್ಡ ಪ್ರಮಾಣದ ಕ್ಲಿನಿಕಲ್ ಟ್ರಯಲ್​ಅನ್ನು ನಡೆಸಲಾಗಿದೆ. ಲಸಿಕೆಯನ್ನು 12 ರಿಂದ 18 ವರ್ಷ ವಯೋಮಾನದವರ ಮೇಲೂ ಪ್ರಯೋಗ ಮಾಡಲಾಗಿದ್ದು, ಈ ಗುಂಪಿನಲ್ಲಿ 1000 ಜನರು ಲಸಿಕೆ ಪಡೆದಿದ್ದಾರೆ. ಈ ವಯೋಮಾನದ ಅಭ್ಯರ್ಥಿಗಳಿಗೆ ಮತ್ತು ವಯಸ್ಕರಿಗೆ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ:ವರನಿಗೆ ಮದುವೆಯಾಗೋ ಅರ್ಜೆಂಟು: ಹಾರ ಬದಲಾಯಿಸುವಾಗ ಎಡವಟ್ಟು- ಮುಂದೇನಾಯ್ತು ನೋಡಿ…
ಈ ಲಸಿಕೆಗೆ ಪರವಾನಗಿ ಸಿಕ್ಕಲ್ಲಿ ಇದು 12 ರಿಂದ 18 ವರ್ಷದ ಗುಂಪಿನ ಜನರಿಗೆ ಭಾರತದಲ್ಲಿ ಲಭ್ಯವಾಗುವ ಮೊದಲ ಲಸಿಕೆಯಾಗಲಿದೆ. ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ನ ನಂತರ ಅನುಮೋದನೆ ಗಳಿಸುವ ಮೂರನೇ ದೇಶೀಯ ಕರೊನಾ ಲಸಿಕೆಯಾಗಲಿದೆ.(ಏಜೆನ್ಸೀಸ್)
ಜೂಡೋ ಕ್ಲಾಸಲ್ಲಿ ಪೆಟ್ಟುತಿಂದು ಕೋಮಾಗೆ ಜಾರಿದ್ದ ಬಾಲಕನ ಸಾವು; ಶಿಕ್ಷಕನಿಂದ ನಡೆದಿತ್ತು ಘೋರ ಅನರ್ಥ!

ರಾಷ್ಟ್ರೀಯ ವೈದ್ಯರ ದಿನ : ಐಎಂಎ ಕಾರ್ಯಕ್ರಮದಲ್ಲಿ ಮೋದಿ ಮಾತು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − sixteen =
Remember me
