ಮುಂಬೈ:ಚಿತ್ರದ ನಾಯಕಿಯರು ಎಂದಾಕ್ಷಣ ತೆಳ್ಳಗಿನ ದೇಹ, ಹೊಳಪು ಚರ್ಮದ ಮೈಮಾಟ ಹೊಂದಿರುವವರಿಗೆ ಬೇಡಿಕೆ ಇರುವುದು ಸಹಜ. ಆದರೆ ತಮ್ಮ ಚರ್ಮದ ಬಣ್ಣದಿಂದ ಹಲವು ಬಾರಿ ಅವಮಾನಕ್ಕೊಳಗಾಗಿದ್ದೆ ಎಂಬ ವಿಷಯವನ್ನು ಬಾಲಿವುಡ್​ ನಟಿ ಈಶಾ ಗುಪ್ತಾ ಹಂಚಿಕೊಂಡಿದ್ದಾರೆ.
2012ರಲ್ಲಿ ಜನ್ನತ್​​ 2 ಸಿನಿಮಾ ಮೂಲಕ ಬಾಲಿವುಡ್​​ಗೆ ಪಾದಾರ್ಪಣೆ ಮಾಡಿದ್ದ ಈಶಾ ಗುಪ್ತಾ ಆರಂಭದ ದಿನಗಳಲ್ಲಿ ತನ್ನ ಮೈ ಬಣ್ಣದಿಂದ ಸಾಕಷ್ಟು ಮುಜುಗರ ಅನುಭವಿಸಿದ್ದೇನೆ. ನೀನು ತುಂಬಾ ಕಪ್ಪು ಎಂದು ಹೇಳುತ್ತಿದ್ದರು. ಇದರಿಂದ ನಾನು ಸಾಕಷ್ಟು ಅವಕಾಶವನ್ನೂ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಸಿನಿಮಾಗೆ ಆಗಷ್ಟೇ ಕಾಲಿಟ್ಟ ನನ್ನ ಬಳಿ ಹಣವೂ ಇರಲಿಲ್ಲ. ಚರ್ಮದ ಬಣ್ಣ ಬದಲಾಯಿಸಲು ಎಷ್ಟಾಗಬಹುದು ಎಂದು ಕೇಳಿದ್ದಕ್ಕೆ ಅದರ ಬೆಲೆ ನೋಡಿಯೇ ತಲೆ ತಿರುಗುವಂತಾಯಿತು. ಬರೋಬ್ಬರಿ ಆದರೂ 90,000 ರೂ.ಗಳನ್ನು ಖರ್ಚು ಮಾಡಿ ತನ್ನ ಚರ್ಮದ ಬಣ್ಣ ಬದಲಿಸಲು ಪ್ರಯತ್ನಿಸಿದ್ದೇ ಎಂದು ಈಶಾ ತಮ್ಮ ಚರ್ಮದ ಹೊಳಪಿಗಾಗಿ ತಾವು ತೆಗೆದುಕೊಂಡಿದ್ದ ನಿರ್ಧಾರದ ಬಗ್ಗೆ ವಿವರಿಸಿದ್ದಾರೆ.
ಸಿನಿಮಾದಲ್ಲಿ ನಟನೆಗೆ ಅವಕಾಶ ಕೊಡುತ್ತೇವೆ ಎಂದು ಹೇಳುತ್ತಿದ್ದ ನಿರ್ದೇಶಕರೂ ಕೂಡ ನೀವು ನಿಮ್ಮ ಚರ್ಮದ ಬಣ್ಣ ಬದಲಾಯಿಸಬೇಕೆಂದು ಹೇಳುತ್ತಿದ್ದರು. ಕೆಲವರಿಂದ ಸಾಕಷ್ಟು ಬಾರಿ ನಿಮ್ಮ ಮೂಗಿನ ಆಕಾರವೂ ಸರಿಯಿಲ್ಲ ಎಂಬುದನ್ನು ಕೇಳಿದ್ದೇನೆ ಎಂದು ಈಶಾ ಹೇಳಿದ್ದಾರೆ.
ಸದ್ಯ ಆಶ್ರಮ್​​ 3 ವೆಬ್​​ಸಿರೀಸ್​​ನಲ್ಲಿ ನಟಿಸಿರುವ ಈಶಾ ಗುಪ್ತಾ ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದ ದಿನಗಳ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.(ಏಜೆನ್ಸೀಸ್​)
ನಯನತಾರಾ-ವಿಘ್ನೇಶ್​​ ಸಪ್ತಪದಿ ತುಳಿದ ಮಧುರಕ್ಷಣದ ಚಿತ್ರಗಳು ಇಲ್ಲಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
