|ರಾಘವ ಶರ್ಮ ನಿಡ್ಲೆನವದೆಹಲಿ
ದೇಶದಲ್ಲಿ ಎಲ್ಲಾ ಧರ್ಮ, ಪಂಥ, ಮತಕ್ಕೆ ಸೇರಿದ ನಾಗರಿಕರನ್ನು ಸಮಾನರಾಗಿ ಕಾಣಬೇಕೆಂಬ ಸದುದ್ದೇಶದಿಂದಲೇ ಸಂವಿಧಾನವು ಸಮಾನತೆಯ ಹಕ್ಕು, ಧಾರ್ವಿುಕ ಹಕ್ಕುಗಳನ್ನು ನೀಡಿದೆ. ಆದರೆ, ಧಾರ್ವಿುಕ ಹಕ್ಕಿನ ಆಚರಣೆ ಸಮಾನತೆಯ ಭಾವನೆಗೆ ಘಾಸಿ ಉಂಟು ಮಾಡಿದಾಗ ಸರ್ಕಾರದ ಮಧ್ಯಪ್ರವೇಶ ಸ್ತುತ್ಯರ್ಹವೇ? ಧಾರ್ವಿುಕ ಹಕ್ಕು ಸಮಾನತೆಯ ಹಕ್ಕಿಗಿಂತ ಮುಖ್ಯವೇ ಅಥವಾ ಧಾರ್ವಿುಕ ಹಕ್ಕಿನ ಮುಂದೆ ಸಮಾನತೆಯ ಹಕ್ಕು ಮೇಲುಗೈ ಸಾಧಿಸುತ್ತದೆಯೇ? ಧಾರ್ವಿುಕ ಹಕ್ಕು ಮತ್ತು ಸಮಾನತೆಯ ಮಧ್ಯೆ ಸಂಘರ್ಷವೇರ್ಪಟ್ಟಾಗ ಅದನ್ನು ಇತ್ಯರ್ಥಪಡಿಸುವುದು ಹೇಗೆ? ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಭಾರೀ ಚರ್ಚೆಗೀಡಾಗಿರುವ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಧಾರಣೆ ವಿವಾದ ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಗುರುವಾರ ಸುಪ್ರೀಂ ಕೋರ್ಟ್​ನ ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ. ಸುಧಾಂಶು ಧುಲಿಯಾ ಒಳಗೊಂಡ ದ್ವಿಸದಸ್ಯ ಪೀಠ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ಹಿಜಾಬ್​ನಂತಹ ಸೂಕ್ಷ್ಮ ವಿಚಾರಗಳನ್ನು ಇಬ್ಬರು ನ್ಯಾಯಮೂರ್ತಿಗಳು ವಿಚಾರಣೆ ಮಾಡಬಾರದು, ಬದಲಿಗೆ ಪ್ರಕರಣವನ್ನು ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ಕೈಗೆತ್ತಿಕೊಳ್ಳಬೇಕು ಎಂದು ಹಿಜಾಬ್ ಧಾರಣೆಗೆ ಅವಕಾಶ ಬೇಕೆಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರ ಪರ ವಕೀಲರು ಒತ್ತಾಯಿಸಿದ್ದರು. ಆದರೆ, ಅದಕ್ಕೆ ಮಾನ್ಯತೆ ನೀಡದ ನ್ಯಾಯಪೀಠ, ಸುದೀರ್ಘ ವಿಚಾರಣೆ ನಡೆಸಿ ಎರಡೂ ಕಡೆ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿ, ತೀರ್ಪು ಕಾದಿರಿಸಿದೆ.
ಹಿಜಾಬ್ ಬೇಡ ಎನ್ನುತ್ತಿಲ್ಲ. ಆದರೆ….:ಇಡೀ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಬೇಡಿ ಎಂದು ರಾಜ್ಯ ಸರ್ಕಾರವೇನೂ ಹೇಳುತ್ತಿಲ್ಲ. ಶಾಲೆ, ಕಾಲೇಜುಗಳ ತರಗತಿ ಕೋಣೆಯಲ್ಲಿ ಹಿಜಾಬ್​ಗೆ ಅನುಮತಿಯಿಲ್ಲ. ಶಾಲಾ ಆವರಣದಿಂದ ಹೊರಗೆ ತಮ್ಮಿಚ್ಛೆಯ ಉಡುಗೆ ತೊಡಬಹುದು. ಶಾಲೆ ಎಂಬುದು ಜಾತ್ಯತೀತ ಸಿದ್ಧಾಂತ ಪ್ರತಿಪಾದಿಸುವ ವಿಶಿಷ್ಟ ಸಾರ್ವಜನಿಕ ಸ್ಥಳ ಮತ್ತು ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ಸಮಾನರಾಗಿದ್ದು, ಧರ್ವಚರಣೆಯ ಪ್ರದರ್ಶನಕ್ಕೆ ವೇದಿಕೆಯಲ್ಲ. ಮೇಲಾಗಿ, ಸಮವಸ್ತ್ರ ನಿಯಮಕ್ಕೆ ಬದ್ಧರಾಗಿರಬೇಕೆಂದು ಸರ್ಕಾರ ವಾದಿಸಿದೆ. ಹಿಜಾಬ್ ಧರಿಸುವುದು ಧಾರ್ವಿುಕ ಹಕ್ಕೆಂದು ಹೇಳಬಹುದು. ಆದರೆ, ಶಾಲೆಯಂತಹ ಪರಿಸರದಲ್ಲಿ ಧಾರ್ವಿುಕ ಹಕ್ಕಿಗಿಂತ ಸಮಾನತೆಯ ಹಕ್ಕಿಗೇ ಪ್ರಾಮುಖ್ಯತೆ ಹೆಚ್ಚು ಎಂದು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಸುಪ್ರೀಂ ಕೋರ್ಟ್ ಗಮನಸೆಳೆದಿದ್ದಾರೆ.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯ ವ್ಯಾಪ್ತಿಯಲ್ಲಿಲ್ಲ ಎಂದು ತೀರ್ಪು ನೀಡಿದ್ದ ರಾಜ್ಯ ಹೈಕೋರ್ಟ್, ಹಿಜಾಬ್ ಧರಿಸದ್ದಕ್ಕೆ ಶಿಕ್ಷೆ ಅಥವಾ ದಂಡ ವಿಧಿಸುವ ಬಗ್ಗೆ ಕುರಾನ್​ನಲ್ಲಿ ಯಾವುದೇ ಉಲ್ಲೇಖವಿಲ್ಲ. ಹಿಜಾಬ್ ಧರಿಸದವರು ಪಾಪಿಗಳಾಗುತ್ತಾರೆ, ಇಸ್ಲಾಂ ತನ್ನ ವೈಭವ ಕಳೆದುಕೊಳ್ಳುತ್ತದೆ ಮತ್ತು ಅದು ಧರ್ಮವಾಗಿಯೂ ಉಳಿದುಕೊಳ್ಳದು ಎಂದೇನಲ್ಲ ಎಂದು ಹೇಳಿತ್ತು. ಆದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಿಜಾಬ್ ಅಗತ್ಯ ಆಚರಣೆ ಹೌದೇ ಅಲ್ಲವೇ ಎಂಬ ಬಗ್ಗೆ ರ್ಚಚಿಸಲು ಹೋಗಿಲ್ಲ. ಮೇಲಾಗಿ, ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವೇ ಅಲ್ಲವೇ ಎನ್ನುವುದರ ಕುರಿತು ಹೈಕೋರ್ಟ್ ತೀರ್ವನಿಸುವ ಅಗತ್ಯವಿರಲಿಲ್ಲ ಎಂದೂ ನ್ಯಾ. ಸುಧಾಂಶು ಧುಲಿಯಾ ವಿಚಾರಣೆ ಸಂದರ್ಭದಲ್ಲಿ ಮೌಖಿಕ ಅನಿಸಿಕೆ ಹೊರಹಾಕಿದ್ದರು. ಹೀಗಾಗಿ, ಸರ್ಕಾರಿ ಶಾಲೆಯಲ್ಲಿ ಹಿಜಾಬ್​ಗೆ ಅವಕಾಶ ಇರಬೇಕೆ ಬೇಡವೇ ಎಂಬ ಸೀಮಿತ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ವಾದಗಳನ್ನು ಆಲಿಸಿದೆ. ವಿಚಾರಣೆ ವೇಳೆ ಕೆಲ ವಕೀಲರು ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿ, ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದ್ದರು. ಶಾಲೆಯಲ್ಲಿ ಹಿಜಾಬ್ ಬೇಕೆ ಬೇಡವೇ ಎಂದು ತೀರ್ವನಿಸುವ ಮುನ್ನ ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆ ಹೌದೇ ಅಲ್ಲವೇ ಎಂಬುದನ್ನು ತೀರ್ವನಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟದ್ದೇ ಆದಲ್ಲಿ, ಆಗ ಈ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಇಲ್ಲವಾದಲ್ಲಿ ಶಾಲೆಯಲ್ಲಿ ಹಿಜಾಬ್​ಗೆ ಅವಕಾಶ ಇರಬೇಕೆ ಬೇಡವೇ ಎಂಬ ಸೀಮಿತ ವಿಚಾರದ ಮೇಲೆ ತೀರ್ಪು ಹೊರಬೀಳಬಹುದು ಎನ್ನಲಾಗಿದೆ.
ಅಗತ್ಯ ಧಾರ್ವಿುಕ ಆಚರಣೆ ಎಂದರೆ…:ಸಂವಿಧಾನದ 25ನೇ ವಿಧಿಯು ಆತ್ಮಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮವನ್ನು ಮುಕ್ತವಾಗಿ ಆಚರಿಸುವ, ಪ್ರಚಾರ ಮಾಡುವ ಹಕ್ಕು ನೀಡಿದೆ. ಆದರೆ, ಕಾನೂನು ಸುವ್ಯವಸ್ಥೆ, ಆರೋಗ್ಯ, ನೈತಿಕತೆ ಹಾಗೂ ಇತರೆ ಮೂಲಭೂತ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಧಾರ್ವಿುಕ ಹಕ್ಕು ಸಂಪೂರ್ಣ ಹಕ್ಕಲ್ಲ. ಹಾಗಿದ್ದರೂ, ‘ಧರ್ಮದ ಅಗತ್ಯ ಆಚರಣೆ’ಗಳಿಗೆ ನ್ಯಾಯಾಲಯಗಳು ಸಾಂವಿಧಾನಿಕ ರಕ್ಷಣೆ ನೀಡಿವೆ. ಅಗತ್ಯ ಆಚರಣೆ ಎಂದರೆ ಅದು ನಿರ್ದಿಷ್ಟ ಧರ್ಮವೊಂದರ ಮೂಲಭೂತ ಆಚರಣೆಗಳ ಒಂದು ಭಾಗ. ಒಂದುವೇಳೆ ಅದನ್ನು ಅನುಸರಿಸದಿದ್ದರೆ ಧರ್ಮದ ತಳಹದಿಗೇ ಹಾನಿ ಎಂದು ನಂಬಲಾಗಿದೆ. ಅಗತ್ಯ ಆಚರಣೆಗಳನ್ನು ನಿರಾಕರಿಸುವುದು ಸಂವಿಧಾನದ 25ನೇ ವಿಧಿಯನ್ನು ಉಲ್ಲಂಘನೆಗೆ ಸಮ ಎಂದು ಪ್ರತಿಪಾದಿಸಲಾಗಿದೆ. ಧರ್ಮದ ಅಗತ್ಯ ಆಚರಣೆ ನಿರ್ಧರಿಸಲು ಹಲವು ಸಂದರ್ಭಗಳಲ್ಲಿ ನ್ಯಾಯಾಲಯಗಳು ಧಾರ್ವಿುಕ ಗ್ರಂಥ, ಪಠ್ಯ, ಅನುಯಾಯಿಗಳ ಪ್ರಾಯೋಗಿಕ ನಡವಳಿಕೆ ಹಾಗೂ ಧರ್ಮ ಹುಟ್ಟಿದ ಸಂದರ್ಭದಲ್ಲಿ ನಿರ್ದಿಷ್ಟ ಆಚರಣೆ ಅಸ್ತಿತ್ವದಲ್ಲಿ ಇತ್ತೇ ಇಲ್ಲವೇ ಎಂಬುದನ್ನೆಲ್ಲಾ ಆದ್ಯತೆಗೆ ತೆಗೆದುಕೊಂಡು ತೀರ್ಪು ನೀಡಿದೆ. ಹೀಗಾಗಿ, ಹಿಜಾಬ್ ಅನ್ನು ಸುಪ್ರೀಂ ಕೋರ್ಟ್ ಹೇಗೆ ಪರಿಗಣಿಸುತ್ತದೆ ಎನ್ನುವುದು ಕುತೂಹಲಕರ.
ಶಿರೂರು ಮಠ, ಅಜ್ಮೀರ್ ದರ್ಗಾ ಪ್ರಕರಣದ ಉದಾಹರಣೆ:ಅಗತ್ಯ ಧಾರ್ವಿುಕ ಆಚರಣೆಗಳಿಗೆ (ಛಿಠಠಛ್ಞಿಠಿಜಿಚ್ಝ ್ಟ್ಝಜಜಿಟ್ಠಠ ಟ್ಟಚ್ಚಠಿಜ್ಚಿಛಿಠ) ಸಂಬಂಧಿಸಿದಂತೆ 1954ರ ‘ಶಿರೂರು ಮಠ ವರ್ಸಸ್ ಕಮಿಷನರ್, ಹಿಂದು ಧಾರ್ವಿುಕ ದತ್ತಿ’ ಪ್ರಕರಣ ಹಾಗೂ ದರ್ಗಾ ಸಮಿತಿ, ಅಜ್ಮೀರ್ ವರ್ಸಸ್ ಸಯ್ಯದ್ ಹುಸೇನ್ ಅಲಿ ಪ್ರಕರಣಗಳ ತೀರ್ಪಿನ ಪ್ರಕಾರ ‘‘ಧರ್ಮದ ಅತ್ಯಗತ್ಯ ಅಂಗ ಎಂದು ಆಚರಿಸಲ್ಪಡುವ ನಂಬಿಕೆ, ಪರಂಪರೆ, ಪದ್ಧತಿ, ಆಚರಣೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕಾಗುತ್ತದೆ ಮತ್ತು ಇದು ಸಂವಿಧಾನದ ಆರ್ಟಿಕಲ್ 25ರ (ಧಾರ್ವಿುಕ ಹಕ್ಕು) ವ್ಯಾಪ್ತಿಗೊಳಪಟ್ಟಿದೆ. ಜಾತ್ಯತೀತ ದೃಷ್ಟಿಕೋನದಿಂದ ನೋಡಿದಾಗ ಅಂತಹ ಆಚರಣೆಗಳಿಗೆ ಅವಕಾಶ ನೀಡುವುದು ಆಕ್ಷೇಪಾರ್ಹ ಎನಿಸಿದರೂ, ಧರ್ಮದ ನೆಲೆಯಲ್ಲಿ ಸರಿಯಾಗಿಯೇ ಎಂದು ನಿರ್ದಿಷ್ಟ ಧರ್ಮಗಳ ಪ್ರತಿಪಾದಕರಿಗೆ ಅನಿಸಿದ್ದಲ್ಲಿ ಅದನ್ನು ಧರ್ಮದ ಅವಿಭಾಜ್ಯ ಅಂಗ ಎಂದೇ ಪರಿಗಣಿಸಬೇಕಾಗುತ್ತದೆ’. ದೇಶದ ಹಲವು ನ್ಯಾಯಾಲಯಗಳಲ್ಲಿ ಈ ತೀರ್ಪನ್ನು ಆಧಾರವಾಗಿಟ್ಟುಕೊಂಡು ಧಾರ್ವಿುಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದೆ. ಆದರೆ, ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶಿರೂರು ಮಠ ಮತ್ತು ಅಜ್ಮೀರ್ ದರ್ಗಾ ಪ್ರಕರಣದ ಸಿದ್ಧಾಂತ ಬದಿಗೊತ್ತಿ, ಮಹಿಳೆಯರ ಸಮಾನ ಹಕ್ಕಿಗೆ ಆದ್ಯತೆ ನೀಡಿದ್ದರಿಂದ ‘ಶಬರಿಮಲೆ ಧಾರ್ವಿುಕ ನಂಬಿಕೆ’ಯ ವ್ಯಾಖ್ಯಾನ ಬದಲಿಸಲಾಯಿತು. ಈ ತೀರ್ಪನ್ನು ಮರುಪರಿಶೀಲಿಸಿದ ತೀರ್ಪಿನಲ್ಲಿ ‘ಶಬರಿಮಲೆಯ 2018ರ ತೀರ್ಪ, ಶಿರೂರು ಮಠ, ಅಜ್ಮೀರ್ ದರ್ಗಾದ ತೀರ್ಪಗಳಿಗೆ ವ್ಯತಿರಿಕ್ತವಾಗಿದೆ ಎಂದು ನಿವೃತ್ತ ಸಿಜೆಐ ರಂಜನ್ ಗೋಗೋಯ್, ನ್ಯಾ. ಇಂದು ಮಲ್ಹೋತ್ರ ಮತ್ತು ನ್ಯಾ.ಎನ್.ವಿ.ಖಾನ್ವಿಲ್ಕರ್ ಅಭಿಪ್ರಾಯಪಟ್ಟಿದ್ದರಿಂದ, ಆ ಪ್ರಕರಣವನ್ನು ವಿಸõತ ಪೀಠಕ್ಕೆ ವರ್ಗಾವಣೆ ಮಾಡಲಾಯಿತು. ಶಿರೂರು ಮಠದ ತೀರ್ಪನ್ನು ಸುಪ್ರೀಂ ಕೋರ್ಟ್​ನ 7 ನ್ಯಾಯಮೂರ್ತಿಗಳು ಮತ್ತು ಅಜ್ಮೀರ್ ದರ್ಗಾ ಪ್ರಕರಣವನ್ನು 5 ನ್ಯಾಯಮೂರ್ತಿಗಳು ಬರೆದಿದ್ದರು. ಈ ತೀರ್ಪಗಳನ್ನು ಠಛಿಠಿಠ್ಝಿಛಿಛ ಟ್ಟಜ್ಞಿ್ಚಟ್ಝಛಿಠ ಎಂದು ಭಾವಿಸಲಾಗಿದೆ. ಹೀಗಾಗಿಯೇ, ಧರ್ಮದ ಪದ್ಧತಿ, ಆಚರಣೆಗಳ ವಿಷಯ ಬಂದಾಗ ಈ ತೀರ್ಪಗಳನ್ನೂ ಆಧರಿಸಲಾಗುತ್ತದೆ.
ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿರುವ ಮೇಲ್ಮನವಿಗಳ ಮೇಲೆ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ನ್ಯಾಯಪೀಠದ ಸದಸ್ಯ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಅ.16ರಂದು ನಿವೃತ್ತಿಯಾಗುತ್ತಿರುವುದರಿಂದ ಶುಕ್ರವಾರ ಅವರ ಕರ್ತವ್ಯದ ಕೊನೆಯ ದಿನ. ನಿವೃತ್ತಿಗೆ ಮುನ್ನ ತೀರ್ಪು ಪ್ರಕಟಿಸಬಹುದಾಗಿದೆ. ಪ್ರಕರಣದಲ್ಲಿ ಹಿಜಾಬ್ ಪರ 17 ವಕೀಲರು ವಾದಿಸಿದ್ದರೆ, ಶಾಲೆಗಳಲ್ಲಿ ಹಿಜಾಬ್ ಧಾರಣೆ ವಿರೋಧಿಸುವ ರಾಜ್ಯ ಸರ್ಕಾರದ ಆದೇಶ ಸಮರ್ಥಿಸಿ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್, ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಶಾಲೆಗಳ ಶಿಕ್ಷಕರ ಪರ ಹಿರಿಯ ವಕೀಲ ಆರ್. ವೆಂಕಟರಮಣಿ (ಹಾಲಿ ಅಟಾರ್ನಿ ಜನರಲ್) ವಾದಿಸಿದ್ದರು. 10 ದಿನ ಸುದೀರ್ಘ ವಿಚಾರಣೆ ಕೈಗೊಂಡಿದ್ದ ನ್ಯಾಯಪೀಠ, ಸೆ.22ರಂದು ತೀರ್ಪು ಕಾದಿರಿಸಿತ್ತು.
ದಾವೂದಿ ಬೋಹ್ರಾದಲ್ಲಿ ಬಹಿಷ್ಕಾರದ ಆಚರಣೆ:ಹಿಜಾಬ್ ತೀರ್ಪಿನ ನಿರೀಕ್ಷೆಯ ಮಧ್ಯೆ ಇಸ್ಲಾಂ ಧರ್ಮದ ವ್ಯಾಪ್ತಿಯಲ್ಲಿರುವ ಬರುವ ದಾವೂದಿ ಬೋಹ್ರಾ ಸಮುದಾಯದ ‘ಬಹಿಷ್ಕಾರ’ದ ಆಚರಣೆ ಆ ಧರ್ಮದ ಅಗತ್ಯ ಆಚರಣೆಯ ಭಾಗವೇ ಅಲ್ಲವೇ ಎಂಬುದನ್ನು 7 ಸದಸ್ಯರ ವಿಸõತ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಸು ಪ್ರೀಂಕೋರ್ಟ್ ತನ್ನ ತೀರ್ಪನ್ನು ಮಂಗಳವಾರ ಕಾದಿರಿಸಿದೆ. ದಾವೂದಿ ಬೋಹ್ರಾ ಸಮುದಾಯದಲ್ಲಿ ಜನರು ತಮ್ಮ ಧರ್ವಚರಣೆಗಳಿಂದ ದೂರವಿದ್ದರೆ ಅಂಥವರಿಗೆ ಧರ್ಮದಿಂದ ಬಹಿಷ್ಕಾರ ಹಾಕುವ ಪದ್ಧತಿ ಜಾರಿಯಲ್ಲಿದೆ. 1962ರ ಸುಪ್ರೀಂಕೋರ್ಟ್ ತೀರ್ಪು ದಾವೂದಿ ಬೋಹ್ರಾ ಸಮುದಾಯದ ಈ ಧರ್ವಚರಣೆಗೆ ರಕ್ಷಣೆ ನೀಡಿತ್ತು. ಆದರೆ 1986ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಅಂತಿಮ ನಿಲುವು ಪ್ರಕಟಿಸಿಲ್ಲ. ಈಗ ಈ ಪ್ರಕರಣವನ್ನು ಶಬರಿಮಲೆ ಪ್ರಕರಣದಂತೆ ವಿಸõತ ಪೀಠಕ್ಕೆ ವರ್ಗಾಯಿಸಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕು. ದೇಶದಲ್ಲಿ ಹಿಜಾಬ್ ಧರಿಸದ ಎಷ್ಟೋ ಮುಸ್ಲಿಂ ಮಹಿಳೆಯರಿದ್ದಾರೆ. ಇದು ಅಗತ್ಯ ಧರ್ವಚರಣೆಯೇ ಅಲ್ಲ ಎಂದಿರುವ ರಾಜ್ಯ ಸರ್ಕಾರ, ಇಲ್ಲಿ ಸಾಂವಿಧಾನಿಕ ಪೀಠದ ಪ್ರಶ್ನೆಯೇ ಬರುವುದಿಲ್ಲ. ಇದು ಕೇವಲ ಶಾಲೆಯ ಶಿಸ್ತಿಗೆ ಸಂಬಂಧಿಸಿದ ಸರಳ ಪ್ರಕರಣ ಎಂದು ಪ್ರತಿಪಾದಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 5 =
Remember me
