ನವದೆಹಲಿ:ಜಗತ್ತಿನಾದ್ಯಂತ ದುಷ್ಟ ಶಕ್ತಿಗಳು ದೊಡ್ಡದಾಗಿ ಬೆಳೆಯುತ್ತಿದ್ದು, ಅಂತಿಮವಾಗಿ ಭಾರತವನ್ನು ತಲುಪಿ ದಾಗ ಅವು ಅವನತಿಯನ್ನು ಕಾಣುತ್ತವೆ. ಇಲ್ಲಿ ನಾವು ಅವುಗಳ ಅಂತಿಮ ವಿಧಿಗಳನ್ನು ನೆರವೇರಿಸುತ್ತೇವೆ ಎಂದು ಆರ್​ಎಸ್​ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ 16 ತಿಂಗಳ ಕಾಲ ನಾಲ್ಕು ವೇದಗಳ ಅನುಷ್ಠಾನದಲ್ಲಿ ಪಾಲ್ಗೊಂಡ 200 ಗುರುಗಳಿಗೆ ಸದ್ಗುರು ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ವೇದ ಸೇವಕ ಸನ್ಮಾನ ಸೋಹಲಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಅಯೋಧ್ಯೆಯ ಪುಣೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದುಷ್ಟ ಶಕ್ತಿಗಳು ಯಾವಾಗಲೂ ಸಕ್ರಿಯವಾಗಿರುತ್ತವೆ ಮತ್ತು ಒಗ್ಗಟ್ಟಿನಿಂದಿರುತ್ತವೆ. ಅವುಗಳಿಗೆ ಯಾವುದೇ ತರಬೇತಿಯ ಅಗತ್ಯವಿಲ್ಲ. ಅವು ಜಾಗತಿಕವಾಗಿ ಅಸ್ತಿತ್ವದಲ್ಲಿವೆ. ಅವರ ದುಷ್ಕೃತ್ಯಗಳು ಎಲ್ಲೆಡೆ ಸಂಭವಿಸುತ್ತವೆ. ಬಾಂಗ್ಲಾದೇಶ ಮೊದಲ ಪ್ರಕರಣವಲ್ಲ. ಮೊದಲ ಪ್ರಕರಣ ಅಮೆರಿಕ. ನಾನು ಅಮೆರಿಕದ ಲೇಖಕರೊಬ್ಬರ ಕಲ್ಚರಲ್ ಡೆವಲಪ್​ವೆುಂಟ್ ಆಫ್ ಅಮೇರಿಕಾ ಎಂಬ ಶೀರ್ಷಿಕೆಯ ಪುಸ್ತಕ ಓದಿದ್ದೇನೆ. ಕಳೆದ 100 ವರ್ಷದಲ್ಲಿ ಅಮೆರಿಕದಲ್ಲಿ ಆಗಿರುವ ಸಾಂಸ್ಕೃತಿಕ ಅವನತಿಯನ್ನು ಇದು ರ್ಚಚಿಸುತ್ತದೆ. ಇದು ಪೋಲಂಡ್, ಅರಬ್ ದೇಶಗಳಿಗೂ ಹಬ್ಬಿತು. ಇತ್ತೀಚೆಗೆ ಬಾಂಗ್ಲಾದೇಶವೂ ಇದಕ್ಕೆ ಸಾಕ್ಷಿಯಾಯಿತು. ಅವರು ಪ್ರಪಂಚದ ಮೇಲೆ ತಮ್ಮ ಹಿಡಿತ ಬಿಗಿಗೊಳಿಸುತ್ತಾರೆ ಮತ್ತು ಅವರು ಮಾತ್ರ ಸರಿ, ಇತರರು ತಪ್ಪು ಎಂದು ನಂಬುತ್ತಾರೆ. ತಮ್ಮ ಲಾಭಕ್ಕಾಗಿ ಈ ವಿಭಜಕ ಪ್ರವೃತ್ತಿಯನ್ನು ಉತ್ತೇಜಿಸುತ್ತಾರೆ ಎಂದು ಇತ್ತೀಚಿನ ಬೆಳವಣಿಗೆಗಳನ್ನು ವ್ಯಾಖ್ಯಾನಿಸಿದರು.
ರಾಷ್ಟ್ರಗಳ ಅವನತಿಗೆ ಕಾರಣ: ಇಂತಹ ಪ್ರವೃತ್ತಿಗಳು ವಿಪತ್ತುಗಳಿಗೆ ಮತ್ತು ರಾಷ್ಟ್ರಗಳ ಅವನತಿಗೆ ಕಾರಣವಾಗುತ್ತವೆ. ನಾವು ಈ ಪ್ರವೃತ್ತಿಗಳ ಮೇಲೆ ನಿಗಾ ಇಡಬೇಕು. ಇವು ದೊಡ್ಡದಾಗಿ ಬೆಳೆದು ಅಂತಿಮವಾಗಿ ಭಾರತವನ್ನು ತಲುಪಿದಾಗ, ಅವುಗಳ ಅಂತ್ಯಕ್ರಿಯೆ ಮಾಡಿದರೆ, ಇಲ್ಲಿ ಅವುಗಳ ಬೆಳವಣಿಗೆ ಇಲ್ಲವಾಗುತ್ತದೆ. ಇದಕ್ಕೆ ಇತಿಹಾಸವೇ ಸಾಕ್ಷಿ. ಅವುಗಳನ್ನು ಪಳಗಿಸುವ ಜ್ಞಾನ ನಮಗಿರುವುದರಿಂದ ಇದು ಸಾಧ್ಯವಾಗಿದೆ ಎಂದು ಭಾಗವತ್ ವಿಶ್ಲೇಷಿಸಿದರು.
Paris Paralympics : ಜೂಡೋ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
