ಕೊಚ್ಚಿ:ಇದು ಡಯಾಬಿಟಿಸ್ ಜಮಾನಾ. ಮಧುಮೇಹ ಇದ್ದವರು ಮಾತ್ರವಲ್ಲ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರದ್ದೂ ಕೂಡ ಒಂದೇ ಮಾತು, ಶುಗರ್​ ಲೆಸ್ ಅಥವಾ ಲೆಸ್ ಶುಗರ್. ಸಕ್ಕರೆ ಹಾಕದೆ ಕೊಡಿ, ಇಲ್ಲವೇ ಸಕ್ಕರೆ ಕಡಿಮೆ ಹಾಕಿ ಎನ್ನುವ ಈ ಕಾಲದಲ್ಲಿ ಇಲ್ಲೊಬ್ಬ ಗ್ರಾಹಕ ಚಹಾಗೆ ಹಾಕಿದ ಸಕ್ಕರೆ ಕಡಿಮೆಯಾಯ್ತು ಎಂಬ ಕಾರಣಕ್ಕೆ ಹೋಟೆಲ್​ ಮಾಲೀಕನಿಗೇ ಚಾಕು ಚುಚ್ಚಿದ್ದಾನೆ.
ಕೇರಳದ ಮಲ್ಲಪ್ಪುರಂ ಎಂಬಲ್ಲಿನ ತನೂರ್ ಬಳಿ ಚಿಕ್ಕ ಹೋಟೆಲ್​ನಲ್ಲಿ ಈ ಘಟನೆ ನಡೆದಿದೆ. ಸುಬೇರ್ ಎಂಬಾತ ಮಂಗಳವಾರ ಬೆಳಗ್ಗೆ ಚಹಾ ಕುಡಿಯಲೆಂದು ಇಲ್ಲಿನ ಹೋಟೆಲೊಂದಕ್ಕೆ ತೆರಳಿದ್ದಾನೆ. ಆಗ ತನಗೆ ಕೊಟ್ಟ ಚಹಾದಲ್ಲಿ ಸಕ್ಕರೆ ಕಡಿಮೆ ಇದೆ ಎಂಬ ಕಾರಣಕ್ಕೆ ಸುಬೇರ್ ಮತ್ತು ಹೋಟೆಲ್ ಮಾಲೀಕ ಮನಾಫ್​ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತೆರಳಿ ಕೋಪೋದ್ರಿಕ್ತನಾದ ಸುಬೇರ್​ ಹೋಟೆಲ್ ಮಾಲಿಕನಿಗೇ ಚಾಕು ಚುಚ್ಚಿದ್ದಾನೆ.
ಗಂಭೀರ ಗಾಯಗೊಂಡ ಮನಾಫ್​​ನನ್ನು ಆರಂಭದಲ್ಲಿ ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಬಳಿಕ ಕೊಝಿಕೋಡ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಆರೋಪಿ ಸುಬೇರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 18 =
Remember me
