ಬೆತುಲ್​:ಪೂಜೆ ಮಾಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಮಧ್ಯಪ್ರದೇಶದ ಮಾಜಿ ಶಾಸಕ ಹಾಗೂ ಕಾಂಗ್ರೆಸ್​ ನಾಯಕ ವಿನೋದ್​ ದಗಾ ಮೃತಪಟ್ಟಿದ್ದಾರೆ. ನವೆಂಬರ್​ 12ರಂದು ಘಟನೆ ನಡೆದಿದ್ದು, ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ವಿನೋದ್​ ದಗಾ ಮಧ್ಯಪ್ರದೇಶದ ಬೆತುಲ್​ ಕ್ಷೇತ್ರದ ಮಾಜಿ ಶಾಸಕರು. ಕಳೆದ ಗುರುವಾರ ಬೆಳಗ್ಗೆ ಪ್ರತಿನಿತ್ಯದಂತೆ ಬೆತುಲ್​ನಲ್ಲಿರುವ ಜೈನ್​ ದದಾವಡಿ (ಜೈನರ ದೇವಸ್ಥಾನ)ಗೆ ಪೂಜೆಗೆಂದು ತೆರಳಿದ್ದರು. ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿರುವಂತೆ ದಗಾ ಅವರು ವಿಗ್ರಹಕ್ಕೆ ಪೂಜೆ ಮಾಡುತ್ತಲೇ ಹೃದಯಾಘಾತದಿಂದ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಜಾಹೀರಾತು ನೋಡಿ ಕಾಲ್​ಗರ್ಲ್​ಗೆ ಕರೆ ಮಾಡಿದ: ಮನೆಗೆ ಬಂದ ಯುವತಿಯಿಂದ ಕಾದಿತ್ತು ಶಾಕ್!​​
ದಗಾ ಅವರನ್ನು ಇತ್ತೀಚೆಗಷ್ಟೇ ಮೆಘಾನ್​ ಉಪಚುನಾವಣೆಯ ಉಸ್ತುವಾರಿಯನ್ನಾಗಿ ಕಾಂಗ್ರೆಸ್​ ನೇಮಿಸಿತ್ತು. ಘಟನೆ ನಡೆದ ಹಿಂದಿನ ದಿನ ದಗಾ ಅವರು ಭೋಪಾಲ್​ನಲ್ಲಿ ಸಭೆ ಮುಗಿಸಿಕೊಂಡು ಬೆತುಲ್​ಗೆ ಮರಳಿದ್ದರು.
ರಾಜ್ಯ ಕಾಂಗ್ರೆಸ್​ನಲ್ಲಿ ದಗಾ ಅವರು ಅನೇಕ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಕೇಂದ್ರ ಸಹಕಾರ ಬ್ಯಾಂಕ್​ನ ಅಧ್ಯಕ್ಷರು ಆಗಿದ್ದರು. ಸದಾ ಇನ್ನಬ್ಬರೊಂದಿಗೆ ಬೆರೆಯುವ, ಸರಳ ಮತ್ತು ಹರ್ಷಚಿತ್ತದ ನಾಯಕನಾಗಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಇಂತಹ ನಾಯಕನ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್​ ನಾಯಕರು ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 4 =
Remember me
