ನವದೆಹಲಿ:ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್​ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಕೆಂಪುಗ್ರಹದ ಮೇಲೆ ನೀರು ಮತ್ತು ಜೀವಿಗಳು ವಾಸವಾಗಿದ್ದ ಲಕ್ಷಣವನ್ನು ಪತ್ತೆ ಮಾಡಲು ಹರಸಾಹಸಪಡುತ್ತಿವೆ. ಇದೇ ವೇಳೆ ಮಂಗಳಗ್ರಹದ ಮೇಲೆ ನೀರು ಇದೆ ಎಂಬುದು ಪತ್ತೆಯಾಗಿರುವುದಾಗಿ ಯುರೋಪಿಯನ್​ ಬಾಹ್ಯಾಕಾಶ ಸಂಸ್ಥೆ (ಇಎಸ್​ಎ) ಹೇಳಿದೆ.
ಮಂಗಳಗ್ರಹದ ಮೇಲೆ ಬೃಹತ್​ ಮಂಜುಗಡ್ಡೆಯ ಕುಳಿ ಪತ್ತೆಯಾಗಿದೆ. ಅಂದಾಜು 82 ಕಿ.ಮೀ. ಅಗಲವಾಗಿರುವ ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ. ಕೊರೊಲೇವ್​ ಕುಳಿ ಎಂದು ಗುರುತಿಸಲಾಗುವ ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್​ ಎಕ್ಸ್​ಪ್ರೆಸ್​ ರವಾನಿಸಿರುವುದಾಗಿ ಇಎಸ್​ಎ ತಿಳಿಸಿದೆ.
ಕೆಂಪು ಗ್ರಹದ ದಕ್ಷಿಣ ಭಾಗದಲ್ಲಿ ಒಲಿಂಪಿಯಾ ಆ್ಯಂಡೆ ಎಂಬ ಮರಳಿನ ದಿಬ್ಬಿವಿದೆ. ಇದು ಮಂಗಳಗ್ರಹದ ಉತ್ತರ ಧ್ರುವದ ಒಂದು ಭಾಗವನ್ನು ಆವರಿಸಿದೆ. ಈ ಕುಳಿಯಲ್ಲಿನ ಮಂಜುಗಡ್ಡೆ ವರ್ಷಪೂರ್ತಿ ಸ್ಥಿರವಾಗಿರುತ್ತದೆ. ಏಕೆಂದರೆ ಈ ಭಾಗದಲ್ಲಿನ ವಾಯುಭಾರ ಕುಸಿತ ನೈಸರ್ಗಿಕವಾಗಿ ತಂಪು ವಾತಾವರಣಕ್ಕೆ ಕಾರಣವಾಗಿದೆ. ಮಂಜುಗಡ್ಡೆ ಮೇಲಿನ ಗಾಳಿ ತಣ್ಣಗಿದ್ದು, ಸುತ್ತಲಿನ ಗಾಳಿಗಿಂತಲೂ ಭಾರವಾಗಿದೆ. ಗಾಳಿಯು ಶಾಖನಿರೋಧಕ ಗುಣವನ್ನು ಹೊಂದಿರುವ ಕಾರಣ ಕುಳಿಯಲ್ಲಿರುವ ಮಂಜುಗಡ್ಡೆ ಕರಗದೆ ಹಾಗೆಯೇ ಗಟ್ಟಿಯಾಗಿ ಉಳಿದಿದೆ ಎಂದು ಇಎಸ್​ಎ ವಿವರಿಸಿದೆ.
ಭಯಾನಕ ವಿಡಿಯೋ| ಫುಟ್​ಬಾಲ್ ತರಬೇತಿ ವೇಳೆ ಸಿಡಿಲು ಬಡಿತ: ಕೋಮಾಗೆ ಜಾರಿದ ಬಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 9 =
Remember me
