ದುಬೈ:ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ಭರ್ಜರಿ ಬಹುಮಾನ ಒಲಿದಿದೆ.
ದುಬೈನಲ್ಲಿ ಕೆಲಸ ಮಾಡುತ್ತಿರುವ ಎರ್ನಾಕುಲಂ ಮೂಲದ ಸೂರಜ್​ ಅನೀದ್​ (35) ಅವರಿಗೆ ಲಕ್ಕಿ ಡ್ರಾನಲ್ಲಿ ಬರೋಬ್ಬರಿ ಒಂದು ಮಿಲಿಯನ್​ ಯುಎಸ್​ ಡಾಲರ್ (7 ಕೋಟಿ ರೂ.) ಬಹುಮಾನ ಬಂದಿದೆ. ಸೂರಜ್​ ಅವರು ಜನವರಿ 20ರಂದು ಆನ್​ಲೈನ್​ ಮೂಲಕ ಟಿಕೆಟ್​ ಖರೀದಿಸಿದ್ದರು. ​
ಇದನ್ನೂ ಓದಿರಿ:ವೈದ್ಯರು ರಾತ್ರಿ ಸಮಯದಲ್ಲೇಕೆ ಶವಪರೀಕ್ಷೆ ಮಾಡುವುದಿಲ್ಲ? ಸತ್ಯ ತಿಳಿದ್ರೆ ನೀವು ಶಾಕ್​ ಆಗೋದು ಖಂಡಿತ!
350ನೇ ಸರಣಿಯ ಟಿಕೆಟ್ ಸಂಖ್ಯೆ 4645 ಮೂಲಕ ಸೂರಜ್ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ತಾವು ಜಯಶಾಲಿ ಆಗಿರುವ ವಿಚಾರ ಫೇಸ್​ಬುಕ್ ಲೈವ್​​ ಮೂಲಕ ಸೂರಜ್​ ಅವರಿಗೆ ತಿಳಿದಿದೆ. ವಿಜೇತರನ್ನು ಘೋಷಿಸಿದಾಗ ನನ್ನನ್ನು ನಾನೇ ನಂಬಲು ಆಗಲಿಲ್ಲ ಎಂದು ಸೂರಜ್​ ಹೇಳಿಕೊಂಡಿದ್ದಾರೆ.
ಅಂದಹಾಗೆ ಸೂರಜ್​ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ವಿಜೇತರಾದ 175ನೇ ಭಾರತೀಯರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸೂರಜ್​ ಯುಎಇನಲ್ಲಿ ನೆಲೆಸಿದ್ದಾರೆ. ಬ್ಯಾಂಕ್​ ಒಂದರ ಕಸ್ಟಮರ್​ ಕೇರ್​ ವಿಭಾಗದಲ್ಲಿ ಸೂರಜ್​ ಕೆಲಸ ಮಾಡುತ್ತಿದ್ದು, ಅಬುದಾಬಿಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಿದ್ದಾರೆ.(ಏಜೆನ್ಸೀಸ್​)
ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮುಂದಾದ ದಂಪತಿ: ಆದರೆ, ವಿಧಿಯಾಟವೇ ಬೇರೆ ಇತ್ತು!

ಒಂದೆಡೆ ಪತ್ನಿ, ಇನ್ನೊಂದೆಡೆ ಮದುವೆಯಾಗಲು ಪ್ರೇಯಸಿ ಒತ್ತಾಯ- ಮೈಸೂರಿನಲ್ಲಿ ಬಿತ್ತು ಎರಡು ಹೆಣ!

ಪ್ರೇಮಿಗಳಿಬ್ಬರ ಪ್ರೇಮ ವಿವಾಹಕ್ಕೆ ಬಲಿಯಾಯ್ತು ಲಕ್ಷಾಂತರ ರೂ. ಮೌಲ್ಯದ ಅಡಿಕೆ ಗಿಡಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 2 =
Remember me
