ಉತ್ತರಪ್ರದೇಶ:ಸೆಪ್ಟೆಂಬರ್ 10 ರಂದು ಉತ್ತರ ಪ್ರದೇಶದ ಇಟಾವಾ ಕ್ಲಬ್ ಆವರಣದಲ್ಲಿ 30 ಯೋಜನೆಗಳನ್ನು ಉದ್ಘಾಟಿಸುವ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿತ್ತು. ಈ ಕಾರ್ಯಕ್ರಮದದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ರಾಮಶಂಕರ್ ಕಥೇರಿಯಾ ನೀಡಿದ ತಪ್ಪು ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಕುಲಶೇಖರ ಕೊರ್ಡೆಲ್ ಧರ್ಮಕೇಂದ್ರಕ್ಕೆ 150 ರ ಸಂಭ್ರಮ- ಸೆ.14, 17 ರಂದು ಕೃತಜ್ಞತಾ ಬಲಿಪೂಜೆಯೊಂದಿಗೆ ಸಂಭ್ರಮಾಚರಣೆ
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉತ್ತರ ಪ್ರದೇಶ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಜಿತಿನ್ ಪ್ರಸಾದ್ ಆಗಮಿಸಿದ್ದರು. ಈ ವೇಳೆ 30 ಯೋಜನೆಗಳನ್ನು ಉದ್ಘಾಟಿಸಿ, ಅಡಿಪಾಯ ಹಾಕಿದ ಅವರು, ಬಿಜೆಪಿ ಸಂಸದ ರಾಮಶಂಕರ್ ಕಥೇರಿಯಾಗೆ ತಮಾಷೆಯಾಗಿ ಸವಾಲೊಂದನ್ನು ಹಾಕಿದರು.
ಇದನ್ನೂ ಓದಿ:ಒಡಹುಟ್ಟಿದವರ ಜತೆ ಸೇರಿ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿದ ಮಹಿಳೆ ಅರೆಸ್ಟ್​​!
ಕಥೇರಿಯಾ ಅವರು 20 ಕೋಟಿಗಳಲ್ಲಿ ಎಷ್ಟು ಸೊನ್ನೆಗಳಿವೆ ಎಂಬುದನ್ನು ಸರಿಯಾಗಿ ಊಹಿಸಿದರೆ, 200 ಕೋಟಿ ರೂ. ಮೌಲ್ಯದ ಯೋಜನೆಗಳ ಲಾಭವನ್ನು ಅವರಿಗೆ ನೀಡುವುದಾಗಿ ಹೇಳಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ, 20 ಕೋಟಿಗಳಲ್ಲಿ 6 ಸೊನ್ನೆಗಳಿವೆ ಎಂದು ಹೇಳಿದರು. ಈ ಹೇಳಿಕೆ ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗಳನ್ನು ಹುಟ್ಟುಹಾಕಿತು,(ಏಜೆನ್ಸೀಸ್).
ಶೀಘ್ರವೇ ಒಟಿಟಿಗೆ ಫಹದ್​ ಫಾಸಿಲ್​ ನಟನೆಯ ‘ಧೂಮಂ’

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − three =
Remember me
