ಮುಂಬೈ:ನಟಿ ಇಶಾ ಡಿಯೋಲ್ ಪತಿಯಿಂದ ಬೇರೆಯಾದ ನಂತರ  ಭಾರೀ ಸುದ್ದಿಯಲ್ಲಿದ್ದಾರೆ. ಇವರಿಬ್ಬರು ದೂರವಾಗಿದ್ದಕ್ಕೆ ಅಭಿಮಾನಿಗಳು ಸಹ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ಇಶಾ ಇದರಿಂದ ಹೊರ ಬಂದು ರಾಜಕೀಯಕ್ಕೆ ಬರಲು ರೆಡಿಯಾಗಿದ್ದಾರೆ. ತಾಯಿ ಹೇಮಾ ಮಾಲಿನಿ ಅವರೇ ಈ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾದರೆ ಇಶಾ ರಾಜಕೀಯ ಪ್ರವೇಶದ ಬಗ್ಗೆ ಹೇಮಾ ಹೇಳಿದ್ದೇನು?
ಇತ್ತೀಚೆಗೆ, ಹೇಮಾ ಮಾಲಿನಿ ಅವರು ತಮ್ಮ ಸಂದರ್ಶನವೊಂದರಲ್ಲಿ ನನ್ನ ಪತಿ ಧರ್ಮೇಂದ್ರ ಯಾವಾಗಲೂ ನಾನು ಏನು ಮಾಡಿದರೂ ನನಗೆ ಸಾಕಷ್ಟು ಬೆಂಬಲ ನೀಡುತ್ತಾರೆ. ನನ್ನ ಕುಟುಂಬವು ಎಲ್ಲಾ ಸಮಯದಲ್ಲೂ ನನ್ನೊಂದಿಗೆ ಇರುತ್ತದೆ ಮತ್ತು ನನ್ನ ಪತಿಯಿಂದಾಗಿ ನಾನು ಇದನ್ನೆಲ್ಲಾ ತುಂಬಾ ಸುಲಭವಾಗಿ ನಿಭಾಯಿಸುತ್ತಿದ್ದೇನೆ ಎಂದರು.
ಅವರು ನನಗೆ ಸಾಕಷ್ಟು ಬೆಂಬಲ ನೀಡುತ್ತಾರೆ ಮತ್ತು ಮುಂಬೈನಲ್ಲಿರುವ ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಈ ಕಾರಣದಿಂದಲೇ ನಾನು ಮಥುರಾದಲ್ಲಿ ಉಳಿದುಕೊಂಡು ನನ್ನ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತಿದೆ. ನನ್ನ ಗಂಡನಿಂದ ಮಾತ್ರ ನಾನು ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು ಎಂದು ಹೇಮಾಮಾಲಿನಿ ತಿಳಿಸಿದ್ದಾರೆ.
ಈ ಸಂದರ್ಶನದಲ್ಲಿ ಹೇಮಾ ಅವರಿಗೆ ತಮ್ಮ ಕುಟುಂಬದ ಯಾರಾದರೂ ರಾಜಕೀಯಕ್ಕೆ ಬರಲು ಬಯಸುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಡ್ರೀಮ್ ಗರ್ಲ್ ಹೌದು, ಯಾಕೆ ಬೇಡ, ಬೇಕಾದರೆ ಖಂಡಿತ ಬರಬಹುದು ಎಂದಿದ್ದಾರೆ. ನಂತರ ಇಶಾ ಬಗ್ಗೆ ಮಾತನಾಡುತ್ತಾ, ಇಶಾಗೆ ಈ ಬಗ್ಗೆ ತುಂಬಾ ಪ್ಯಾಶನ್ ಇದೆ, ಅವಳಿಗೂ ಇದೆಲ್ಲ ತುಂಬಾ ಇಷ್ಟ. ಇಶಾ ಅಂದುಕೊಂಡರೆ ಮುಂದಿನ ಕೆಲವೇ ವರ್ಷಗಳಲ್ಲಿ ರಾಜಕೀಯ ಸೇರುವುದು ಖಚಿತ ಎಂದರು.
ಪ್ರಸ್ತುತ ಹೇಮಾ ಮಾಲಿನಿ ಮಥುರಾದಿಂದ ಬಿಜೆಪಿ ಲೋಕಸಭಾ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ, ನಟಿ ತನ್ನ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ‘ರಾಮ್ ಲಲ್ಲಾ ದೈವಿಕ ದರ್ಶನ’ ಕುರಿತು ಹಂಚಿಕೊಂಡಿದ್ದಾರೆ. ಇದರೊಂದಿಗೆ ‘ರಾಗ ಸೇವೆ’ಯಲ್ಲಿಯೂ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಜೀವನೋಪಾಯಕ್ಕಾಗಿ ಟ್ಯಾಕ್ಸಿ ಓಡಿಸುವುದರಿಂದ ಹಿಡಿದು ಕಾರು ತೊಳೆದ ಇವರು ಇಂದು ಸೂಪರ್ ಸ್ಟಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
