ಅಹಮದಾಬಾದ್​:ಅಕ್ರಮ ಸಂಬಂಧ, ಕುಟುಂಬದಲ್ಲಿ ಬೆಂಕಿ ಹಚ್ಚುತ್ತದೆ. ಅದರಲ್ಲೂ ವಯಸ್ಕ ಮಕ್ಕಳಿರುವ ತಂದೆ ತಾಯಿಗಳು ಬೆಳೆಸಿಕೊಳ್ಳುವ ಅಕ್ರಮ ಸಂಬಂಧದಿಂದ ಅವರು ತಮ್ಮ ಮಕ್ಕಳೆದುರು ಮುಜುಗರಕ್ಕೊಳಗಾಗುವಂತಹ ಸಂದರ್ಭ ಒದಗಿಬಿಡುತ್ತದೆ. ಇದೀಗ ಇಂತದ್ದೇ ಒಂದು ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.
ಇದನ್ನೂ ಓದಿ:VIDEO| ಆತನಿಗೆ ವರದಕ್ಷಿಣೆಯಾಗಿ ಸಿಕ್ಕಿದ್ದು ಎಕೆ-47! ಪಾಕಿಸ್ತಾನದಲ್ಲಿ ಇದೆಲ್ಲ ಕಾಮನ್​ ಅಂತೆ
ಅಹಮದಾಬಾದ್​ ನಗರದಲ್ಲಿ ವಾಸಿಸುವ ಮಹಿಳೆಗೆ 15 ವರ್ಷದ ಹಿಂದೆಯೇ ಗಂಡನಿಂದ ವಿಚ್ಛೇದನವಾಗಿತ್ತು. ಗಂಡನಿಂದ ದೂರಾಗಿ ಮಕ್ಕಳೊಂದಿಗೆ ಬದುಕುತ್ತಿದ್ದ ಅವಳಿಕೆ ಒಂದೂವರೆ ವರ್ಷದ ಹಿಂದೆ ಪುರುಷನೊಬ್ಬನ ಜತೆ ಸ್ನೇಹ ಹುಟ್ಟಿದೆ. ಆ ಸ್ನೇಹ ಕೆಲವೇ ತಿಂಗಳಲ್ಲಿ ಸಂಬಂಧವಾಗಿ ಬದಲಾಗಿದೆ. ಮೂರು ತಿಂಗಳ ಕಾಲ ಅಕ್ರಮ ಸಂಬಂಧದಲ್ಲಿದ್ದ ಮಹಿಳೆ, ಮಕ್ಕಳಿಗೆ ಗೊತ್ತಾದರೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆತನಿಂದ ದೂರಾಗಿದ್ದಾಳೆ. ಆತ ದೂರಾಗಬೇಡ ಎಂದು ಎಷ್ಟೇ ಕೇಳಿಕೊಂಡರೂ ಆಕೆ ಒಪ್ಪಿಲ್ಲ.
ಇದನ್ನೂ ಓದಿ:ಯೋಗಿ ಆದಿತ್ಯಾನಾಥ್​ಗೆ ಬಾಲಕನಿಂದ ಕೊಲೆ ಬೆದರಿಕೆ! ಮದುವೆ ಸಂಭ್ರಮದಲ್ಲಿದ್ದವ ಜೈಲು ಪಾಲಾದ
ನೀನು ನನ್ನಿಂದ ದೂರಾದರೆ ನಮ್ಮ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಆತ ಹೆದರಿಸಿದ್ದನಂತೆ. ಅದರೆ ಅದನ್ನು ಲೆಕ್ಕಿಸದ ಆಕೆ ಆತನೊಂದಿಗಿನ ಸಂಪರ್ಕ ಮುರಿದುಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಅವರಿಬ್ಬರ ಖಾಸಗಿ ಫೋಟೋಗಳನ್ನು ಮಹಿಳೆಯ ಇಬ್ಬರು ಮಕ್ಕಳಿಗೆ ವಾಟ್ಸ್​ಆ್ಯಪ್​ ಮಾಡಿದ್ದಾನೆ.ಮಕ್ಕಳ ಫೋನಿಗೆ ಇಂತಹ ಫೋಟೋ ಬಂದಿರುವುದು ತಿಳಿದ ತಕ್ಷಣ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)
ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
