ನವದೆಹಲಿ:ಜಾಗತಿಕ ಆರ್ಥಿಕ ಸಂಕಷ್ಟದ ನಡುವೆ ಇಂದು ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್​ ಮೇಲೆ ವಿಶ್ವದ ದೃಷ್ಟಿ ನೆಟ್ಟಿದೆ. ದೇಶದಲ್ಲಿ ಬೆಲೆ ಏರಿಕೆಗಳಿಂದ ತತ್ತರಿಸುವ ಜನ ಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ​​ ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.
ಇಂದೆಲ್ಲ ಬಜೆಟ್​ ಪ್ರತಿಗಳಿದ್ದ ಸೂಟ್​ಕೇಸ್ ಹಿಡಿದುಕೊಂಡು ಸಂಸತ್ತಿಗೆ ಆಗಮಿಸಲಾಗುತ್ತಿತ್ತು. ಸೂಟ್​ಕೇಸ್​ ವಿದೇಶಿ ಸಂಸ್ಕೃತಿ ಆಗಿದ್ದರಿಂದ ಅದಕ್ಕೆ ಗುಡ್​ಬೈ ಹೇಳಿದ್ದ ನಿರ್ಮಲಾ ಸೀತಾರಾಮನ್​ ಸಾಂಪ್ರದಾಯಿಕ “ಬಹಿ ಖಾತಾ” ಹಿಡಿದು ಸಂಸತ್ತಿಗೆ ಆಗಮಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು.
2021ರಲ್ಲಿ ಬಹಿ ಖಾತಾ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ್ದ ನಿರ್ಮಲಾ ಸೀತಾರಾಮನ್​ ಬಜೆಟ್​ ಅನ್ನು ಟ್ಯಾಬ್​ ಮೂಲಕ ಮಂಡನೆ ಮಾಡಿದ್ದರು. ಈ ಮೂಲಕ ಬಜೆಟ್​ಗೆ ಡಿಜಿಟಲ್​ ಸ್ಪರ್ಶ ನೀಡಿದ್ದರು. ಅಲ್ಲದೆ, ಮೊದಲ ಬಾರಿಗೆ ಕಾಗದರಹಿತ ಬಜೆಟ್​ ಮಂಡನೆ ಮಾಡಿದ ಹೆಸರಿಗೆ ಪಾತ್ರರಾದರು. ಈ ಬಾರಿಯು ಅದನ್ನೆ ಮುಂದುವರಿಸಿರುವ ನಿರ್ಮಲಾ ಸೀತಾರಾಮನ್​ ಟ್ಯಾಬ್​ ಮೂಲಕ ಬಜೆಟ್​ ಮಂಡನೆ ಮಾಡಲಿದ್ದಾರೆ.(ಏಜೆನ್ಸೀಸ್​)
#WATCH| Delhi: Union Finance Minister Nirmala Sitharaman all set to present the#UnionBudget2023at 11am today.
This is the BJP government's last full Budget before the 2024 general elections.pic.twitter.com/8CFywfihvq
— ANI (@ANI)February 1, 2023

ಕೆಳಮನೆ ಪತ್ನಿ ಮೇಲ್ಮನೆ ಗಂಡ ಪರಾರಿ ಕೇಸ್​ಗೆ ಟ್ವಿಸ್ಟ್​: 10 ದಿನದ ಬಳಿಕ ಶೋಯಬ್ ಪ್ರತ್ಯಕ್ಷ, ಪತಿಗೆ ಶಾಕ್​ ಕೊಟ್ಟ ಶಾಜಿಯಾ

ಪೊಲೀಸ್​ ವೇಷ ಧರಿಸಿ ವೃದ್ಧೆಯ ಬಳಿ 7 ಸವರನ್​ ಚಿನ್ನ ದೋಚಿದ ಕರ್ನಾಟಕ ಗ್ಯಾಂಗ್​ ಕೇರಳದಲ್ಲಿ ಅರೆಸ್ಟ್!​

ಹೊತ್ತಿ ಉರಿದ ಬಹುಮಹಡಿ ಕಟ್ಟಡ: 14 ಮಂದಿ ದುರಂತ ಸಾವು, ಹಲವರ ಸ್ಥಿತಿ ಗಂಭೀರ, ಪ್ರಧಾನಿ ಮೋದಿ ಸಂತಾಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 15 =
Remember me
