ನವದೆಹಲಿ:ಹಲವು ಬಾರಿ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡ ಕಳೆದ ಐಪಿಎಲ್​ ಸೀಸನ್​ನಲ್ಲಿ ಪ್ಲೇಆಫ್​ ಹಂತಕ್ಕೇರಲು ವಿಫಲವಾಯಿತು. ಘಟಾನುಘಟಿ ಆಟಗಾರರಿದ್ದರೂ ಹೀನಾಯವಾಗಿ ಸೋಲುವ ಮೂಲಕ ಭಾರಿ ಅವಮಾನ ಎದುರಿಸಿತು. ಈಗ ಮತ್ತೆ ಉತ್ತಮ ತಂಡ ರಚಿಸುವ ಭರವಸೆ ಹೊಂದಿರುವ ಮುಂಬೈ ತಂಡ, 2023ರಲ್ಲಿ ನಡೆಯಲಿರುವ ಐಪಿಎಲ್​ ಹರಾಜಿಗೂ ಮುನ್ನ 13 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
ರೋಹಿತ್ ಶರ್ಮ ನೇತೃತ್ವದ ತಂಡವು ಐಪಿಎಲ್-2022 ಸೀಸನ್​ನಲ್ಲಿ ಉತ್ತಮ ಆರಂಭ ಕಂಡರೂ ಅಂತಿಮವಾಗಿ ಪಂದ್ಯಾವಳಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿತು. ಸ್ಪರ್ಧೆಯ ಲೀಗ್ ಹಂತದಲ್ಲಿ 10 ಸೋಲುಗಳನ್ನು ಅನುಭವಿಸಿದ ಮುಂಬೈ, ಕೇವಲ ನಾಲ್ಕು ಪಂದ್ಯದಲ್ಲಿ ಗೆಲುವು ದಾಖಲಿಸಿತು.
ಇದೀಗ ಮುಂಬರುವ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಮುಂಬೈ ತಂಡ, ಮುಂದಿನ ಐಪಿಎಲ್​ ಹರಾಜಿಗೆ ಸಜ್ಜಾಗುತ್ತಿದೆ. ಈ ಬಾರಿ ಬೌಲಿಂಗ್ ದಾಳಿಯನ್ನು ಪರಿಷ್ಕರಿಸುವ ನಿರೀಕ್ಷೆಯನ್ನು ಹೊಂದಿದೆ. ಸ್ಟಾರ್ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ವೇಗದ ಬೌಲರ್​ ಜೋಫ್ರಾ ಆರ್ಚರ್ ಪ್ರಮುಖ ಬೌಲರ್​ಗಳಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸ್ಪಿನ್​ ಕೊರತೆ ಇದೆ. ಹೀಗಾಗಿ ಆ ಸ್ಥಾನ ಯಾವ ಆಟಗಾರನಿಗೆ ಸಿಗುತ್ತದೆ ಎಂಬುದು ಬಹಳ ಕುತೂಹಲಕಾರಿಯಾಗಿದೆ.
ಭಾರತದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಅವರ ಪ್ರಕಾರ ಮುಂಬೈ ಇಂಡಿಯನ್ಸ್​ ತಂಡವು 2023ರಲ್ಲಿ ನಡೆಯಲಿರುವ ಐಪಿಎಲ್​ ಹರಾಜಿನಲ್ಲಿ ಸ್ಪಿನ್​ ಮಾತ್ರಿಕರಾದ ಆ್ಯಡಂ ಝಂಪಾ ಮತ್ತು ಆದಿಲ್​ ರಶೀದ್​ ಅವರನ್ನು ಟಾರ್ಗೆಟ್​ ಮಾಡಬೇಕು ಎಂದಿದ್ದಾರೆ. ಪ್ರತಿಯೊಂದು ಐಪಿಎಲ್​ ತಂಡಕ್ಕೂ ರಶೀದ್​ ಖಾನ್​ ರೀತಿಯ ಆಟಗಾರ ಬೇಕಿದೆ. ಪ್ರತಿಯೊಬ್ಬರು ರಶೀದ್ ಖಾನ್ ಅಥವಾ ಸುನಿಲ್ ನರೈನ್ ಅವರನ್ನು ಟಾರ್ಗೆಟ್​​ ಮಾಡಿದ್ದಾರೆ. ಆದ್ದರಿಂದ ಬಹುಶಃ ಝಂಪಾ ಅಥವಾ ಆದಿಲ್ ರಶೀದ್ ಅವರಂತಹ ಲೆಗ್-ಸ್ಪಿನ್ನರ್ ಅನ್ನು ಹುಡುಕಲು ಯಾರಾದರೂ ಬರಬಹುದು. ಏಕೆಂದರೆ ಕಳೆದ ಸೀಸನ್​ನಲ್ಲಿ ಇಬ್ಬರ ಪ್ರದರ್ಶನಗಳು ಹೊರತಾಗಿಯೂ ಇತರ ಎಲ್ಲಾ ಅಂಶಗಳು ಸರಿಯಾಗಿವೆ ಎಂದು ತಮ್ಮ ಅಭಿಪ್ರಾಯವನ್ನು ಮಂಜ್ರೇಕರ್​ ಅವರು ಸ್ಟಾರ್​ ಸ್ಪೋರ್ಟ್ಸ್​ ಶೋನಲ್ಲಿ ವ್ಯಕ್ತಪಡಿಸಿದರು.
ಮುಂಬೈ ಇಂಡಿಯನ್ಸ್​ ತಂಡ ರಾಹುಲ್​ ಚಾಹರ್​ ಅವರನ್ನು ಉಳಿಸಿಕೊಳ್ಳಬೇಕಿತ್ತು ಎಂದು ಇದೇ ವೇಳೆ ಮಂಜ್ರೇಕರ್​ ಹೇಳಿದರು. ಮಾಜಿ ಮುಂಬೈ ಇಂಡಿಯನ್ಸ್​ ಸ್ಪಿನ್ನರ್​ ಆಗಿರುವ ಚಾಹರ್​ರನ್ನು ಪಂಜಾಬ್​ ತಂಡ ಕಳೆದ ಸೀಸನ್​ನಲ್ಲಿ 5.25 ಕೋಟಿ ರೂ.ಗೆ ಬಿಕರಿ ಮಾಡಿತು. ಹೌದು, ಚಾಹರ್​ ರಿಸ್ಟ್​ ಸ್ಪಿನ್ನರ್. ಪಂಜಾಬ್​ ಅವರು ಎಂ. ಅಶ್ವಿನ್ ಅವರನ್ನು ಕೈಬಿಟ್ಟಿದ್ದಾರೆ. ಅವರು ಲೆಗ್​ ಸ್ಪಿನ್ನರ್​ ಇತಿಹಾಸವನ್ನು ಹೊಂದಿದ್ದು, ಮಾರ್ಕಂಡೆ ಸಹ ಇದ್ದರು. ಚಾಹರ್​ ಅವರನ್ನು ಮುಂಬೈ ಬಿಡಬಾರದಿತ್ತು. ಆದರೆ, ಕೈಬಿಟ್ಟಿದ್ದಾರೆ. ಮತ್ತೊಬ್ಬ ರಿಸ್ಟ್​ ಸ್ಪಿನ್ನರ್​ ತಬ್ರೇಜ್​ ಶಮ್ಸಿ ಅವರ ಮೇಲೂ ಮುಂಬೈ ಇಂಡಿಯನ್ಸ್​ ಆಸಕ್ತಿ ತೋರಬಹುದು ಎಂದು ಮಂಜ್ರೇಕರ್ ಹೇಳಿದರು.(ಏಜೆನ್ಸೀಸ್​)
ಕೋವಿಡ್​ ಭೀತಿ: ಭಾರತ್​ ಜೋಡೋ ಯಾತ್ರೆ ರದ್ದುಗೊಳಿಸಲು ರಾಹುಲ್​ ಗಾಂಧಿಗೆ ಆರೋಗ್ಯ ಸಚಿವರ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
