ನವದೆಹಲಿ:1995ರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ(RJD) ಪಕ್ಷದ ಮಾಜಿ ಲೋಕಸಭೆ ಸದಸ್ಯ ಪ್ರಭುನಾಥ್​ ಸಿಂಗ್​ ಅವರಿಗೆ ಸುಪ್ರೀಂ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.
1995ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಮತ ಚಲಾಯಿಸದರೆಂಬ ಕಾರಣಕ್ಕೆ ಪ್ರಭುನಾಥ್​ ಸಿಂಗ್​ ಇಬ್ಬರು ವ್ಯಕ್ತಿಗಳನ್ನು ಅಮಾನುಷವಾಗಿ ಹೊಡೆದು ಕೊಲೆ ಮಾಡಿದ್ದರು. ಪ್ರಭುನಾಥ್​ ಸಿಂಗ್​ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹಾಗೂ ಪಟ್ನಾ ಹೈಕೋರ್ಟ್​ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್​ ಆಗಸ್ಟ್​ 18ರಂದು ತಡೆ ನೀಡಿತ್ತು.
ಪ್ರಕಣರದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್​.ಕೆ. ಕೌಲ್​​, ಅಭಯ್​​.ಎಸ್​. ಓಕಾ, ವಿಕ್ರಮ್​ನಾಥ್​ ಅವರಿದ್ದ ತ್ರಿಸದಸ್ಯ ಪೀಠವು ಭಾರತೀಯ ದಂಡ ಸಂಹಿತೆ(IPC Section) 302, 307ರ ಅಡಿಯಲ್ಲಿ ಪ್ರಭುನಾಥ್​ ಸಿಂಗ್​ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಮೇಲಿನ ವಾದ ಆಲಿಸಿದ ತ್ರಿಸದಸ್ಯ ಪೀಠವು ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ಥರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಅಪರಾಧಿಗೆ ಸೂಚಿಸಿದೆ.
ಇದನ್ನೂ ಓದಿ:ಬಿ.ಎಸ್​.ವೈಗೆ ಸೆಡ್ಡು ಹೊಡೆಯಲು ಇಂದಿನ ಸಭೆ ಸೀಮಿತವಾಗಿದೆ: ರಾಜ್ಯ ಕಾಂಗ್ರೆಸ್​
ರಾಷ್ಟ್ರೀಯ ಜನತಾ ದಳ ಪಕ್ಷದ ಪ್ರಭಾವಿ ನಾಯಕರಾಗಿರುವ ಪ್ರಭುನಾಥ್​ ಸಿಂಗ್​ 12, 13 ಹಾಗೂ 14ನೇ ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 1985 ರಿಂದ 95ರವರೆಗೆ ಬಿಹಾರದ ಸರನ್​ ಜಿಲ್ಲೆಯ ಮಸ್ರಖ್​ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಿಂದ 2009ರ ವರೆಗೆ ಮಹಾರಾಜ್​ಗಂಜ್​ ಲೋಕಸಭೆ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿದ್ದರು.
ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಬಿಹಾರದ ಸರನ್​ ಜಿಲ್ಲೆಯ ಚಾಪ್ರಾದಲ್ಲಿ ತಮ್ಮ ವಿರುದ್ಧ ಮತ ಚಲಾಯಿಸಿದೆಂಬ ಕಾರಣಕ್ಕೆ ಪ್ರಭುನಾಥ್​ ಸಿಂಗ್​ ಇಬ್ಬರನ್ನು ಕೊಲೆ ಮಾಡಿದ್ದರು. ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ನಾಶಪಡಿಸುವುದಕ್ಕೆ ಆರೋಪಿ ಇನ್ನಿಲ್ಲದ ಪ್ರಯತ್ನ ನಡೆಸಿರುವುದನ್ನು ಗಮನಿಸಿರುವುದಾಗಿ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
