ನವದೆಹಲಿ:ಆಮ್​ ಆದ್ಮಿ ಪಾರ್ಟಿ(ಎಎಪಿ)ದ ನೇತಾರ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಉತ್ತರಾಖಂಡದ ಯುವಜನತೆಯ ವಿಶ್ವಾಸ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಪ್ರತ್ಯೇಕ ಸಚಿವಾಲಯವನ್ನೇ ಸೃಷ್ಟಿಸಿ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ರಾಜ್ಯದ ವಿಧಾನಸಭಾ ಚುನಾವಣೆಗಳ ಸಿದ್ಧತೆಗಾಗಿ ಇಂದು ಉತ್ತರಾಖಂಡದ ಹಲ್​​ದ್ವನಿಯಲ್ಲಿ ತಿರಂಗಾ ಸಂಕಲ್ಪ ಯಾತ್ರೆ ನಡೆಸಿದ ಕೇಜ್ರಿವಾಲ್​, ತಮ್ಮ ಟ್ವಿಟರ್​ ಖಾತೆಯಲ್ಲಿ ಅದರ ವಿವರಗಳನ್ನು ಶೇರ್​ ಮಾಡಿದ್ದಾರೆ. ಜೊತೆಯಲ್ಲೇ, ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆಯಾದರೆ, ಅಲ್ಲಿನ ಜನರಿಗೆ 6 ಗ್ಯಾರಂಟಿಗಳನ್ನು ಕೊಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಸಿಎಂ ಮಾಡಲಿ: ರಾಜೀನಾಮೆ ನೀಡಿದ ಕ್ಯಾಪ್ಟನ್​ ಉದ್ಗಾರ
ಪ್ರತಿಯೊಂದು ಮನೆಗೆ ಉದ್ಯೋಗ ನೀಡಲಾಗುವುದು ಅಥವಾ ಉದ್ಯೋಗ ಸಿಗುವವರೆಗೆ ತಿಂಗಳಿಗೆ 5 ಸಾವಿರ ರೂಪಾಯಿ ನೀಡಲಾಗುವುದು; ನೌಕರಿಗಳಲ್ಲಿ ಉತ್ತರಾಖಂಡದ ಜನರಿಗೆ ಶೇ.80 ರಷ್ಟು ಮೀಸಲಾತಿ ನೀಡಲಾಗುವುದು; 6 ತಿಂಗಳಲ್ಲಿ 1 ಲಕ್ಷ ಸರ್ಕಾರಿ ನೌಕರಿ ಸೃಷ್ಟಿ ಮಾಡಲಾಗುವುದು; ಖಾಸಗಿ ಕ್ಷೇತ್ರಗಳ ನೌಕರಿಗಳಿಗಾಗಿ ಜಾಬ್​ ಪೋರ್ಟಲ್​ ತೆರೆಯಲಾಗುವುದು; ಜನರು ಅನ್ಯರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಮತ್ತು ವಲಸೆ ಮಂತ್ರಾಲಯವನ್ನು ರಚಿಸಲಾಗುವುದು ಎಂದು ಕೇಜ್ರಿವಾಲ್​ ಟ್ವೀಟ್​ ಮಾಡಿದ್ದಾರೆ.
ಎಎಪಿಯು ಉತ್ತರಾಖಂಡದ ಸಿಎಂ ಅಭ್ಯರ್ಥಿಯಾಗಿ ನಿವೃತ್ತ ಕರ್ನಲ್​ ಅಜಯ್​ ಕೋತಿಯಾಲ್​ ಅವರನ್ನು ಹೆಸರಿಸಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ ರಾಜ್ಯದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 56 ಸೀಟುಗಳನ್ನು ಗೆದ್ದು, ಸರ್ಕಾರ ರಚಿಸಿತ್ತು. ಕಾಂಗ್ರೆಸ್​ 11 ಸೀಟುಗಳನ್ನು ಗೆದ್ದಿತ್ತು. ಇದೀಗ ಎಎಪಿ ಈ ರಾಜ್ಯಕ್ಕೆ ಪ್ರವೇಶ ನೀಡುತ್ತಿದ್ದು, ಯಾವ ರೀತಿಯ ಬದಲಾವಣೆ ತರಲಿದೆ ಎಂದು ಕಾದುನೋಡಬೇಕಿದೆ.(ಏಜೆನ್ಸೀಸ್)
ಕಾಲೇಜುಗಳಿಗೆ ಹಿಂಬಾಗಿಲ ಪ್ರವೇಶಾತಿ ನಿಲ್ಲಬೇಕು: ದೆಹಲಿ ಹೈಕೋರ್ಟ್​
ಬೆನ್ನು, ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ‘ಸುಪ್ತ ಪದ್ಮಾಸನ’
ಮುಸ್ಲಿಂ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಗೂಸಾ: ಇಬ್ಬರು ಪುಂಡರು ಪೊಲೀಸರ ವಶಕ್ಕೆ


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty + 9 =
Remember me
