ಹೈದರಾಬಾದ್​: ಎಷ್ಟೋ ಜನ ಕೂದಲೆಳೆಯ ಅಂತರದಲ್ಲಿ ಎಂಥೆಂಥದ್ದೋ ಅಪಾಯ-ಅಪಘಾತಗಳಿಂದ ಪಾರಾಗುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ತಲೆ ಕೂದಲು ಸಿಲುಕಿಕೊಂಡಿದ್ದರಿಂದಾಗಿಯೇ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದಾಳೆ.
ಹೈದರಾಬಾದ್​ನ ಬಿ-ಟೆಕ್​ ವಿದ್ಯಾರ್ಥಿನಿ ವರ್ಷಿಣಿ ಗುರುವಾರ ಗೋ-ಕಾರ್ಟಿಂಗ್ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾಳೆ. ಮೀರಪಟ್​ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ರಂಗುಡದಲ್ಲಿನ ಪ್ಲೇ ಜೋನ್​​ನಲ್ಲಿ ಆಕೆ ಗೋ-ಕಾರ್ಟಿಂಗ್ ಹೋದಾಗ, ಅದರ ಒಂದು ಚಕ್ರಕ್ಕೆ ಆಕೆಯ ಕೇಶ ಸಿಲುಕಿಕೊಂಡಿದೆ. ಪರಿಣಾಮ ಗೋ-ಕಾರ್ಟಿಂಗ್ ಅಪಘಾತಕ್ಕೀಡಾಗಿ ಆಕೆ ಜೀವ ಕಳೆದುಕೊಂಡಿದ್ದಾಳೆ.
ಅಪಘಾತದ ತೀವ್ರತೆಗೆ ಆಕೆ ಧರಿಸಿದ್ದ ಹೆಲ್ಮೆಟ್​ ಕೂಡ ಮುರಿದು ಹೋಗಿ, ಗಂಭೀರ ಗಾಯಕ್ಕೆ ಒಳಗಾಗಿದ್ದಳು. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಆಕೆಯ ಪಾಲಕರು ಗೋ-ಕಾರ್ಟಿಂಗ್​ನವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 20 =
Remember me
