ರಾಜ್‌ಕೋಟ್:ಭೀಕರ ಘಟನೆಯಲ್ಲಿ ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿ ಮಹಿಳೆಯೊಬ್ಬಳನ್ನು ತನ್ನ ಮಾಜಿ ಪ್ರಿಯತಮ ಇರಿದು ಕೊಂದಿದ್ದಾನೆ.ಸೋಮವಾರ ಸಂಜೆ ಜಿಲ್ಲೆಯ ದೌಲತ್‌ಪುರ ಜಿಐಡಿಸಿ ಪ್ರದೇಶದ ಜನನಿಬಿಡ ಮಾರುಕಟ್ಟೆ ಸಮೀಪ ಈ ಘಟನೆ ನಡೆದಿದೆ. ಕೊಲೆಗೀಡಾದ ಯುವತಿಯನ್ನು ಭಾವನಾ ಸೋನು ಗೋಸ್ವಾನಿ (30) ಎಂದು ಗುರುತಿಸಲಾಗಿದೆ.ಸಂಜಯ್ ಪ್ರವೀಣ್ ಎಂದು ಗುರುತಿಸಲ್ಪಟ್ಟ ಆರೋಪಿ ಸಾಮಾನ್ಯ ಕೂಲಿ ಕಾರ್ಮಿಕ. ಆತ ಆಕೆಗೆ ಹತ್ತಾರು ಬಾರಿ ಇರಿದಿದ್ದು, ಆಕೆಯ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.
ಇದನ್ನೂ ಓದಿ:ಆಕೆಯ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡ ಪೊಲೀಸ್ ಇನ್ಸ್​ಪೆಕ್ಟರ್.. ಮುಂದೇನಾಯ್ತು?
ಅಮ್ರೆಲಿಯ ಲಾಥಿ ಪಟ್ಟಣದ ನಿವಾಸಿ ಸಂಜಯ್. ಆಕೆ ಇನ್ನೊಬ್ಬಾತನೊಂದಿಗೆ ಪ್ರೇಮಪಾಶಕ್ಕೆ ಸಿಲುಕಿ ತನ್ನಿಂದ ದೂರವಾಗಿರುವುದೇ ಈ ಅಪರಾಧವೆಸಗಲು ಕಾರಣ ಎಂದು ತಿಳಿದುಬಂದಿದೆ.ಮಹಿಳೆಯನ್ನು ಕೊಂದ ನಂತರ ಆರೋಪಿ ಆಕೆಯ ದೇಹದ ಪಕ್ಕದಲ್ಲಿ ಕುಳಿತಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಭಾವನಾಳ ಸಹೋದರ ಭರತ್ ಶೇಖ್ ಜುನಾಗಢ ಪೊಲೀಸರಿಗೆ ದೂರು ನೀಡಿದ್ದಾರೆ.2012-13ರಲ್ಲಿ ಮದುವೆಯಾದ ನಂತರ ತನ್ನ ಸಹೋದರಿ ಆರೋಪಿಯೊಂದಿಗೆ ಸಂಪರ್ಕಕ್ಕೆ ಹೊಂದಿದ್ದು, ಮದುವೆಯ ನಂತರ ಅಮ್ರೆಲಿಯ ಬಾಗಸ್ರಾದ ತನ್ನ ಊರಿನಿಂದ ಲಾಥಿಗೆ ಸ್ಥಳಾಂತರಗೊಂಡಿದ್ದಳು ಎಂದು ಶೇಖ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ
” ಮತ್ತೆ ತನ್ನೊಂದಿಗೆ ಸಂಬಂಧವನ್ನು ಮುಂದುವರಿಸುವಂತೆ ಆತ ನನ್ನ ಸಹೋದರಿಯನ್ನು ಪೀಡಿಸುತ್ತಿದ್ದ. ಇದು ಆಕೆಗೆ ಇಷ್ಟವಿರಲಿಲ್ಲ. ನಂತರ, ಭಾವನಾ ಸೋಷಿಯಲ್ ಮೀಡಿಯಾದಲ್ಲಿ ಸೋನು ಗೋಸ್ವಾಮಿಯನ್ನು ಭೇಟಿಯಾದಳು. ಒಂಬತ್ತು ತಿಂಗಳ ಹಿಂದೆ ಆತನೊಂದಿಗೆ ಲಿವ್-ಇನ್ ಸಂಬಂಧವನ್ನು ಇಟ್ಟುಕೊಂಡಿದ್ದಳು. ನಂತರ ಸೋನು ಜೊತೆ ಜುನಾಗಢ್ ಗೆ ಸ್ಥಳಾಂತರಗೊಂಡಳು. ಆಕೆಯ ಹೊಸ ಸಂಬಂಧದ ಬಗ್ಗೆ ತಿಳಿದ ನಂತರ ಸಂಜಯ್ ಭಾವನಾಳನ್ನು ಪೀಡಿಸಲು ಪ್ರಾರಂಭಿಸಿದ.ಸಂಜಯ್ ಸೋಮವಾರ ಜುನಾಗಢಕ್ಕೆ ಬಂದು ಭಾವನಾಳ ಚಲನವಲನಗಳನ್ನು ಪತ್ತೆ ಹಚ್ಚಲಾರಂಭಿಸಿದ. ಅವಳು ತರಕಾರಿ ಮಾರುಕಟ್ಟೆಗೆ ಹೋಗುವಾಗ ಸಂಜಯ್ ಅವಳನ್ನು ತಡೆದು ತನ್ನೊಂದಿಗೆ ಬರಲು ಕೇಳಿಕೊಂಡ. ಇದಕ್ಕೆ ಆಕೆ ನಿರಾಕರಿಸಿದ್ದರಿಂದ, ಆತ ಆಕೆಗೆ ಹಲವು ಬಾರಿ ಇರಿದ. ಸ್ಥಳದಲ್ಲೇ ಆಕೆ ಸಾವಿಗೀಡಾಗಿದ್ದಾಳೆ.
ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
