ನವದೆಹಲಿ:ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಆರಂಭಿಕ ಎಡಗೈ ಬ್ಯಾಟ್ಸ್​ಮನ್ ಆದ ಶಿಖರ್ ಧವನ್​, ಇಂದು ವಿಶ್ವ ಅಪ್ಪಂದಿರ ದಿನ ತಮ್ಮ ಪುತ್ರನನ್ನು ನೆನೆದು ಭಾವುಕರಾಗಿದ್ದಾರೆ. 3-4 ವರ್ಷಗಳ ಹಿಂದೆ ಶಿಖರ್​ ಅವರಿಂದ ವಿಚ್ಛೇದನ ಪಡೆದುಕೊಂಡ ಅಯೇಷಾ ಮುಖರ್ಜಿ, ಪುತ್ರನನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆಯಿದ್ದ ದಾಂಪತ್ಯ ಜೀವನ ಮುರಿದುಬಿದ್ದ ಬಳಿಕ ಧವನ್​ ಆಗಾಗ್ಗೆ ತಮ್ಮ ಪುತ್ರನನ್ನು ಕಣ್ತುಂಬಿಕೊಳ್ಳಲು ಕಾತರ ವ್ಯಕ್ತಪಡಿಸುತ್ತಿರುತ್ತಾರೆ.
ಇದನ್ನೂ ಓದಿ:ಯಕ್ಷಗಾನ ಅದ್ಭುತ ಕಲೆಎಕ್ಕಾರು ಯಕ್ಷ ಶಿಕ್ಷಣ ಕಾರ್ಯಕ್ರಮದಲ್ಲಿ ಗಿರೀಶ್ ಶೆಟ್ಟಿ ಕಟೀಲು
ಇಂದು ವಿಶ್ವ ಅಪ್ಪಂದಿರ ದಿನದ ಹಿನ್ನೆಲೆ ಪುತ್ರನನ್ನು ನೆನಪಿಸಿಕೊಂಡ ಶಿಖರ್​, “ಅಪ್ಪನಿಗೆ ಒಂದೇ ಒಂದು ಶುಭಾಶಯದ ಸಂದೇಶ ನನ್ನ ಮಗನಿಂದ ಬರಲಿಲ್ಲ ಎಂಬ ದುಃಖ ನನ್ನನ್ನು ಆವರಿಸಿಕೊಂಡಿದೆ. ಬೆಳಗ್ಗಿನಿಂದಲೂ ಮಗನ ವಿಶ್​ಗಾಗಿ ಕಾದು ಕುಳಿತಿದ್ದೆ. ಆದರೆ, ಅದು ಕಡೆಗೂ ಈಡೇರಲಿಲ್ಲ. ನನ್ನ ಅಪ್ಪನಿಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು. ಎಲ್ಲದಕ್ಕೂ ನಿಮಗೆ ಧನ್ಯವಾದ. ನನ್ನ ಮಗನೊಂದಿಗೆ ಸಂಪರ್ಕ ಇಲ್ಲದ ಕಾರಣ ಅವನಿಂದ ಶುಭಾಶಯವಿಲ್ಲ. ನನ್ನಂತೆಯೇ ಇರುವ ಅಪ್ಪಂದಿರಿಗೂ ಶುಭಾಶಯಗಳು” ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ನನ್ನ ಪುತ್ರ ಎಲ್ಲಿದ್ದರೂ, ಒಂದಲ್ಲ ಒಂದು ದಿನ ತನ್ನ ಅಪ್ಪನನ್ನು ಕಾಣಲು ಬಂದೇ ಬರುತ್ತಾನೆ ಎಂದೇ ಆಶಿಸುವೆ. ನಾನು ಅವನನ್ನು ತುಂಬ ಪ್ರೀತಿಸುತ್ತಿದ್ದೇನೆ. ಆದರೆ ಅದೇ ಸಮಯದಲ್ಲಿ, ನಾನು ಮೌನಕ್ಕೆ ಶರಣಾಗಿದ್ದೇನೆ. ನಾನು ಅವನಿಗೆ ಪ್ರತಿದಿನ ಸಂದೇಶಗಳನ್ನು ಬರೆದು, ಉತ್ತರಕ್ಕಾಗಿ ಕಾಯುತ್ತಿರುವೆ. ಆದರೆ, ಇದೆಲ್ಲವೂ ಅವನಿಗೆ ತಲುಪುತ್ತಿದೆಯೋ, ಅದನ್ನು ಅವನು ಸ್ವೀಕರಿಸುತ್ತಿದ್ದಾನೋ ಎಂಬುದು ನನಗೆ ತಿಳಿದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಚಿನ್ನೇನಹಳ್ಳಿ ರೋಗಿಯೊಬ್ಬರಿಗೆ ಕಾಲರಾ ಪತ್ತೆ
“ಅವನು ಹೇಗಿದ್ದಾನೆ ಎಂಬುದರ ಬಗ್ಗೆಯೂ ತಿಳಿದಿಲ್ಲ. ನನಗೆ ಯಾವುದೇ ನಿರೀಕ್ಷೆಗಳಿಲ್ಲ. ಒಬ್ಬ ತಂದೆಯಾಗಿ ನಾನು ನನ್ನ ಕರ್ತವ್ಯವನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಅವನಿಲ್ಲದೆ ನಾನು ದುಃಖಿತನಾಗಿದ್ದೇನೆ. ಆದರೂ ಇದೆಲ್ಲವನ್ನೂ ಮೀರಿ ಬದುಕುವುದನ್ನು ಸಹ ಕಲಿತಿದ್ದೇನೆ” ಎಂದು ಭಾವುಕರಾಗಿದ್ದಾರೆ,(ಏಜೆನ್ಸೀಸ್).
ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
