ಕೊಯಮತ್ತೂರು:ಗ್ರಾಮೀಣ ಭಾರತದ ಅತಿದೊಡ್ಡ ಕ್ರೀಡಾಕೂಟವಾದ ಈಶ ಗ್ರಾಮೋತ್ಸವದ ಅದ್ಧೂರಿ ಅಂತಿಮ ಪಂದ್ಯಗಳು, ಸೆಪ್ಟೆಂಬರ್ 23 ರಂದು ಕೊಯಮತ್ತೂರಿನ 112 ಅಡಿ ಎತ್ತರದ ಆದಿಯೋಗಿಯ ಮುಂದೆ ನಡೆಯಲಿವೆ.
ದಕ್ಷಿಣ ಭಾರತದ 5 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಿಂದ 60,000 ಕ್ಕೂ ಹೆಚ್ಚು ಆಟಗಾರರು ಈಶ ಗ್ರಾಮೋತ್ಸವದಲ್ಲಿ ಭಾಗವಹಿಸಿದ್ದರು. ಈಶ ಗ್ರಾಮೋತ್ಸವವು ಸಮುದಾಯಗಳಾದ್ಯಂತ ಗ್ರಾಮೀಣ ಜನರು ಒಟ್ಟಾಗಿ ಸೇರಲು, ಭಾಗವಹಿಸಲು ಮತ್ತು ಅವರ ಜೀವನದಲ್ಲಿ ಕ್ರೀಡೋತ್ಸಾಹ ಮತ್ತು ವಿನೋದಶೀಲತೆಯನ್ನು ತರಲು ಪ್ರೋತ್ಸಾಹಿಸುತ್ತದೆ, ಆದ್ದರಿಂದ ಇದರಲ್ಲಿ ವೃತ್ತಿಪರರಿಗೆ ಭಾಗವಹಿಸಲು ಅವಕಾಶವಿಲ್ಲ.
ಸದ್ಗುರುಗಳ ಸಾಮಾಜಿಕ ಉಪಕ್ರಮವಾದ ಈಶ ಗ್ರಾಮೋತ್ಸವವು, ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೋತ್ಸಾಹ ಮತ್ತು ವಿನೋದಶೀಲತೆಯನ್ನು ತರುವ ಗುರಿಯನ್ನು ಹೊಂದಿದೆ. ಇದು ಈಗ ಸೆಪ್ಟೆಂಬರ್ 23 ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ, ಸುಪ್ರಸಿದ್ಧ 112 ಅಡಿ ಎತ್ತರದ ಆದಿಯೋಗಿಯ ಎದುರಿನಲ್ಲಿ, ತನ್ನ ಅದ್ಧೂರಿ ಅಂತಿಮ ಪಂದ್ಯಗಳಿಗೆ ಸಿದ್ಧವಾಗಿದೆ.  ಸದ್ಗುರುಗಳ ಜೊತೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಈ ಒಂದು ಮಹತ್ವಪೂರ್ಣ ಸಂದರ್ಭವನ್ನು ಅಲಂಕರಿಸುವ ಮೂಲಕ, ಭಾರತದ ಗ್ರಾಮೀಣ ಕ್ರೀಡಾ ಕೌಶಲದ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.
In the heart of rural southern India, Isha Gramotsavam has emerged as a powerful catalyst for transformation. Isha Foundation's tireless efforts are turning desolate villages, formerly plagued by addiction and despair, into thriving spaces of joy, unearthing latent talents and…pic.twitter.com/KJV2cy1jhw
ಈಶ ಗ್ರಾಮೋತ್ಸವದ 15 ನೇ ಆವೃತ್ತಿಯು, 194 ಗ್ರಾಮೀಣ ಸ್ಥಳಗಳಲ್ಲಿ ಕ್ಲಸ್ಟರ್ ಮತ್ತು ವಿಭಾಗೀಯ ಮಟ್ಟದ ಈವೆಂಟ್‌ಗಳನ್ನು ನಡೆಸುವ ಮೂಲಕ, ದಕ್ಷಿಣ ಭಾರತದ ಐದು ರಾಜ್ಯಗಳಿಂದ (ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿ) 60,000 ಕ್ಕೂ ಹೆಚ್ಚು ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. 10,000 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು – ಬಹುತೇಕ ಗೃಹಸ್ಥರು, ಕಬಡ್ಡಿ ಮತ್ತು ಥ್ರೋಬಾಲ್‌ನಂತಹ ಆಟಗಳಲ್ಲಿ ಭಾಗವಹಿಸಿದ್ದಾರೆ. ಈಶ ಗ್ರಾಮೋತ್ಸವವು ಭಾರತದ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಶಾಂತ ಕ್ರಾಂತಿಗೆ ಸಾಕ್ಷಿಯಾಗಿದೆ.
ಈಶ ಗ್ರಾಮೋತ್ಸವದ ಹಿಂದಿನ ಸಂಭ್ರಮದ ಮನೋಭಾವವನ್ನು ವಿವರಿಸುತ್ತಾ ಸದ್ಗುರುಗಳು, “ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಆಚರಿಸುವ ಒಂದು ಜೀವನದ ಆಚರಣೆಯಾಗಿದೆ. ಒಂದು ಆಟವು ಎಲ್ಲಾ ಸಾಮಾಜಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದುಗೂಡಿಸಬಹುದು; ಇದು ಕ್ರೀಡೆಯ ಶಕ್ತಿಯಾಗಿದೆ – ಇದು ಆಚರಣೆಯ ಉತ್ಸಾಹದ ಮೂಲಕ ಜಾತಿ, ಧರ್ಮ ಮತ್ತು ಇತರ ಗುರುತುಗಳನ್ನು ಅಳಿಸಬಹುದು.”
“ಇದು ಸ್ಪರ್ಧಾತ್ಮಕ ಕ್ರೀಡಾಪಟುವಾಗುವುದರ ಬಗ್ಗೆ ಅಲ್ಲ, ಜೀವನಕ್ಕಾಗಿ ವಿನೋದಶೀಲರಾಗುವುದರ ಬಗ್ಗೆ. ನೀವು ಸಂಪೂರ್ಣ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಚೆಂಡನ್ನು ಎಸೆಯಲು ಸಾಧ್ಯವಾದರೆ, ಒಂದು ಚೆಂಡು ಜಗತ್ತನ್ನು ಬದಲಾಯಿಸಬಹುದು. ಸಂಪೂರ್ಣ ಒಳಗೊಳ್ಳುವಿಕೆಯಿಂದ ಆಡುವ ಸಂತೋಷವನ್ನು ನೀವು ತಿಳಿದುಕೊಳ್ಳುವಂತಾಗಲಿ”ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
2004 ರಿಂದ ನಡೆಸಿಕೊಂಡು ಬರುತ್ತಿರುವ ಈಶ ಗ್ರಾಮೋತ್ಸವದಲ್ಲಿ ಈ ವರ್ಷ, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಮತ್ತು ತಮಿಳುನಾಡಿನೊಂದಿಗೆ ಗ್ರಾಮೀಣ ಆಟಗಳನ್ನು ಮತ್ತು ಹೆಚ್ಚುವರಿಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಕಬಡ್ಡಿಯನ್ನು ಒಳಗೂಡಿಸಲಾಗಿದೆ. ವಾಲಿಬಾಲ್ ಮತ್ತು ಥ್ರೋಬಾಲ್ ವಿಜೇತರು ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ಮತ್ತು ಕಬಡ್ಡಿಯಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ತಂಡಗಳು ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿ ಬಹುಮಾನವನ್ನು ಪಡೆಯುತ್ತವೆ. ಸ್ಪರ್ಧಾತ್ಮಕ ಆಟಗಾರರು 55 ಲಕ್ಷ ಮೌಲ್ಯದ ಬೃಹತ್ ಬಹುಮಾನದ ಮೊತ್ತದಿಂದ ಗೆಲ್ಲುವ ಅವಕಾಶವನ್ನೂ ಹೊಂದಿದ್ದಾರೆ.
“ಈಶ ಗ್ರಾಮೋತ್ಸವದ ಒಂದು ವಿಶೇಷ ಅಂಶವೆಂದರೆ ತಂಡದ ಎಲ್ಲಾ ಆಟಗಾರರು ಒಂದೇ ಗ್ರಾಮದವರು. ಇದು ವೃತ್ತಿಪರ ಆಟಗಾರರ ಪಂದ್ಯಾವಳಿಯಲ್ಲ ಆದರೆ ಪ್ರತಿಯೊಬ್ಬರನ್ನು ಆಡಲು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ಪ್ರತಿಯೊಬ್ಬರನ್ನೂ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಹಿಡಿದು, ಗ್ರಾಮೀಣ ಆಟಗಳ ಮೋಜನ್ನು ಪುನರುಜ್ಜೀವನಗೊಳಿಸುವುದು ಮತ್ತು ನಶಿಸುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸುವವರೆಗೆ, ಈ ಸಂಪೂರ್ಣ ಉಪಕ್ರಮವನ್ನು ಎಚ್ಚರಿಕೆಯಿಂದ ರಚಿಸಲಾಗಿದೆ. ಇದರಿಂದಾಗಿ ಇಡೀ ಹಳ್ಳಿಯು ಒಂದು ಸಂಭ್ರಮಾಚರಣೆಯಾಗಿ ಒಟ್ಟುಗೂಡುತ್ತದೆ ಮತ್ತು ಗ್ರಾಮೀಣ ಜೀವನದ ಹುರುಪನ್ನು ಮರಳಿ ತರುತ್ತದೆ.” ಎಂದು ಈಶ ಗ್ರಾಮೋತ್ಸವದ ಸಂಘಟನಾ ತಂಡದ ಭಾಗವಾದ ಸ್ವಾಮಿ ನಕುಜಹೇಳಿದ್ದರು.
ಈಶ ಗ್ರಾಮೋತ್ಸವದ ಹಿಂದಿನ ಆವೃತ್ತಿಗಳು, 8,412 ತಂಡಗಳು ಮತ್ತು ಒಟ್ಟು 1,00,167 ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತಿರುವ “ಈಶ ಔಟ್‍ರೀಚ್”, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯದಿಂದ, ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ (NSPO) ಎಂದು ಗುರುತಿಸಲ್ಪಟ್ಟಿದೆ. ಈಶ ಔಟ್‍ರೀಚ್ 2018 ರಲ್ಲಿ, ಕ್ರೀಡಾ ಅಭಿವೃದ್ಧಿಗಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ “ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್” ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತರಾದ ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ಕರ್ಣಂ ಮಲ್ಲೇಶ್ವರಿ ಅವರಂತಹ ಕ್ರೀಡಾ ಗಣ್ಯರು ಈ ಹಿಂದೆ ಕ್ರೀಡಾ ಉತ್ಸವದ ಫೈನಲ್‌ನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಥಾಲಿ ರಾಜ್, ಪಿವಿ ಸಿಂಧು, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಈಶ ಗ್ರಾಮೋತ್ಸವಕ್ಕೆ ಬೆಂಬಲ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − six =
Remember me
