ನವದೆಹಲಿ:ಅತ್ಯಾಚಾರ ಆರೋಪಿಗಳ ಮೇಲೆ ಪೊಲೀಸರು ನಡೆಸಿದ್ದ ಎನ್​ಕೌಂಟರ್​ ಫೇಕ್. ಹೀಗಾಗಿ ಆ ಪೊಲೀಸರ ಮೇಲೆ ಕೊಲೆ ಕೇಸು ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್​ ನೇಮಕ ಮಾಡಿರುವ ಸಮಿತಿಯೊಂದು ಶಿಫಾರಸು ಮಾಡಿದೆ.
2019ರಲ್ಲಿ ಹೈದರಾಬಾದ್​ನಲ್ಲಿ ನಡೆದಿದ್ದ ಈ ಎನ್​ಕೌಂಟರ್ ಕುರಿತು ಇಂದು ಈ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ ಹತ್ತು ಪೊಲೀಸರ ವಿರುದ್ಧ ಫೇಕ್​ ಎನ್​ಕೌಂಟರ್​ ಆರೋಪ ಹೊರಿಸಿರುವ ಸಮಿತಿ, ಆ ಎಲ್ಲ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಹೇಳಿದೆ.
ಆರೋಪಿಗಳು ತಮ್ಮ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದರು ಎಂದು ಪೊಲೀಸರು ಹೇಳಿರುವ ವಿಚಾರ ನಂಬಲರ್ಹವಾದುದಲ್ಲ. ಮಾತ್ರವಲ್ಲ, ಅವರ ಹೇಳಿಕೆಯನ್ನು ಸಮರ್ಥಿಸುವಂಥ ಸಾಕ್ಷ್ಯಗಳೂ ಇಲ್ಲ ಎಂದು ಸಮಿತಿ ತಿಳಿಸಿದೆ.
ಡಾಕ್ಟರ್​ ಆಗಿರುವ 27 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ್ದ ಆರೋಪಿಗಳು ಹೈದರಾಬಾದ್​ನ ಶಂಷಾಬಾದ್​ನ ತೊಂಡುಪಲ್ಲಿ ಎಂಬಲ್ಲಿನ ಟೋಲ್ ಪ್ಲಾಜಾ ಬಳಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಷಡ್​ನಗರ ಬಳಿಯ ಚಟನ್​ಪಲ್ಲಿ ಎಂಬಲ್ಲಿ ಶವ ಎಸೆದು ಸುಟ್ಟು ಹಾಕಿದ್ದರು.
ಈ ಸಂಬಂಧ ಮಹಮ್ಮದ್ ಆರಿಫ್, ಚಿಂಟಕುಂಟ ಚೆನ್ನಕೇಶವುಲು, ಜೋಲು ಶಿವ ಮತ್ತು ಜೊಲ್ಲು ನವೀನ್ ಎಂಬವರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪ ದಾಖಲಿಸಿಕೊಳ್ಳಲಾಗಿತ್ತು. 2019ರ ನವೆಂಬರ್​ನಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದ್ದು, ಡಿ. 6ರಂದು ನಡೆದ ಎನ್​ಕೌಂಟರ್​ನಲ್ಲಿ ಇವರೆಲ್ಲ ಸಾವಿಗೀಡಾಗಿದ್ದರು.
ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ…

ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ಒಂದಲ್ಲ ಎರಡಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 6 =
Remember me
