ನವದೆಹಲಿ:ವಿಸ್ತರಣಾವಾದಿ ಮನೋಭಾವದೊಂದಿಗೆ ಲಡಾಖ್​ನಲ್ಲಿ ಹಟಮಾರಿ ಧೋರಣೆ ಅನುಸರಿಸುತ್ತಾ, ಸೇನೆಯನ್ನು ಹಿಂತೆಗೆಯಲು ನಿರಾಕರಿಸುತ್ತಿರುವ ಚೀನಾದ ಮೇಲೆ ಭಾರತೀಯ ಉಪಗ್ರಹಗಳ ಕಣ್ಣು ನೆಟ್ಟಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ನಿರ್ವಹಣೆಯ ದೇಶದ ಪ್ರಮುಖ ಬೇಹುಗಾರಿಕಾ ಉಪಗ್ರಹ ಎಮಿಸ್ಯಾಟ್​ (EMISAT) ಶನಿವಾರ ಆಕ್ರಮಿತ ಟಿಬೆಟ್​ನ ಪ್ರದೇಶವನ್ನು ಹಾದುಹೋಗಿದ್ದು, ಅಲ್ಲಿ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರ ನಿಯೋಜನೆಯನ್ನು ಗಮನಿಸಿ ಕರಾರುವಾಕ್ಕಾಗಿ ಮಾಹಿತಿ ನೀಡಿದೆ.
ಈ ಉಪಗ್ರಹದಲ್ಲಿರುವ ಕೌಟಿಲ್ಯಾ ಎಂಬ ಹೆಸರಿನ ವಿದ್ಯುನ್ಮಾನ ಬೇಹುಗಾರಿಕಾ ಉಪಕರಣ ELINT, ಭಾರತದ ಅರುಣಾಚಲಪ್ರದೇಶಕ್ಕೆ ಸನಿಹವಾಗಿ ಆಕ್ರಮಿತ ಟಿಬೆಟ್​ನಲ್ಲಿ ನೆಲೆಗೊಂಡಿರುವ ಪಿಎಲ್​ಎ ಯೋಧರ ನಿಯೋಜನೆ ಕುರಿತು ನಿಖರ ಮಾಹಿತಿ ಒದಗಿಸಿದೆ. ಇದು ರವಾನಿಸುವ ಮಾಹಿತಿ ಅತ್ಯಂತ ಗೌಪ್ಯವಾದದ್ದು ಮತ್ತು ಮಿಲಿಟರಿ ಕಾರ್ಯಾಚರಣೆಯ ಉದ್ದೇಶದಲ್ಲಿ ಅತ್ಯಂತ ಮಹತ್ವ ಹೊಂದಿರುವ ಮಾಹಿತಿ ಆಗಿರುತ್ತದೆ. ಇಸ್ರೋ ನಿರ್ಮಿತ ಉಪಗ್ರಹವು ಶತ್ರುಪಾಳೆಯದಲ್ಲಿನ ಎಲ್ಲ ರೇಡಿಯೋ ಸಿಗ್ನಲ್​ಗಳ ಸ್ವಭಾವಗಳು ಮತ್ತು ಅವು ಹೊಮ್ಮುತ್ತಿರುವ ನಿಖರವಾದ ಸ್ಥಳವನ್ನು ಇದು ಗುರುತಿಸಿ ಮಾಹಿತಿ ಒದಗಿಸುತ್ತದೆ ಎಂದು ಹೇಳಲಾಗಿದೆ.
ಪ್ಯಾಂಗಾಂಗ್​ ತ್ಸೊ ಸರೋವರದ 4ನೇ ಏಣಿನಲ್ಲಿ ನೆಲೆಗೊಳಿಸಿರುವ ಪಿಎಲ್​ಎ ಯೋಧರನ್ನು ಹಿಂತೆಗೆಯುವ ಕುರಿತು ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆದ ಮರುದಿನವೇ ಎಮಿಸ್ಯಾಟ್​ ಚೀನಾದ ಪ್ರದೇಶವನ್ನು ಹಾದು ಹೋಗಿದೆ. ಮಾತುಕತೆಗಳು ಫಲಪ್ರದವಾಗದಿದ್ದರೂ, ಈ ಪ್ರಕ್ರಿಯೆಯನ್ನು ಮುಂದುವರಿಸಲು ಉಭಯ ಪಕ್ಷಗಳು ಸಮ್ಮತಿಸಿವೆ ಎಂದು ಹೇಳಲಾಗಿದೆ.
ಡೆಪ್ಸಾಂಗ್​ ವಲಯದಲ್ಲಿ ಪಿಎಲ್​ಎ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದು, ಈ ಪ್ರದೇಶದಲ್ಲಿ ಟೆಂಟ್​ ಮತ್ತು ಬಂಕರ್​ಗಳನ್ನು ನಿರ್ಮಿಸಿಕೊಂಡಿರುವುದು ಕಂಡುಬಂದಿದೆ. ಆದರೆ ಈ ಬೆಳವಣಿಗೆ ವಾಸ್ತವ ಗಡಿರೇಖೆಯ ಚೀನಾದ ಭಾಗದಲ್ಲಿ ಕಂಡುಬಂದಿದೆ. 2013ರಲ್ಲಿ ಕೂಡ ಪಿಎಲ್​ಎ ಯೋಧರು ಡೆಪ್ಸಾಂಗ್​ ವಲಯದಲ್ಲಿ ಅತಿಕ್ರಮಿಸಿದ್ದರು. ಆದರೆ ಮಾತುಕತೆಯ ಬಳಿಕ ಹಿಂತೆಗೆದಿದ್ದರು.
ಇದನ್ನೂ ಓದಿ:ಪಿಒಕೆಯ ಸ್ಕದ್ರು ವಾಯುನೆಲೆಯಲ್ಲಿ ಇಳಿದಿವೆ ಪಾಕ್‍ನ ಜೆ-17 ಫೈಟರ್ ಜೆಟ್‍ಗಳು!
ಮೂಲಗಳ ಪ್ರಕಾರ ಭಾರತದ ರಿಸ್ಯಾಟ್​-2ಬಿಆರ್​1 ಉಪಗ್ರಹ ಕೂಡ ಡಿಜಿಬೌಟಿಯಲ್ಲಿರುವ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ ನೇವಿಯ (ಪಿಎಲ್​ಎಎನ್​) ನೆಲೆಯ ಮೇಲೆ ಕೂಡ ಶುಕ್ರವಾರ ಕಣ್ಣು ಹಾಯಿಸಿದ್ದು, ತನ್ನ ಮೊದಲ ವಿದೇಶಿ ಮಿಲಿಟರಿ ನೆಲೆಯಲ್ಲಿ ಚೀನಾ ಯುದ್ಧನೌಕೆಗಳನ್ನು ನೆಲೆಗೊಳಿಸಿರುವುದಲ್ಲದೆ, ಕೆಲವು ಯುದ್ಧನೌಕೆಗಳು ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಜುಲೈ 11ರಂದು ಎಮಿಸ್ಯಾಟ್​ನ ಎಲಿಂಟ್​ ಪಾಕಿಸ್ತಾನದ ನೌಕಾನೆಲೆ ಒರ್ಮರಾ (ಜಿನ್ನಾ ನೌಕಾನೆಲೆ) ಮೇಲೆ ಕಣ್ಣು ಹಾಯಿಸಿದ್ದು, ಈ ನೆಲೆಯಲ್ಲಿರುವ ಸೌಲಭ್ಯ ಬಳಸಿಕೊಂಡು ಚೀನಾ ತನ್ನ ಜಲಂತರ್ಗಾಮಿಗಳನ್ನು ನೆಲೆಗೊಳಿಸಿರುವುದು ಕಂಡು ಬಂದಿದೆ.
ಲಡಾಖ್​ ಬಿಕ್ಕಟ್ಟು ಶಮನಕ್ಕೆ ಭಾರತ ಮತ್ತು ಚೀನಾ ಮಾತುಕತೆ ಪ್ರಕ್ರಿಯೆಯನ್ನು ಜಾರಿಯಲ್ಲಿಟ್ಟಿವೆ. ಆದರೂ, ಲಡಾಖ್​ ಮತ್ತು ಕಾಶ್ಮೀರದಲ್ಲಿ ಪಾಕ್​ ಮತ್ತು ಚೀನಾ ಒಂದಾಗಿ ದಾಳಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶತ್ರು ಪಾಳೆಯದ ಮೇಲೆ ಭಾರತೀಯ ಉಪಗ್ರಹಗಳು ಕಣ್ಗಾವಲು ಇರಿಸಿವೆ.
‘ರಾಮ ಮಂದಿರ ನಿರ್ಮಾಣಕ್ಕೆ ಸರ್ವ ಸಮದಾಯಗಳಿಂದಲೂ ದೇಣಿಗೆ ಸ್ವೀಕಾರ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 15 =
Remember me
