ನವದೆಹಲಿ:ಎಂಐ ಸ್ಮಾರ್ಟ್​ಫೋನ್​ಗಳನ್ನು ತಯಾರಿಸುವ ಚೀನಾ ಮೂಲದ ಷಿಯೊಮಿ ಇಂಡಿಯಾ ಕಂಪನಿಯ 5 ಸಾವಿರ ಕೋಟಿಗೂ ಅಧಿಕ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ಫಾರಿನ್​ ಎಕ್ಸ್​​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​ (ಫೆಮಾ) 1999ರ ಪ್ರಕಾರ ಕೇಸ್​ ದಾಖಲಿಸಿಕೊಂಡು ಈ ಭಾರಿ ಮೊತ್ತದ ಆಸ್ತಿ ವಶಕ್ಕೆ ಪಡೆಯಲಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಷಿಯೊಮಿ ಕಂಪನಿಯು ಇಷ್ಟೊಂದು ಭಾರಿ ಮೊತ್ತದ ಅಕ್ರಮ ವಹಿವಾಟು ನಡೆಸಿದ ಶಂಕೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ. ಷಿಯೊಮಿ ಕಂಪನಿಯು ಭಾರತದಲ್ಲಿ 2014ರಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, 2015ರಿಂದ ಹಣ ಪಾವತಿ ಆರಂಭಿಸಿತ್ತು.
5,551.27 ಕೋಟಿ ರೂಪಾಯಿಗೆ ಸಮನಾದ ವಿದೇಶಿ ಕರೆನ್ಸಿಯನ್ನು ಷಿಯೊಮಿ ಇಂಡಿಯಾ ಸಂಸ್ಥೆಯು ತನ್ನ ಚೀನಿ ಮಾತೃಸಂಸ್ಥೆಯ ಸೂಚನೆ ಮೇರೆಗೆ ರಾಯಲ್ಟಿ ಎಂದು ಸಂಬಂಧವಿಲ್ಲದ ಮೂರು ಕಂಪನಿಗಳಿಗೆ ಪಾವತಿಸಿದೆ. ಅಲ್ಲದೆ ಹೀಗೆ ಹಣ ಪಾವತಿಸಲಾಗಿರುವ ವಿದೇಶಿ ಕಂಪನಿಗಳಿಂದ ಈ ಕಂಪನಿಯು ಯಾವುದೇ ಸೇವೆ ಪಡೆದಿಲ್ಲ ಹಾಗೂ ಈ ವಹಿವಾಟಿನ ವೇಳೆ ಬ್ಯಾಂಕ್​ಗಳಿಗೂ ದಾರಿ ತಪ್ಪಿಸುವಂಥ ಮಾಹಿತಿ ನೀಡಿದೆ ಎಂಬುದೂ ತಿಳಿದು ಬಂದಿದೆ. ಹೀಗಾಗಿ ಜಾರಿ ನಿರ್ದೇಶನಾಲಯವು ಈ ಕ್ರಮಕೈಗೊಂಡಿದ್ದು, ತನಿಖೆ ಜಾರಿಯಲ್ಲಿದೆ.
ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ಸಾವು..

ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
