ಥಾಣೆ:ಹೆತ್ತ ತಾಯಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಬಯಕೆಯಿಂದ ಲಂಡನ್​ನಲ್ಲಿ ನೆಲೆಸಿರುವ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿರಾಜ್ ಮುಂಗಲೆ, ಲಂಡನ್‌ನಿಂದ ಮಹಾರಾಷ್ಟ್ರದ ಥಾಣೆಯವರೆಗೆ ತಮ್ಮ ಎಸ್‌ಯುವಿ ಕಾರಿನಲ್ಲೇ ಬಂದ ಆಶ್ಚರ್ಯಕರ ಘಟನೆಯೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ದೊಡ್ಡ ಪ್ರಯಾಣವನ್ನು ಕೈಗೆತ್ತಿಕೊಂಡ ವಿರಾಜ್, 59 ದಿನಗಳಲ್ಲಿ 16 ದೇಶಗಳನ್ನು ದಾಟಿ ಬಂದಿದ್ದಾರೆ.
ಇದನ್ನೂ ಓದಿ:ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ: ಸಿಎಂ ಒಪ್ಪಿಗೆ
ಈ ಬಗ್ಗೆ ಸ್ವತಃ ಮುಂಗಲೆ ಅವರೇ ಮಾತನಾಡಿದ್ದು, “ನಾನು ಯುಕೆ, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಪೋಲೆಂಡ್, ಲಿಥುವೇನಿಯಾ, ಲಾಟ್ವಿಯಾ, ಎಸ್ಟೋನಿಯಾ, ರಷ್ಯಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಚೀನಾ, ಟಿಬೆಟ್, ನೇಪಾಳ ಮತ್ತು ಅಂತಿಮವಾಗಿ ಭಾರತದ ಮೂಲಕ ಇಲ್ಲಿಯವರೆಗೆ 18,300 ಕಿ.ಮೀ ದೂರ ಕ್ರಮಿಸಿದ್ದೇನೆ. ಈ ಪ್ರಯಾಣದಲ್ಲಿ ನನ್ನೊಂದಿಗೆ ನೇಪಾಳದ ಸ್ನೇಹಿತ ರೋಶನ್ ಶ್ರೇಷ್ಠಾ ಕೂಡ ಜತೆಯಾಗಿದ್ದರು. ಅವರು ನೇಪಾಳದ ಕಠ್ಮಂಡುವಿನಲ್ಲಿ ಇಳಿದುಕೊಂಡರು. ನಾನು ನನ್ನ ತವರಿಗೆ ಬಂದೆ” ಎಂದಿದ್ದಾರೆ.
“ಈ ಜರ್ನಿ ಕೈಗೊಂಡಾಗ ಬಹಳ ಉತ್ಸುಕನಾಗಿದ್ದೆ. ದಿನಕ್ಕೆ ಸರಿಸುಮಾರು 400-600 ಕಿ.ಮೀ ಗಾಡಿ ಓಡಿಸಿದ್ದೀನಿ. ಸಾಧ್ಯವಾದ ಕಡೆ 1,000 ಕಿ.ಮೀ ಕೂಡ ತಲುಪಿದ್ದೀನಿ. ಯಾವಾಗಲೂ ರಾತ್ರಿ ಚಾಲನೆಯನ್ನು ತಪ್ಪಿಸುವ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೆ. ಇದಕ್ಕಾಗಿ ನನ್ನ ಕೆಲಸಕ್ಕೆ ಎರಡು ತಿಂಗಳ ಕಾಲ ರಜೆಯನ್ನು ತೆಗೆದುಕೊಂಡಿದ್ದೇನೆ. ಪ್ರಯಾಣಿಸಿದ ಪ್ರತಿಯೊಂದು ದೇಶದಿಂದಲೂ ಕಾನೂನು ಅನುಮತಿಗಳನ್ನು ಪಡೆದೇ ವಾಹನ ಚಲಾಯಿಸಿಕೊಂಡು ಬಂದಿದ್ದೇನೆ” ಎಂದರು.
ಇದನ್ನೂ ಓದಿ:ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಾಗರ್ ಈಶ್ವರ ಖಂಡ್ರೆ
“ನನ್ನ ಪ್ರಯಾಣ ಬಹಳ ಕಠಿಣವಾಗಿತ್ತು. ಹಾದಿಯ ಮಧ್ಯೆ ಹಿಮ ಮತ್ತು ಚಳಿ ಸೇರಿದಂತೆ ವಿಪರೀತ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿದೆ. ಜರ್ನಿಯ ಪೂರ ದೊಡ್ಡ ದೊಡ್ಡ ಸವಾಲುಗಳೇ ಇತ್ತು” ಎಂದು ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

ನ್ಯೂಯಾರ್ಕ್‌ ಟೈಮ್ಸ್ ಸ್ಕ್ವೇರ್‌ನಲ್ಲಿ ರಾರಾಜಿಸಿದ ವಿರಾಟ್ ಕೊಹ್ಲಿ ಪ್ರತಿಮೆ; ಇದಕ್ಕೆ ಹೇಳೋದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − six =
Remember me
