ನವದೆಹಲಿ:ನೆರೆಯ ಬಾಂಗ್ಲಾದೇಶದಿಂದ ಭಾರತಕ್ಕೆ ಸಾಕಷ್ಟು ಮಂದಿ ಅಕ್ರಮವಾಗಿ ನುಸುಳುತ್ತಿರುವುದು ಗೊತ್ತೇ ಇದೆ. ಅದು ಹೇಗೆ ಎಂಬುದನ್ನು “ಡಿಎಚ್​ ಟ್ರಾವೆಲಿಂಗ್ ಇನ್ಫೋ” ಹೆಸರಿನ ಬಾಂಗ್ಲಾದೇಶದ ಯೂಟ್ಯೂಬರ್‌ ವಿವರಿಸಿರುವ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ. ಈ ಸಂಗತಿ ಇದೀಗ ಭಾರತೀಯ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಲು ಜನರಿಗೆ ಯಾವುದೇ ದಾಖಲೆ, ವೀಸಾ ಅಥವಾ ಪಾಸ್‌ಪೋರ್ಟ್ ಅಗತ್ಯವಿಲ್ಲ ಎಂದು​ ವೀಡಿಯೊದಲ್ಲಿ ಹೇಳಿರುವ ಯೂಟ್ಯೂಬರ್​, ಭಾರತದ ಗಡಿಯಲ್ಲಿರುವ ಬಾಂಗ್ಲಾದೇಶದ ಸಿಲ್ಹೆಟ್ ವಿಭಾಗದ ಸುನಮ್‌ಗಂಜ್ ಜಿಲ್ಲೆಯಲ್ಲಿ ವಿಡಿಯೋ ರೆಕಾರ್ಡ್ ಸಹ ಮಾಡಿದ್ದಾನೆ.
ವಿಡಿಯೋದಲ್ಲಿ ಭಾರತವನ್ನು ಪ್ರವೇಶಿಸುವ ಮಾರ್ಗವನ್ನು ತೋರಿಸಿದ್ದಾನೆ. ಅಲ್ಲದೆ, ಈ ಮಾರ್ಗವನ್ನು ತೆಗೆದುಕೊಳ್ಳುವವರು ಬಿಎಸ್ಎಫ್ ಅಧಿಕಾರಿಗಳೊಂದಿಗೆ ಕೆಲವೊಮ್ಮೆ ವ್ಯವಹರಿಸುವಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.
ವಿಡಿಯೋ ಮುಂದುವರಿದಂತೆ, ಭಾರತದ ಗಡಿಯಲ್ಲಿರುವ ಬಿಎಸ್ಎಫ್ ಶಿಬಿರವನ್ನು ತೋರಿಸುತ್ತಾನೆ ಮತ್ತು ದೇಶವನ್ನು ಪ್ರವೇಶಿಸಲು ಬಳಸಿದ ಕೆಲವು ಸುರಂಗ ಮಾರ್ಗವನ್ನು ತೋರಿಸುತ್ತಾನೆ. ಅಂತಿಮವಾಗಿ ಯೂಟ್ಯೂಬರ್​, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಾಂಗ್ಲಾದೇಶದ ಪ್ರತಿಷ್ಠೆಯನ್ನು ಹಾಳು ಮಾಡಬೇಡಿ ಸಂದೇಶ ನೀಡಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಂತರ 2,00,000 ವೀಕ್ಷಣೆಗಳು ಹಾಗೂ 7,000 ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.

A post shared by Jist (@jist.news)

ಅನೇಕರು ನೆಟ್ಟಿಗರು ಗಡಿಯ ಸಮಸ್ಯೆಯ ಕುರಿತು ತಮ್ಮ ಕಳವಳವನ್ನು ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ್ದಾರೆ. ಬಿಎಸ್‌ಎಫ್‌ಗೆ ಇದು ತಿಳಿದಿಲ್ಲವೇ? ಯೂಟ್ಯೂಬರ್‌ಗೆ ದಾರಿ ತಿಳಿದಿದ್ದರೆ, ಪ್ರತಿಯೊಬ್ಬರೂ ಅದನ್ನು ಮಾಡುತ್ತಾರೆ. ಗಡಿಯಲ್ಲಿ ಬಿಎಸ್‌ಎಫ್ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್​)
ಸ್ಟಾರ್​ ಮಕ್ಕಳನ್ನು ನೋಡಿಕೊಳ್ಳಲು ಈಕೆ 2.5 ಲಕ್ಷ ರೂ. ಪಡೆಯುತ್ತಾರಾ? ಕೊನೆಗೂ ಸಂಬಳ ರಹಸ್ಯ ಬಿಚ್ಚಿಟ್ಟ ಲಲಿತಾ!

ಅಪ್ಪ ನಾನು ಐಎಎಸ್​ ಅಧಿಕಾರಿ ಆಗ್ತೀನಿ! ಯುವತಿಯ ಕನಸನ್ನು ಬಲಿ ಪಡೆದ ನೀರು, ಈ ಸಾವು ನ್ಯಾಯವೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
