ರಾಯ್​ಪುರ:ತೀವ್ರ ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ (74) ಇಂದು ಮೃತಪಟ್ಟಿದ್ದಾರೆ.
ಮೇ 9ರಂದು ಮಧ್ಯಾಹ್ನ ಗಂಟಲಿನಲ್ಲಿ ಹುಣಸೆ ಬೀಜ ಸಿಲುಕಿಕೊಂಡ ಹಿನ್ನೆಲೆಯಲ್ಲಿ, ಉಸಿರಾಟ ತೊಂದರೆಯಾಗಿ ಅವರು ಕುಸಿದು ಬಿದ್ದಿದ್ದರು. ಅವರಿಗೆ ಹೃದಯ ಸ್ತಂಭನ ಉಂಟಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವರುಗೆ ಅವರ ನಿವಾಸದಲ್ಲೇ ಹೃದಯ-ಶ್ವಾಸಕೋಶದ ಪುನಶ್ಚೇತನ ಕ್ರಿಯೆಯನ್ನು ನಡೆಸಿ ನಂತರ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ಬಳಿಕ ಅವರು ಕೋಮಾಕ್ಕೆ ಜಾರಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಕೋಮಾದಲ್ಲಿರುವ ಅವರನ್ನು ಪ್ರಜ್ಞಾವಸ್ಥೆಗೆ ತರಲು ವೈದ್ಯರು ‘ಆಡಿಯೋ ಥೆರಪಿ’ ಆರಂಭಿಸಲಾಗಿತ್ತು. ಈ ಮೂಲಕ ಜೋಗಿ ಅವರ ನೆಚ್ಚಿನ ಹಾಡುಗಳನ್ನು ಇಯರ್‌ಫೋನ್‌ ಮೂಲಕ ಅವರಿಗೆ ಕೇಳಿಸಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ ಮತ್ತೊಮ್ಮೆ ಹೃದಯಾಘಾತ ಆಗಿರುವ ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸೇರಲು ಸಿದ್ಧವಾಗಿ ನಿಂತಿದ್ದಾರೆ ಕಾಂಗ್ರೆಸ್​ನ 20 ಶಾಸಕರು!
ಛತ್ತೀಸಗಢದ ರಾಜ್ಯ ರಚನೆಯ ಬಳಿಕ 2000 ನವೆಂಬರ್​ನಿಂದ 2003ರ ನವೆಂಬರ್​ವರೆಗೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅಜಿತ್ ಜೋಗಿ ಕಾರ್ಯನಿರ್ವಹಿಸಿದ್ದರು. ಕೆಲ ಆರೋಪಗಳು ಕೇಳಿ ಬಂದ ನಂತರ ಅವರನ್ನು ಉಚ್ಛಾಟಿಸಲಾಗಿತ್ತು. ಆನಂತರ ಅವರು ತಮ್ಮ ಪುತ್ರ ಅಮಿತ್​ ಜೋಗಿ ಜತೆಗೂಡಿ 2016ರಲ್ಲಿ ತಮ್ಮದೇ ಆದ ಜನತಾ ಕಾಂಗ್ರೆಸ್ ಛತ್ತೀಸ್​ಗಢ ಪಕ್ಷ ಕಟ್ಟಿದ್ದರು. ನಂತರ ಮಾರ್ವಾಹಿ ಕ್ಷೇತ್ರದ ಶಾಸಕರಾಗಿದ್ದರು.
ಮೃತರು ಪತ್ನಿ ಶಾಸಕಿ ರೇಣು ಜೋಗಿ ಹಾಗೂ ಪುತ್ರ ಶಾಸಕ ಅಮಿತ್ ಜೋಗಿ ಅವರನ್ನು ಅಗಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
