ಲಖನೌ:ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಅಕ್ಟೋಬರ್​ 3 ರಂದು ಎಂಟು ಜನರು ಮೃತಪಟ್ಟಿರುವ ಉದ್ವಿಗ್ನ ಪ್ರಸಂಗದ ತನಿಖೆಗೆ ಯುಪಿ ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. ಈ ಏಕಸದಸ್ಯ ಸಮಿತಿಗೆ ಅಲಹಾಬಾದ್​ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್​ ಕುಮಾರ್​ ಶ್ರೀವಾಸ್ತವ ಅವರನ್ನು ನೇಮಿಸಲಾಗಿದೆ.
ಅ.3 ರ ಭಾನುವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಮಗ ಆಶಿಶ್ ಮಿಶ್ರಗೆ ಸೇರಿದ ಕಾರು ಪ್ರತಿಭಟನಾನಿರತ ರೈತರ ಮೇಲೆ ಹಾಯಿತು. ಇದರಿಂದಾಗಿ 4 ಜನ ರೈತರು ಮೃತಪಟ್ಟರು. ನಂತರ ರೊಚ್ಚಿಗೆದ್ದ ರೈತರು ಕಾರಿನ ಚಾಲಕ ಮತ್ತು ಮೂವರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಕೊಂದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ರಂಗೇರಿದ ಸಿಂದಗಿ ಉಪ ಚುನಾವಣೆ: ಕಾಂಗ್ರೆಸ್ ರ‌್ಯಾಲಿಗೆ ಮಕ್ಕಳ ಬಳಕೆ
ಈ ಘಟನೆಯ ಬಗ್ಗೆ ಎರಡು ತಿಂಗಳೊಳಗೆ ತನಿಖೆ ನಡೆಸಿ ನೈಜ ಚಿತ್ರಣ ನೀಡಲು ತನಿಖಾ ಸಮಿತಿಗೆ ಸೂಚಿಸಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ, ಅ.6 ರಂದು ಆದೇಶ ಹೊರಡಿಸಿದ್ದಾರೆ.
ಲಖೀಂಪುರ್​ ಖೇರಿ ಕೇಸ್​: ಕೇಂದ್ರ ಸಚಿವರ ಪುತ್ರನಿಗೆ ಪೊಲೀಸ್​ ಸಮನ್ಸ್

ಕರೊನಾ ಸವಾಲು ಇನ್ನೂ ಮುಗಿದಿಲ್ಲ; ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ ಐದು ರಾಜ್ಯಗಳಿವು

ಮಗಳ ಪಾಡು ನೋಡಲಾಗದೆ ಪ್ರಾಣ ತೆತ್ತ ತಂದೆ! ಹಲವು ದಿನಗಳ ಕಾಲ ಮೊಬೈಲ್​ನಲ್ಲೇ ಅಡಗಿದ್ದ ಸತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
