ಪಾಟ್ನಾ:ಭಾರತೀಯ ಜನತಾ ಪಕ್ಷ ಇದೀಗ ಪ್ರತಿಯೊಬ್ಬರಿಗೂ ಉಚಿತವಾಗಿ ಕರೊನಾ ಲಸಿಕೆ ನೀಡಲಿರುವುದಾಗಿ ಭರವಸೆ ನೀಡಿದೆ. ಇಂಥದ್ದೊಂದು ಭರವಸೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಹಿರಂಗ ಪಡಿಸಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಒಂದು ಉದಾಹರಣೆಯನ್ನೇ ಸೃಷ್ಟಿಸಿದೆ. ಇಂಡಿಯನ್​ ಕೌನ್ಸಿಲ್​ ಆಫ್ ಮೆಡಿಕಲ್​ ರಿಸರ್ಚ್​ (ಐಸಿಎಂಆರ್​​)ನಿಂದ ಲಸಿಕೆಗೆ ಅನುಮೋದನೆ ಸಿಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಉಚಿತವಾಗಿ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅದಾಗ್ಯೂ ಈ ಬಗ್ಗೆ ಎಲ್ಲರೂ ಖುಷಿಯಾಗುವಂತಿಲ್ಲ. ಏಕೆಂದರೆ ಅವರು ಇಂಥದ್ದೊಂದು ಭರವಸೆ ನೀಡಿರುವುದು ಬಿಹಾರ ಜನತೆಗೆ. ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಇದು ತಮ್ಮ ಪಕ್ಷದ ಬಿಹಾರ ಚುನಾವಣೆ ಪ್ರಣಾಳಿಕೆಯಲ್ಲಿನ ಮೊದಲ ಅಂಶ ಎಂಬುದಾಗಿ ಹೇಳಿದ್ದಾರೆ. ಮಾತ್ರವಲ್ಲ, ನಮ್ಮ ಆಶ್ವಾಸನೆ ಬಗ್ಗೆ ಯಾರಾದರೂ ಕೊಂಕೆತ್ತಿದರೆ ನಾವು ನೀಡಿದ್ದ ಭರವಸೆ ಈಡೇರಿಸುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × five =
Remember me
