ನವದೆಹಲಿ:ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದನ್ನು ನೆನಪಿಸುವಂಥ ಪ್ರಕರಣವಿದು. ಇಲ್ಲಿ ಬ್ಯಾಂಕ್ ಅಧಿಕಾರಿಯೇ ಗ್ರಾಹಕರ ಖಾತೆಯಿಂದ ಕೋಟಿಗಟ್ಟಲೆ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧಿತನಾಗಿದ್ದಾನೆ.
ಆರ್​ಬಿಎಲ್​ ಬ್ಯಾಂಕ್​ನ ಮಾಜಿ ಸಹಾಯಕ ಉಪಾಧ್ಯಕ್ಷ ನಾಗೇಂದ್ರ ಕುಮಾರ್ ಎಂಬಾತನೇ ಆರೋಪಿ. ಈತ ಬ್ಯಾಂಕ್​ನ ಇಬ್ಬರು ಗ್ರಾಹಕರ ಖಾತೆಯಿಂದ ಒಟ್ಟು 19.8 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. 2020ರ ಆಗಸ್ಟ್​​ನಲ್ಲಿ ಈತ ಈ ಅಪರಾಧ ಎಸಗಿದ್ದ.
ದೆಹಲಿಯ ವಸಂತಕುಂಜ ಪ್ರದೇಶದಲ್ಲಿ ಆರ್​ಬಿಎಲ್​ ಬ್ಯಾಂಕ್​ನ ಸಹಾಯಕ ಉಪಾಧ್ಯಕ್ಷನಾಗಿದ್ದ ಈತನನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.ಮೆಸರ್ಸ್​ ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಜುಬಿಲೆಂಟ್ ಅಗ್ರಿ ಆ್ಯಂಡ್ ಕನ್ಸ್ಯೂಮರ್ ಪ್ರಾಡಕ್ಟ್ಸ್​ ಲಿಮಿಟೆಡ್ ಕಂಪನಿಗಳ ಖಾತೆಯ ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ 2020ರ ಆ.7ರಂದು ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ಸಲ್ಲಿಕೆಯಾಗಿತ್ತು.
ಈ ಮೇರೆಗೆ ತನಿಖೆ ನಡೆಸಿದಾಗ ನಾಗೇಂದ್ರ ಕುಮಾರ್ ಈ ಎರಡು ಖಾತೆಗಳಿಂದ ಐಸಿಐಸಿಐ ಮತ್ತು ಎಚ್​​ಡಿಎಫ್​ಸಿ ಬ್ಯಾಂಕ್​ಗಳಲ್ಲಿರುವ ತನ್ನ ಖಾತೆಗಳಿಗೆ 19.8 ಕೋಟಿ ರೂ. ವರ್ಗಾಯಿಸಲು ಯತ್ನಿಸಿರುವುದು ಕಂಡುಬಂದಿತ್ತು.
ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..
ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 1 =
Remember me
