ನವದೆಹಲಿ/ಪಟನಾ:ಇತ್ತೀಚೆಗಷ್ಟೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆ ತೊರೆದು ಜೆಡಿಯು ಸೇರಿರುವ ಗುಪ್ತೇಶ್ವರ ಪಾಂಡೆಗೆ ಟಿಕೆಟ್ ದೊರಕಿಲ್ಲ. ಆದರೆ, ಮಾಜಿ ಕಾನ್​ಸ್ಟೆಬಲ್ ಪುರುಷೋತ್ತಮ ಚತುರ್ವೆದಿ ಬಿಜೆಪಿಯಿಂದ ಟಿಕೆಟ್ ಗಟ್ಟಿಸಿಕೊಂಡು, ಬಕ್ಸರ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪಾಂಡೆ ತಮ್ಮ ತವರೂರಾದ ಬಕ್ಸರ್​ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಾಂಡೆಯವರನ್ನು ನ. 7ಕ್ಕೆ ಉಪಚುನಾವಣೆ ನಡೆಯಲಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ:ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ
ಬಿಹಾರದಲ್ಲಿ ಸೀಟು ಹಂಚಿಕೆ ಹಾಗೂ ನಾಯಕತ್ವ ವಿಚಾರದಲ್ಲಿ ಮುನಿಸಿಕೊಂಡು ಎನ್​ಡಿಎ ತೊರೆದಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನತಾಂತ್ರಿಕ ಪಕ್ಷವು (ಎಲ್​ಜೆಪಿ) ಬಿಜೆಪಿ ಹಾಗೂ ಜೆಡಿಯು ಬಿಟ್ಟು ಬರುತ್ತಿರುವ ನಾಯಕರಿಗೆ ಗಾಳ ಹಾಕಿದೆ. ಕೆಲವು ಹಾಲಿ ಹಾಗೂ ಮಾಜಿ ಶಾಸಕರ ಸಹಿತ ಸುಮರು 10 ಬಿಜೆಪಿ ನಾಯಕರಿಗೆ ಎಲ್​ಜೆಪಿ ಟಿಕೆಟ್ ಸಿಗುವ ಸಂಭವವಿದೆ. ಜೆಡಿಯು ಟಿಕೆಟ್ ನಿರಾಕರಿಸಿರುವ ಇಬ್ಬರು ಹಾಲಿ ಶಾಸಕರಿಗೆ ಕೂಡ ಎಲ್​ಜಿಪಿಯಿಂದ ಟಿಕೆಟ್ ದೊರೆಯುವುದು ಖಚಿತವಾಗಿದೆ.
ನಾಡಬಾಂಬ್ ಎಸೆದ್ರು ನಮ್ಮ ರ‍್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − four =
Remember me
