ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ಲಾಕ್​ಡೌನ್​ ಮೇ 3ರವರೆಗೆ ವಿಸ್ತರಣೆಯಾಗುತ್ತದೆ ಎಂದು ಘೋಷಿಸಿದ್ದಾರೆ.
ಈ 21 ದಿನಗಳ ಲಾಕ್​ಡೌನ್​​ನಲ್ಲಿಯೇ ಅದೆಷ್ಟೋ ಜನರು ಹೊಟ್ಟೆಗಿಲ್ಲದೆ ಕಷ್ಟಪಡುತ್ತಿದ್ದಾರೆ. ಇನ್ನೂ ಮೇ 3ರವರೆಗೆ ಹೇಗೆ ಎಂಬ ಚಿಂತೆ ಸಹಜವಾಗಿ ಜನರಲ್ಲಿ ಮೂಡಿದೆ.
ಈಗ ಗೃಹಸಚಿವ ಅಮಿತ್​ ಷಾ ಅವರು ಟ್ವೀಟ್​ ಮೂಲಕ ಜನರಿಗೆ ಅಭಯ ನೀಡಿದ್ದು, ಯಾರೂ ಆತಂಕ ಪಡುವುದು ಬೇಡ. ದಿನಸಿ, ಔಷಧ ಸೇರಿ ಅಗತ್ಯ ವಸ್ತುಗಳ ಪೂರೈಕೆ ನಿಲ್ಲುವುದಿಲ್ಲ. ಸಾಕಷ್ಟು ದಾಸ್ತಾನಿದೆ ಎಂದಿದ್ದಾರೆ.
ಲಾಕ್​ಡೌನ್​ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಅಮಿತ್​ ಷಾ, ಜನರು ಆಹಾರ, ಅಗತ್ಯ ವಸ್ತುಗಳು ಸಿಗದೆ ಕಷ್ಟಪಡುತ್ತಿದ್ದಾರಾ? ಎಂದು ಸೂಕ್ತ ಪರಿಶೀಲನೆ ನಡೆಸಿ ಎಂದೂ ಹೇಳಿದ್ದಾರೆ.ಹಾಗೇ ಬಡಜನರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಇದು ಕಷ್ಟದ ಸಂದರ್ಭವಾಗಿದ್ದು, ಹಣವಂತರು, ಧನಿಕರು ಬಡಬಗ್ಗರಿಗೆ ಸಹಾಯ ಹಸ್ತ ಚಾಚಿ ಎಂದಿದ್ದಾರೆ. ಬಡವರಿಗೆ ಸಹಾಯ ಮಾಡಲು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಹಾಗೇ ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರದೊಂದಿಗೆ ಒಗ್ಗಟ್ಟಾಗಿ ನಿಂತಿರುವ ಎಲ್ಲ ರಾಜ್ಯಸರ್ಕಾರಗಳನ್ನೂ ಅಮಿತ್​ ಷಾ ಹೊಗಳಿದ್ದಾರೆ. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಭದ್ರತಾ ಪಡೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್​ 10,000ದ ಗಡಿ ದಾಟಿದ್ದು, 339 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲದ ಕಾರಣ ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 20 =
Remember me
