ಮುಂಬೈ:ಯುವಕನೊಬ್ಬ ಐಫೋನ್​ಗಾಗಿ ತನ್ನ ಮಾಜಿ ಪ್ರೇಯಸಿಯನ್ನೇ ಅಪಹರಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.ಇದನ್ನೂ ಓದಿ:ಆಕ್ಸಿಜನ್ ಮಾಸ್ಕ್‌ಗೆ ಬೆಂಕಿ ತಗುಲಿ ವ್ಯಕ್ತಿ ಸಾವು: ಕುಟುಂಬದವರಿಂದ ನಿರ್ಲಕ್ಷ್ಯ ಆರೋಪಘಟನೆಗೆ ಸಂಬಂಧಿಸಿದಂತೆ 26 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಕಾರಣಾಂತರಗಳಿಂದ ಹೆಸರನ್ನು ಬಹಿರಂಗಪಡಿಸಿಲ್ಲ. ಆರೋಪಿ ಮತ್ತು ಸಂತ್ರಸ್ತೆ ಜನವರಿಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆರೋಪಿ ಜತೆಗೆ ಹಲವು ತಿಂಗಳು ಅನ್ಯೋನ್ಯವಾಗಿದ್ದ ಸಂತ್ರಸ್ತೆ ಆತನಿಗೆ ವಿವಾಹವಾಗಿದೆ ಎಂದು ತಿಳಿದ ಕೂಡಲೇ ಆತನನ್ನು ದೂರ ಮಾಡಿದ್ದಳು.ಇದರಿಂದ ಕುಪಿತಗೊಂಡ ಆರೋಪಿ ಸಂತ್ರಸ್ತೆಯ ಕೆಲ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಆಕೆಯನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದ. ಆಗ ಆಕೆ ಅವನನ್ನು ಒಂದೆರಡು ಬಾರಿ ಭೇಟಿ ಮಾಡಿದ್ದಳು. ಕಳೆದ ಬುಧವಾರ ಆರೋಪಿಯು ಸಂತ್ರಸ್ತೆಗೆ ಮತ್ತೆ ಭೇಟಿಯಾಗಲು ತಿಳಿಸಿದ್ದು, ಆಕೆ ಬಂದೊಡನೆ ಅವಳನ್ನು ಅಪಹರಿಸಿದ್ದ.ಇದನ್ನೂ ಓದಿ:ಹುಷಾರ್​…ಗ್ರಾಹಕರಿಗೆ ಸಾಂಬಾರ್​ ನೀಡದಿದ್ದರೆ ನಿಮಗೂ ಬೀಳಬಹುದು ದಂಡ
ನಂತರ ಆರೋಪಿಯು ಆಕೆಯ ತಾಯಿಗೆ ಕರೆ ಮಾಡಿ, ಕಿಡ್ನ್ಯಾಪ್​​ ವಿಷಯ ತಿಳಿಸಿ ಆಕೆಯ ಬಿಡುಗಡೆಗಾಗಿ ಐ ಫೋನ್ ಅಥವಾ 1.5 ಲಕ್ಷ ರೂಪಾಯಿ ನಗದು ನೀಡುವಂತೆ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ ಸಂತ್ರಸ್ತೆಯ ತಾಯಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದು, ಅಧಿಕಾರಿಗಳು ಅದೇ ನಂಬರ್​ಗೆ ಮತ್ತೆ ಕರೆ ಮಾಡಿದ್ದಾರೆ.ಈ ವೇಳೆ ಆರೋಪಿಯು ಆ ಕಡೆ ಯಾರು ಮಾತನಾಡುತ್ತಿದ್ದಾರೆ ಎಂದು ತಿಳಿಯದೇ ತನ್ನ ಬೇಡಿಕೆಯನ್ನು ಮತ್ತೇ ತಿಳಿಸಿದ್ದಾನೆ. ಆತನ ಬೇಡಿಕೆಗೆ ಅಧಿಕಾರಿ ಸ್ಪಂದಿಸಿದಾಗ ಆರೋಪಿಯು ಯುವತಿಯನ್ನು ಅಲ್ಲೇ ಬಿಟ್ಟು ಗಾಬರಿಯಿಂದಾಗಿ ಪರಾರಿಯಾಗಿದ್ದನು. ಕೊನೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
