ನವದೆಹಲಿ:‘ಕಾಣೆಯಾಗಿದ್ದಾರೆ..’ ಇಂಥದ್ದೊಂದು ಪ್ರಕಟಣೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ದೇಶದಲ್ಲಿ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆಯಂತೂ ಹಿಂದಿನ ವರ್ಷಕ್ಕಿಂತಲೂ ಹೆಚ್ಚಳಗೊಂಡಿದೆ. ಭಾರತದಲ್ಲಿ ದಿನವೊಂದಕ್ಕೆ 1,157 ಮಹಿಳೆಯರು ನಾಪತ್ತೆ ಆಗುತ್ತಿದ್ದಾರೆ.
ಭಾರತದಲ್ಲಿ ಪ್ರತಿ ತಿಂಗಳೂ 35,000 ಮಹಿಳೆಯರು ಕಾಣೆಯಾಗುತ್ತಿದ್ದಾರೆ. ನ್ಯಾಷನಲ್​ ಕ್ರೈಮ್​ ಬ್ಯೂರೋ ರೆಕಾರ್ಡ್ಸ್ (ಎನ್​ಸಿಆರ್​ಬಿ) 2019ರ ವರದಿ ಪ್ರಕಾರ ದೇಶದಲ್ಲಿ 4,22,439 ಮಹಿಳೆಯುರು ನಾಪತ್ತೆ ಆಗಿದ್ದಾರೆ. ಆ ಪೈಕಿ ಮಹಾರಾಷ್ಟ್ರದಲ್ಲಿ 67746, ಪಶ್ಚಿಮ ಬಂಗಾಳದಲ್ಲಿ 64382, ರಾಜಸ್ಥಾನದಲ್ಲಿ 22375, ದೆಹಲಿಯಲ್ಲಿ 27310 ಮತ್ತು ಒಡಿಶಾದಲ್ಲಿ 21569 ಮಹಿಳೆಯರು ನಾಪತ್ತೆ ಆಗಿದ್ದಾರೆ.
ಇದನ್ನೂ ಓದಿ:ಕೋಳಿತ್ಯಾಜ್ಯದಿಂದ ತಯಾರಿತ ಈ ಬಯೋಡೀಸೆಲ್​ ಕೊಡುತ್ತೆ 38 ಕಿ.ಮೀ. ಮೈಲೇಜ್: ಸಂಶೋಧಕನಿಗೆ ಸಿಕ್ಕಿತು ಪೇಟೆಂಟ್​
4,22,439 ಮಂದಿಯ ಪೈಕಿ 222949 ಮಹಿಳೆಯರನ್ನು ಪತ್ತೆ ಮಾಡಿರುವುದಾಗಿ ಎನ್​ಸಿಆರ್​ಬಿ ತಿಳಿಸಿದೆ. ಅಂದರೆ ನಾಪತ್ತೆಯಾದವರ ಪೈಕಿ ಶೇ. 52.8 ಮಹಿಳೆಯರು ಪತ್ತೆಯಾಗಿದ್ದು, ಶೇ. 48.2 ಮಹಿಳೆಯರ ಸುಳಿವೇ ಸಿಕ್ಕಿಲ್ಲ. ಇನ್ನು 2018ಕ್ಕೆ ಹೋಲಿಸಿದರೆ 2019ರಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ಶೇ. 9.8 ಹೆಚ್ಚಾಗಿದೆ. 2018ರಲ್ಲಿ 384685 ಮಹಿಳೆಯರು ನಾಪತ್ತೆ ಆಗಿದ್ದು, 209852 (ಶೇ.54.6) ಮಂದಿ ಪತ್ತೆಯಾಗಿದ್ದರು. ಪತ್ತೆಯಾಗದೆ ಉಳಿದವರ ಕಥೆ ಏನು ಎಂಬುದರ ಸುಳಿವಿಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನಾಪತ್ತೆ ಪ್ರಕರಣ ಹೆಚ್ಚಳಗೊಂಡಿರುವುದು ಕೂಡ ಆತಂಕ ಹೆಚ್ಚಿಸಿದೆ. (ಏಜೆನ್ಸೀಸ್)
ಇದು ಕರೊನಾ ಲಸಿಕೆ ಇನ್ನೂ ಪಡೆಯದವರು ಓದಲೇಬೇಕಾದ ವಿಷಯ: ಹೊರಬಿತ್ತು ಮತ್ತೊಂದು ಅಧ್ಯಯನ ವರದಿ

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 1 =
Remember me
