ನವದೆಹಲಿ:ಜಾಗತಿಕ ಹಣಕಾಸು ಕ್ಷೇತ್ರದಲ್ಲಿ ಪ್ರಮುಖ ವ್ಯವಸ್ಥೆಯಾಗಿರುವ ಅಮೆರಿಕ-ಸೌದಿ ಅರೇಬಿಯಾ ಪೆಟ್ರೋಡಾಲರ್ ಒಪ್ಪಂದವು 80 ವರ್ಷಗಳ ನಂತರ ಕೊನೆಗೊಂಡಿದೆ.
ಜೂನ್ 8, 1974 ರಂದು ಪ್ರಾರಂಭವಾದ ಈ ಹೆಗ್ಗುರುತು ಒಪ್ಪಂದವು ಕಚ್ಚಾ ತೈಲ ರಫ್ತಿಗೆ ಅಮೆರಿಕ ಡಾಲರ್‌ಗಳ ವಿನಿಮಯವನ್ನು ಸುಗಮಗೊಳಿಸಿ, ಡಾಲರ್‌ನ ಪ್ರಾಬಲ್ಯವನ್ನು ಹೆಚ್ಚಿಸಿತ್ತು. ಪೆಟ್ರೋಡಾಲರ್‌ಗಳು ಕರೆನ್ಸಿಯಲ್ಲ; ಆದರೆ ಅಮೆರಿಕ ಡಾಲರ್‌ಗಳು ಕಚ್ಚಾ ತೈಲ ರಫ್ತಿಗೆ ವಿನಿಮಯಗೊಳ್ಳುತ್ತಿದ್ದವು.
“ಪೆಟ್ರೋಡಾಲರ್ಸ್” ಎಂಬ ಪದವು ತೈಲ-ರಫ್ತು ಮಾಡುವ ದೇಶಗಳು ತೈಲ ಮಾರಾಟದ ಮೂಲಕ ಗಳಿಸಿದ ಅಮೆರಿಕ ಡಾಲರ್‌ಗಳನ್ನು ಸೂಚಿಸುತ್ತದೆ. ಈ ಪರಿಕಲ್ಪನೆಯು 1970ರ ದಶಕದ ಆರಂಭದಲ್ಲಿ ಹೊರಹೊಮ್ಮಿ, ಜಾಗತಿಕ ಅರ್ಥಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿತು.
1972ರಲ್ಲಿ, ಯೋಮ್ ಕಿಪ್ಪೂರ್ ಯುದ್ಧದ ಸಮಯದಲ್ಲಿ ಇಸ್ರೇಲ್‌ಗೆ ಅಮೆರಿಕದ ಬೆಂಬಲಕ್ಕೆ ಪ್ರತಿಕ್ರಿಯೆಯಾಗಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯು (ಒಪೆಕ್​) ತೈಲ ನಿರ್ಬಂಧ ವಿಧಿಸಿತು. ಇದರಿಂದಾಗಿ ತೈಲ ಬೆಲೆಗಳು ಗಗನಕ್ಕೇರಿದವು.
ಪರಿಸ್ಥಿತಿ ಸ್ಥಿರಗೊಳಿಸಲು ಸೌದಿ ಅರೇಬಿಯಾ ಮತ್ತು ಇತರ ಒಪೆಕ್​ ದೇಶಗಳೊಂದಿಗೆ ಅಮೆರಿಕ ಒಪ್ಪಂದವನ್ನು ಮಾಡಿಕೊಂಡಿತು. ಈ ತೈಲವನ್ನು ಅಮೆರಿಕ ಡಾಲರ್‌ಗಳಲ್ಲಿ ಪ್ರತ್ಯೇಕವಾಗಿ ವ್ಯಾಪಾರ ಮಾಡಲಾರಂಭಿಸಲಾಯಿತು. ಇದಕ್ಕೆ ಪ್ರತಿಯಾಗಿ, ಅಮೆರಿಕ ಮಿಲಿಟರಿ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡಿತು. ಈ ಒಪ್ಪಂದವು ಪೆಟ್ರೋಡಾಲರ್ ವ್ಯವಸ್ಥೆಯ ಜನ್ಮಕ್ಕೆ ಕಾರಣವಾಯಿತು.
ಈ ಒಪ್ಪಂದದ ಮುಕ್ತಾಯದೊಂದಿಗೆ ಸೌದಿ ಅರೇಬಿಯಾ ಈಗ ಯುವಾನ್, ಯೂರೋ, ರೂಬಲ್ಸ್ ಮತ್ತು ಯೆನ್‌ನಂತಹ ಕರೆನ್ಸಿಗಳಿಗೆ ತೈಲವನ್ನು ಮಾರಾಟ ಮಾಡಲು ಮುಕ್ತವಾಗಿದೆ. ಅಲ್ಲದೆ, ಬಿಟ್‌ಕಾಯಿನ್‌ನಂತಹ ಡಿಜಿಟಲ್ ಕರೆನ್ಸಿಗಳನ್ನು ಪರಿಗಣಿಸಬಹುದಾಗಿದೆ.
ಈ ಬದಲಾವಣೆಯು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಪರ್ಯಾಯ ಕರೆನ್ಸಿಗಳನ್ನು ಬಳಸುವ ಪ್ರವೃತ್ತಿಯನ್ನು ವೇಗಗೊಳಿಸಬಹುದು ಹಾಗೂ ಅಮೆರಿಕ ಡಾಲರ್‌ನ ಜಾಗತಿಕ ಪ್ರಾಬಲ್ಯ ದುರ್ಬಲಗೊಳಿಸಬಹುದು.
ಸಗಟು ಬೆಲೆ ಸೂಚ್ಯಂಕ ಮೇ ತಿಂಗಳಲ್ಲಿ ಏರಿಕೆ: ಆಹಾರ, ಇಂಧನ ಬೆಲೆಗಳಲ್ಲಿ ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
