ನವದೆಹಲಿ:ಸ್ವಂತ ಮನೆ ಕಟ್ಟುವುದು ಎಲ್ಲರ ಕನಸು. ಆದರೆ ಹಲವರಿಗೆ ಕನಸಾಗಿಯೇ ಉಳಿದಿದೆ. ಯಾಕೆಂದರೆ.. ಜಾಗ ದುಬಾರಿ, ಇಂತಹ ಪರಿಸ್ಥಿತಿಯಲ್ಲಿ ಕೆಲವರು ಚಿಕ್ಕ ಜಾಗದಲ್ಲಿಯೂ ಅದ್ಭುತವಾದ ಮನೆ ಕಟ್ಟುತ್ತಾರೆ. ಇಷ್ಟು ಚಿಕ್ಕ ಪ್ರದೇಶದಲ್ಲಿ ಮನೆ ನಿರ್ಮಾಣ ಎಷ್ಟು ಚೆನ್ನಾಗಿ ನಡೆದಿದೆ ಎಂದು ಯೋಚಿಸಿದರೆ ನೋಡುಗರಿಗೂ ಆಶ್ಚರ್ಯವಾಗುತ್ತದೆಯೇ? ಇಂತಹ ಎರಡು ಮನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮೊದಲ ಮನೆ ನಿರ್ಮಾಣವಾಗಿದ್ದು, ಕೇವಲ 4 ಅಡಿ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ. ಎರಡನೇ ಮನೆ ಎರಡು ಅಂತಸ್ತಿನದ್ದಾಗಿದ್ದು, ಎರಡು ಅಡಿ ಜಾಗದಲ್ಲಿ. ಈ ಕಟ್ಟಡದಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳ ವಿಡಿಯೋ ವೈರಲ್​​ ಆಗಿದೆ. ಆದರೆ ಈ ಕಟ್ಟಡ ಎಲ್ಲಿರುವುದು ಎನ್ನುವ  ಖಚಿತವಾದ ಮಾಹಿತಿಲ್ಲ.
A post shared by Rashid Khan (@rk_khan_facts)
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈ ವಿಶಿಷ್ಟ ಮನೆಯನ್ನು ತೋರಿಸಿ ಹೇಳುತ್ತಾನೆ. ನಾಲ್ಕು ಅಡಿ ಜಾಗದಲ್ಲಿ ಮೂರಂತಸ್ತಿನ ಮನೆ ಕಟ್ಟಿದ್ದಾರೆ. ಇಷ್ಟು ಚಿಕ್ಕ ಜಾಗದಲ್ಲಿ ನಿರ್ಮಿಸಿರುವ ಮನೆಯ ಮೇಲಕ್ಕೆ ಹೋಗಲು ಮೆಟ್ಟಿಲುಗಳೂ ಇವೆ. ಹೊರಗಿನಿಂದ ಬಾಗಿಲೂ ಇದೆ. ಇದೇ ರೀತಿಯ ಇನ್ನೊಂದು ಮನೆಯೂ ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ಇದು ಅನೇಕ ಜನರನ್ನು ಆಶ್ಚರ್ಯಗೊಳಿಸುತ್ತದೆ. 2 ಅಡಿ ಅಗಲದ ಕಟ್ಟಡದಲ್ಲಿ ಹಲವು ಅಂಗಡಿಗಳೂ ಇವೆ. ಅದರ ಮೇಲೆ ಎರಡು ಅಂತಸ್ತಿನ ಮನೆಯನ್ನೂ ನಿರ್ಮಿಸಲಾಗಿದೆ.
ಈ ಎರಡು ಮನೆಗಳನ್ನು ನೋಡಿ ನೆಟ್ಟಿಗರು ಹಾಗೂ ಸ್ಥಳೀಯರು ಶಾಕ್ ಆಗಿದ್ದಾರೆ. ಅಂತಹ ಕಟ್ಟಡವನ್ನು ನಿರ್ಮಿಸಿದವರು ಯಾರು? ಇಂಜಿನಿಯರ್ ಎಲ್ಲಿದ್ಯಪ್ಪಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಸೀರೆಯುಟ್ಟು ಪ್ಯಾರಾಗ್ಲೈಡಿಂಗ್ ಮಾಡಿದ 67 ವರ್ಷದ ಅಜ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
