ನವದೆಹಲಿ:ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಈ ಕಳೆದ ಮಾರ್ಚ್​ನಲ್ಲಿ ಶೇ.8.5 ಬಡ್ಡಿ ಪಾವತಿಸುವುದಾಗಿ ಘೋಷಿಸಿತ್ತು. ಆದರೆ, ಕರೊನಾ ಕಾರನದಿಂದಾಗಿ ಭವಿಷ್ಯ ನಿಧಿ ಸಂಸ್ಥೆಯ ಹೂಡಿಕೆಗಳಿಗೆ ನಿರೀಕ್ಷಿಸಿದಷ್ಟು ಪ್ರತಿಫಲ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಬಡ್ಡಿ ದರ ಇಳಿಕೆಯಾಗಬಹುದು ಎಂದೇ ಹೇಳಲಾಗಿತ್ತು.
ಕಾರ್ಮಿಕರ ಭವಿಷ್ಯ ನಿಧಿಗೆ ಬಡ್ಡಿ ಪಾವತಿ ಕುರಿತಾಗಿ ಬುಧವಾರ ಸಂಸ್ಥೆಯ ಟ್ರಸ್ಟಿಗಳ ಸಭೆ ನಡೆಯಿತು. ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಜತೆಗೆ, ಸಂಸ್ಥೆಯ ಚಂದಾದಾರರಿಗೆ ಭರವಸೆ ನೀಡಿದ್ದಂತೆ ಶೇ.8.5 ಬಡ್ಡಿದರದಲ್ಲೇ ಹಣ ಪಾವತಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಆದರೆ, ಈ ಮೊತ್ತ ಎರಡು ಕಂತುಗಳಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ;ರಕ್ಷಣಾ ಇಲಾಖೆ ಭೂಮಿ ಮೆಟ್ರೋಗೆ ಮಾರಾಟ; ಚರ್ಚ್​ ಆಫ್​ ಸೌತ್​ ಇಂಡಿಯಾದ 59.52 ಕೋಟಿ ರೂ. ಇ.ಡಿ. ವಶಕ್ಕೆ
ಹೌದು…! ಸದ್ಯ ಶೇ8.15 ದರದಲ್ಲಿ ಬಡ್ಡಿ ಪಾವತಿಸಿದರೆ, ಡಿಸೆಂಬರ್​ ತಿಂಗಳಲ್ಲಿ ಇನ್ನುಳಿದ ಶೇ.0.35 ಮೊತ್ತವನ್ನು ನೀಡಲು ಸಭೆ ನಿರ್ಧರಿಸಿದೆ. ಕಳೆದ ವರ್ಷ ಭವಿಷ್ಯ ನಿಧಿ ಸಂಸ್ಥೆಯ 6 ಕೋಟಿ ಚಂದಾದಾರರಿಗೆ ಶೇ.8.5 ಬಡ್ಡಿ ದರ ಪಾವತಿಸಿದ ಬಳಿಕ ಹೆಚ್ಚುವರಿಯಾಗಿ 700 ಕೋಟಿ ರೂ. ಉಳಿಕೆಯಾಗಿತ್ತು. ಅದಕ್ಕೂ ಹಿಂದಿನ ವರ್ಷ ಈ ಮೊತ್ತ 349 ಕೋಟಿ ರೂ. ಆಗಿತ್ತು.
ಈ ಬಾರಿ ಸಂಸ್ಥೆ ವಿವಿಧ ಹೂಡಿಕೆಗಳಿಂದ ಸಂಸ್ಥೆ 3,500 ಕೋಟಿ ರೂ.ಗಳಿಂದ 4,000 ಕೋಟಿ ರೂ.ವರೆಗೆ ಆದಾಯ ಪಡೆಯುವ ನಿರೀಕ್ಷೆ ಹೊಂದಿತ್ತು. ಆದರೆ, ಕೋವಿಡ್​ನಿಂದಾಗಿ ನಿರೀಕ್ಷಿತ ಮೊತ್ತ ಸಂಗ್ರಹವಾಗಿಲ್ಲ. ಹೀಗಾಗಿ ಎರಡು ಕಂತುಗಳಲ್ಲಿ ಹಣ ಪಾವತಿಸಲಿದೆ.
ಎದೆಹಾಲಿಗೆ ಮುಗಿಬಿದ್ದ ಪುರುಷರು; ತೂಕ ಇಳಿಕೆ, ಶಕ್ತಿ ವರ್ಧನೆ ಕಾರಣ..! ತಜ್ಞರು ಹೇಳೋದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
