ನವದೆಹಲಿ:ಚಿಲ್ಲರೆ ಸಮಸ್ಯೆ ಹಿನ್ನೆಲೆಯಲ್ಲಿ ಮಾ.1ರಿಂದ ತನ್ನ ಎಟಿಎಂಗಳಲ್ಲಿ 2 ಸಾವಿರ ರೂ.ನೋಟು ಪೂರೈಕೆ ಸ್ಥಗಿತಗೊಳಿಸಲು ಇಂಡಿಯನ್ ಬ್ಯಾಂಕ್ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇನ್ನೂ ಹಲವು ಬ್ಯಾಂಕ್​ಗಳು ಇದೇ ಹಾದಿ ತುಳಿದಿವೆ.
ದೇಶಾದ್ಯಂತ ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ಪಡೆಯುವ ಗ್ರಾಹಕರು ಚಿಲ್ಲರೆ ಮಾಡಿಸಿಕೊಳ್ಳಲು ಪನಃ ಬ್ಯಾಂಕ್​ಗೆ ಬರುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹೊರಗೆ ಚಿಲ್ಲರೆ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸುವ ಸಲುವಾಗಿ ಬಹುತೇಕ ಬ್ಯಾಂಕ್​ಗಳು ತಮ್ಮ ಎಟಿಎಂಗಳಲ್ಲಿ 2 ಸಾವಿರ ರೂ. ನೋಟುಗಳ ಪೂರೈಕೆ ಸ್ಥಗಿತಗೊಳಿಸಲು ತೀರ್ವನಿಸಿರುವುದಾಗಿ ತಿಳಿದು ಬಂದಿದೆ. ಇದರ ಬದಲಿಗೆ -ಠಿ; 500 ಮತ್ತು -ಠಿ; 200 ಮುಖಬೆಲೆ ನೋಟಿನ ಸಂಖ್ಯೆಯನ್ನು ಹೆಚ್ಚಿಸಲಿವೆ. ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ವಿತರಣೆ ಸ್ಥಗಿತಗೊಳಿಸುವ ಕುರಿತಂತೆ ಆರ್​ಬಿಐ ಮತ್ತು ಹಣಕಾಸು ಸಚಿವಾಲಯ ಯಾವುದೇ ನಿರ್ದೇಶನ ನೀಡಿಲ್ಲ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ತನ್ನ ಎಟಿಎಂಗಳಲ್ಲಿ 200 ಮತ್ತು 500 ರೂ. ನೋಟುಗಳ ಸಂಖ್ಯೆ ಹೆಚ್ಚಿಸುತ್ತಿದೆ. ಈ ಬಗ್ಗೆ ಫೆ.17ರಂದೇ ತನ್ನ ಎಲ್ಲ ಶಾಖೆಗಳಿಗೂ ಸೂಚನೆ ನೀಡಿದೆ. ಎಟಿಎಂಗಳಲ್ಲಿನ 2 ಸಾವಿರ ರೂ. ನೋಟು ಜೋಡಿಸುವ ಕ್ಯಾಸೆಟ್​ಗಳನ್ನು ತೆಗೆಯಲು ಆದೇಶಿಸಲಾಗಿದ್ದು, ಇದರ ಬದಲಿಗೆ 200 ರೂ. ನೋಟುಗಳ ಕ್ಯಾಸೆಟ್​ಗಳ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಎಟಿಎಂ ಹೊರತಾಗಿ ಬ್ಯಾಂಕ್​ನ ಶಾಖೆಗಳಲ್ಲಿ ಹಣ ವಿತ್​ಡ್ರಾ ಮಾಡುವವರಿಗೆ 2 ಸಾವಿರ ರೂ. ನೋಟುಗಳ ನೀಡಿಕೆ ಮುಂದುವರಿಯಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಎರಡು ಸಾವಿರ ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷ ಆರ್​ಟಿಐ ಅರ್ಜಿಯೊಂದಕ್ಕೆ ನೀಡಿದ ಮಾಹಿತಿಯಲ್ಲಿ ಸ್ಪಷ್ಟಪಡಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eleven =
Remember me
