ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿ ಉಗ್ರನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಸೋಮವಾರ ನಸುಕಿನಲ್ಲಿ ಅನಂತನಾಗ್​ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರು ಮುಖಾಮುಖಿಯಾಗಿದ್ದು, ಎನ್​ಕೌಂಟರ್ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದ ಈ ಜಿಲ್ಲೆಯ ಕೌಲ್​ ಚೋಹರ್​ ಎಂಬಲ್ಲಿ ಭದ್ರತಾ ಪಡೆ ಸಿಬ್ಬಂದಿ ಕಟ್ಟುನಿಟ್ಟಿನ ಶೋಧ ಕಾರ್ಯ ಆರಂಭಿಸಿದ್ದರು. ಇದು ಉಗ್ರರ ಅಡಗುದಾಣಕ್ಕೆ ಸಮೀಪವೇ ಆಗಿದ್ದರಿಂದ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಉಗ್ರರು ಮಾಡಿದ್ದಾರೆ. ಆಗ ಎನ್​ಕೌಂಟರ್ ಸಂಭವಿಸಿದೆ. ಇದರಲ್ಲಿ ಮೂವರು ಉಗ್ರರು ಹತರಾಗಿದ್ದು, ಅವರ ಗುರುತು ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಇದನ್ನೂ ಓದಿ:ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !
ಭದ್ರತಾ ಪಡೆಗಳಿಗೆ ಉಗ್ರರು ಅಲ್ಲಿರುವ ಖಚಿತ ಮಾಹಿತಿ ಸಿಕ್ಕಿದ ಕಾರಣವೇ ಕಟ್ಟುನಿಟ್ಟಿನ ಶೋಧ ಕಾರ್ಯವನ್ನು ಅವರು ಕೈಗೊಂಡಿದ್ದರು. ಉಗ್ರರು ಭದ್ರತಾ ಪಡೆ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಶುರುಮಾಡಿದ ಕಾರಣ ಭದ್ರತಾಪಡೆಯವರು ಪ್ರತಿದಾಳಿ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಗಲ್ವಾನ್ ನದಿ ತಿರುವಿನಲ್ಲಿ ಬೀಡುಬಿಟ್ಟಿದೆ; ಚೀನಾ ಸೇನೆ 16ಕ್ಕೂ ಹೆಚ್ಚು ಶಿಬಿರ ನಿರ್ಮಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
