ನವದೆಹಲಿ:ಲಡಾಖ್​ ವಲಯದಲ್ಲಿ 1,597 ಕಿ.ಮೀ. ಉದ್ದದ ವಾಸ್ತವ ಗಡಿರೇಖೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್​ ಆರ್ಮಿ (ಪಿಎಲ್​ಎ) ಹಿಂದೆಗೆಯಲು ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ತ ಹೆಪ್ಪುಗಟ್ಟಿಸುವಂಥ ಚಳಿಗಾಲದಲ್ಲಿ ಕೂಡ ಈ ವಲಯದಲ್ಲಿ ಭದ್ರತೆಯನ್ನು ಸ್ವಲ್ಪವೂ ತಗ್ಗಿಸದಿರಲು ಭಾರತೀಯ ಸೇನಾಪಡೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಿಯಾಚಿನ್​ ಪ್ರದೇಶದಲ್ಲಿನ ಯೋಧರಿಗೆ ಕೊಡುವಂಥ ಬೆಚ್ಚನೆಯ ಉಡುಪುಗಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ತನ್ಮೂಲಕ 2020ರ ಏಪ್ರಿಲ್​ನಲ್ಲಿ ಎದುರಾದಂಥ ಪರಿಸ್ಥಿತಿ ಮತ್ತೊಮ್ಮೆ ಉದ್ಭವಿಸದಂತೆ ಎಚ್ಚರವಹಿಸಲು ಮುಂದಾಗಿದೆ.
ಸೇನಾಪಡೆಯ ಈ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ಸರ್ಕಾರ, ಭಾರಿ ಹಿಮಪಾತವನ್ನು ತಡೆದುಕೊಳ್ಳುವಂತ ಟೆಂಟ್​ಗಳು ಮತ್ತು ಬೆಚ್ಚನೆಯ ಉಡುಪುಗಳನ್ನು ತಯಾರಿಸುವ ಅಮೆರಿಕ, ರಷ್ಯಾ ಮತ್ತು ಯುರೋಪ್​ ರಾಷ್ಟ್ರಗಳಲ್ಲಿನ ಕಂಪನಿಗಳನ್ನು ಗುರುತಿಸಿ, ಮಾಹಿತಿ ನೀಡುವಂತೆ ಆಯಾ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ.
ಲಡಾಖ್​ ವಲಯದಲ್ಲಿ ಚೀನಾಕ್ಕೆ ಸಮನಾಂತರ ಸಂಖ್ಯೆಯ ಯೋಧರನ್ನು ಭಾರತೀಯ ಸೇನಾಪಡೆ ನಿಯೋಜಿಸಿದ್ದು, ಶತ್ರು ಪಾಳೆಯ ಮತ್ತಾವುದೇ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರವಹಿಸಿದೆ. ಆದರೆ, ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ 35 ಸಾವಿರ ಯೋಧರನ್ನು ನಿಯೋಜಿಸಲಾಗುತ್ತಿದೆ ಎಂಬ ವರದಿಗಳನ್ನು ಭಾರತೀಯ ಸೇನಾಪಡೆ ಅಲ್ಲಗಳೆದಿದೆ. ಆದರೆ, ಮುಂದಿನ ವರ್ಷದ ಇದೇ ಅವಧಿಯಲ್ಲಿ ಪಿಎಲ್​ಎ ಭಾರತೀಯ ಪ್ರದೇಶಗಳನ್ನು ಅತಿಕ್ರಮಿಸುವಂಥ ದುಸ್ಸಾಹಸಕ್ಕೆ ಮುಂದಾಗದಂತೆ ತಡೆಯಲು ಹೆಚ್ಚಿನ ಯೋಧರ ನಿಯೋಜನೆ ಅಗತ್ಯ ಎಂಬ ಸತ್ಯವನ್ನು ಅದು ಮನಗಂಡಿದೆ.
ಈ ವರ್ಷದ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿನ ಪಿಎಲ್​ಎ ಅತಿಕ್ರಮಣವನ್ನು ಕಂಡ ನಂತರದಲ್ಲಿ ಅದನ್ನು ನಂಬುವುದು ತುಂಬಾ ಕಷ್ಟವಾಗುತ್ತಿದೆ. 2021ರ ಬೇಸಿಗೆ ಆರಂಭವಾಗುತ್ತಲೇ ಅವರು ಮತ್ತೊಮ್ಮೆ ಪ್ಯಾಂಗಾಂಗ್​ ತ್ಸೊ ಸರೋವರದ ಉತ್ತರ ಭಾಗದಲ್ಲಿ ಅತಿಕ್ರಮಣ ಮಾಡುವ ಸಾಧ್ಯತೆ ಇಲ್ಲದಿಲ್ಲ ಎಂದು ಮಿಲಿಟರಿ ಕಮಾಂಡರ್​ ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಅಪ್ಪನಾದ ಖುಷಿಯಲ್ಲಿ ಮಗುವಿನ ಫೋಟೋ ರಿವೀಲ್​ ಮಾಡಿ ಹಾರ್ದಿಕ್​ ಪಾಂಡ್ಯ ಹೇಳಿದ್ದು ಹೀಗೆ…
ಪಿಎಲ್​ಎ ಯೋಧರು ಗಸ್ತು ಪಾಯಿಂಟ್​ 14 (ಗಲ್ವಾನ್​), ಗಸ್ತು ಪಾಯಿಟಂಟ್​ 15-16ನಿಂದ (ಹಾಟ್​ಸ್ಪ್ರಿಂಗ್ಸ್​) ಹಿಂದೆಸರಿದಿರಬಹುದು. ಆದರೆ ಗಸ್ತು ಪಾಯಿಂಟ್​ 17ಎ ಮತ್ತಿತರ ಸರೋವರದ ಏಣಿನಲ್ಲಿರುವ ಯೋಧರಿಂದ ಅತಿಕ್ರಮಣದ ಭೀತಿ ಇದ್ದೇ ಇದೆ ಎಂದು ತಿಳಿಸಿದ್ದಾರೆ.
ಲಡಾಖ್​ನಲ್ಲಿರುವ ಅತ್ಯಂತ ಶೀತಮಯ ಮತ್ತು ಒಣ ಹವಾಮಾನದಿಂದಾಗಿ ಗಸ್ತು ಪಾಯಿಂಟ್​ 15, 16 ಮತ್ತು 17ರಲ್ಲಿ ಹೆಚ್ಚಿನ ಹಿಮಪಾತವಾಗುವ ಸಾಧ್ಯತೆ ಕಡಿಮೆ ಇದೆ. ಆದರೆ, ಹಿಮಾಲಯ ತಪ್ಪಲಿನ 17 ಸಾವಿರ ಅಡಿ ಎತ್ತರದಲ್ಲಿರುವ ಚಾಂಗ್​ ಲಾ ಪಾಸ್​ನಲ್ಲಿ ಹಿಮಪಾತವಾಗಿ, ಭಾರಿ ಹಿಮ ಸಂಗ್ರಹವಾದರೆ, ಪ್ಯಾಂಗಾಂಗ್​ ತ್ಸೊ ಪ್ರದೇಶಕ್ಕೆ ಹೋಗುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಪ್ರದೇಶಗಳಲ್ಲಿ ನಿಯೋಜಿಸುವ ಯೋಧರಿಗೆ ಬೆಚ್ಚನೆಯ ಉಡುಪಿನ ಜತೆಗೆ ಭಾರಿ ಹಿಮಪಾತವನ್ನು ತಡೆದುಕೊಳ್ಳುವಂಥ ಟೆಂಟ್​ಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಭಾರತೀಯ ಸೇನಾಪಡೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಚಳಿಗಾಲದ ಸಮವಸ್ತ್ರಗಳ ಅಗತ್ಯಗಳನ್ನು ಪೂರೈಸಲು ನಾವು ಈಗಾಗಲೆ ದೇಶಿಯ ಉತ್ಪಾದಕರಿಗೆ ಬೇಡಿಕೆ ಸಲ್ಲಿಸಿದ್ದೇವೆ. ಜತೆಗೆ ಸಾಲ್ಟ್ರೋ ರಿಡ್ಜ್​ ಮತ್ತು ಸಿಯಾಚಿನ್​ ಗ್ಲೇಸಿಯರ್​ನಲ್ಲಿ ನೆಲೆಗೊಂಡಿರುವ ಯೋಧರಿಗೆ ಹೆಚ್ಚುವರಿ ಸಮವಸ್ತ್ರಗಳನ್ನು ಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ.ಉದಾಹರಣೆಗೆ ಪಾರ್ತಪುರ್​ ಮತ್ತು ಥೋಯಿಸ್​ನಲ್ಲಿ ನೆಲೆಗೊಂಡಿರುವ ಯೋಧರಿಗೆ ಸಿಯಾಚಿನ್​ನಲ್ಲಿ ಧರಿಸುವಂಥ ಸಮವಸ್ತ್ರಗಳನ್ನು ಕೊಡಲಾಗಿದೆ. ಲೇಹ್​ನಲ್ಲಿ ಈ ಎರಡು ಪ್ರದೇಶಗಳು ಒಂದೇ ಎತ್ತರದಲ್ಲಿವೆ. ಆದ್ದರಿಂದ, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರಿಂದ ಜಾಕೆಟ್​ಗಳು, ಟ್ರೌಷರ್​ಗಳು, ಗ್ಲೌಸ್​ಗಳು, ಬೂಟು ಮತ್ತು ಗಾಗಲ್ಸ್​ ಅನ್ನು ಅಕ್ಸಯ್​ ಚಿನ್​ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಕೊಡುವಂತೆ ಕೇಳಲಾಗುತ್ತದೆ ಎಂದು ಮತ್ತೊಮ್ಮೆ ಸೇನಾಪಡೆ ಕಮಾಂಡರ್​ ತಿಳಿಸಿದ್ದಾರೆ.
ಏನೂ ಮಾಡ್ದೇ 19 ಲಕ್ಷಕ್ಕೂ ಹೆಚ್ಚು ವೀವ್ಸ್​ ಪಡೆದ ಯೂಟ್ಯೂಬರ್: ಈ ವಿಡಿಯೋ ನೋಡ್ಬೇಡಿ, ಶಾಕ್​ ಆಗ್ಬೋದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + 15 =
Remember me
