ನವದೆಹಲಿ:ದೇಶದ ಪ್ರತಿ ಜಿಲ್ಲೆಗಳನ್ನೂ ಎಲೆಕ್ಟ್ರಾನಿಕ್​ ಉತ್ಪನ್ನಗಳ ಎಕ್ಸ್​ಪೋರ್ಟ್​ ಹಬ್​ ಮಾಡುವುದು ಸರ್ಕಾರದ ಗುರಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2020-21ನೇ ಸಾಲಿನ ಬಜೆಟ್​ ಮಂಡನೆಯ ಸಮಯದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಾದೇಶಿಕವಾಗಿ ಎಲೆಕ್ಟ್ರಾನಿಕ್​ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಅವಶ್ಯಕತೆ ಇದೆ. ಪ್ರತಿ ರಾಜ್ಯಗಳಲ್ಲಿಯೂ ಇನ್ವೆಸ್ಟ್​ಮೆಂಟ್​ ಕ್ಲಿಯರೆನ್ಸ್​ ಸೆಲ್​ಗಳನ್ನು ತೆರೆದು ಅದರ ಮೂಲಕ ಹೂಡಿಕೆದಾರರಿಗೆ ಉಚಿತ ಸಲಹೆ ನೀಡುವತ್ತ ಸರ್ಕಾರ ಹೆಜ್ಜೆ ಹಾಕಲಿದೆ ಎಂದು ಸಚಿವೆ ತಿಳಿಸಿದ್ದಾರೆ. ಸೆಲ್​ ಫೋನ್​, ಸೆಮಿ ಕಂಡಕ್ಟರ್​ ಮತ್ತು ಎಲೆಕ್ಟ್ರಾನಿಕ್​ ಉತ್ಪನ್ನಗಳ ಉತ್ಪಾದನೆಗೆ ಬೆಂಬಲ ನೀಡುವ ಸಲುವಾಗಿ ನೂತನ ಸ್ಕೀಮ್​ವೊಂದನ್ನು ಜಾರಿಗೆ ತರುವುದಾಗಿ ತಿಳಿಸಿದರು.
ಸಾಗರ್​ ಮಿತ್ರಾಸ್​ ಹೆಸರಿನಲ್ಲಿ ಗ್ರಾಮಗಳ ಯುವಕರಿಂದ ಮೀನುಗಾರಿಕೆಯನ್ನು ವಿಸ್ತರಣೆ ಮಾಡಲಾಗುವುದು. ಇದಕ್ಕೆಂದು 500 ಮೀನುಗಾರರ ಸಂಘಟನೆಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
2025ರ ವೇಳೆಗೆ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದಾಗಿ ಸಚಿವೆ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
