ಉದಯಪುರ್:​ನಿಶ್ಚಿತಾರ್ಥ ಮಾಡಿಕೊಂಡ ಬಳಿಕವೂ ಬೇರೆ ಹೆಣ್ಣಿನ ಜತೆ ತನ್ನ ಭಾವಿ ಪತಿ ಹೋಗುತ್ತಿರುವುದನ್ನು ನೋಡಿದ ಯುವತಿ ಇಬ್ಬರನ್ನು ಹಿಡಿದು ನಡುರಸ್ತೆಯಲ್ಲೇ ಥಳಿಸಿರುವ ಘಟನೆ ರಾಜಸ್ಥಾನ ಉದಯಪುರ್​ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಜಿಲ್ಲೆಯ ರಿಷಭ್​ದೇವ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೆಲ ದಿನಗಳ ಹಿಂದೆ ಯುವತಿಗೆ ನಿಶ್ಚಿತಾರ್ಥವಾಗಿತ್ತು. ಇದಾದ ಬೆನ್ನಲ್ಲೇ ತನ್ನ ಬಾವಿ ಪತಿಗೆ ಮತ್ತೊಂದು ಹೆಣ್ಣಿನ ಜತೆ ಸಂಬಂಧ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪ್ರತಿ ವರ್ಷ ತಪ್ಪದೇ ನಟ ವಿಷ್ಣುವರ್ಧನ್​ ಬರ್ತಡೇ ಆಚರಿಸುತ್ತಿದ್ದ ಅಭಿಮಾನಿ ನೇಣಿಗೆ ಶರಣು
ಇಬ್ಬರನ್ನು ನೇರವಾಗಿ ಹಿಡಿಯಯಬೇಕೆಂದು ಯುವತಿ ಕಾದು ಕುಳಿತ್ತಿದ್ದಳು. ಅದರಂತೆ ನಿನ್ನೆ ಭಾವಿ ಪತಿ ಮತ್ತು ಆತನ ಲವ್ವರ್​ ಬೈಕ್​ನಲ್ಲಿ ಹೋಗುವಾಗ ಮಾರ್ಗ ಮಧ್ಯೆಯೇ ಅವರನ್ನು ಯುವತಿ ತಡೆದಿದ್ದಾಳೆ. ಭಾವಿ ಪತಿಯ ಲವ್ವರ್​ ಬೈಕ್​ ಮೇಲೆ ಕುಳಿತಿರುವಾಗಲೇ ಯುವತಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ಇಬ್ಬರಿಗೂ ಯುವತಿ ಥಳಿಸುವುದನ್ನು ನೋಡಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಈ ವೇಳೆ ಯುವತಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಆದರೂ ತನ್ನ ಕಿಚ್ಚು ಬಿಡದ ಯುವತಿ ಭಾವಿ ಪತಿಯ ಲವ್ವರ್​ ಮೇಲೆ ಚಪ್ಪಲಿ ಎಸೆದು, ಕೊನೆಯಲ್ಲಿ ಭಾವಿ ಪತಿಯ ಬೈಕ್​ ಏರಿ ಅಲ್ಲಿಂದ ಹೊರಡುತ್ತಾಳೆ.(ಏಜೆನ್ಸೀಸ್​)
ಹಬ್ಬಕ್ಕೆಂದು ಅಜ್ಜಿ ಊರಿಗೆ ಹೋದ ಯುವಕ ಮರಳಿದ್ದು ಶವವಾಗಿ: ತಡರಾತ್ರಿ ನಡೆಯಿತು ಭೀಕರ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
