ಹೈದರಾಬಾದ್​:ಮಾಜಿ ಸಚಿವ ಮತ್ತು ವೈಸಿಪಿ ಶಾಸಕ ಪರ್ನಿ ನಾನಿ ಅವರು ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ಸೂಪರ್​ಸ್ಟಾರ್​ ಪವನ್​ ಕಲ್ಯಾಣ್​ಗೆ ತಮ್ಮ ಎರಡು ಚಪ್ಪಲಿಗಳನ್ನು ಪ್ರದರ್ಶಿಸುವುದರ ಜೊತೆಗೆ ಎಚ್ಚರಿಕೆ ಸಂದೇಶ ರವಾನಿಸಿದ ನಾಟಕೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪತ್ರಿಕಾಗೋಷ್ಠಿಯ ನೇರ ಪ್ರಸಾರದಲ್ಲೇ ಪರ್ನಿ ನಾನಿ ಅವರು ತಮ್ಮ ಎರಡು ಚಪ್ಪಲಿಗಳನ್ನು ಪವನ್​ ಕಲ್ಯಾಣ್​ ಹೆಸರು ಹೇಳಿ ಪ್ರದರ್ಶಿಸಿದರು. ನೀನು ಎಲ್ಲ ಸಮಯದಲ್ಲೂ ಚಪ್ಪಲಿಯನ್ನು ತೋರಿಸುತ್ತೀಯಲ್ಲ ನೀನೇನು ದೊಡ್ಡ ಗಂಡ್ಸಾ? ನಾನು ಎರಡು ಚಪ್ಪಲಿಗಳನ್ನು ತೋರಿಸುತ್ತೇನೆ. ನಿನಗಿಂತ ದೊಡ್ಡವನು ನಾನು ಎನ್ನುತ್ತಾ ಚಪ್ಪಲಿಗಳನ್ನು ಪ್ರದರ್ಶಿಸಿದ ನಾನಿ, ಎರಡು ಚಪ್ಪಲಿಗಳಿವೆ ಹುಷಾರ್​! ಎರಡು ಕೂಡ ಹರಿದಿವೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸುವ ಮೂಲಕ ಪರ್ನಿ ನಾನಿ ವಿವಾದವನ್ನು ಮೈಮೇಲೆ ಎಳೆದುಕೊಂಡರು.
ಇದನ್ನೂ ಓದಿ:ರಾಜ್ಯದ ಪ್ರತಿಯೊಬ್ಬ ಬಡವನಿಗೆ 5kg ಅಕ್ಕಿ ಸಿಗುತ್ತಿರುವುದು ಮೋದಿಯಿಂದಲ್ಲ ಬದಲಿಗೆ..: ದಿನೇಶ್ ಗುಂಡೂರಾವ್
ಇದಕ್ಕೂ ಮುನ್ನ ಪವನ್​ ಕಲ್ಯಾಣ್​ ಅವರು ಕಾಕಿನಾಡದ ಕಥಿಪುಡಿಯ ಸಾರ್ವಜನಿಕ ಸಭೆಯಲ್ಲಿ ದ್ವೇಷದ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಸಿಎಂ ಜಗನ್​ ಮೋಹನ್​ ರೆಡ್ಡಿ ಮತ್ತು ಅವರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪರ್ನಿ ನಾನಿ ಅವರು ತಿರುಗೇಟು ನೀಡಿದ್ದು, ಪವನ್​ ಅವರ ಇಬ್ಬಗೆಯ ಮಾತು ತುಂಬಾ ಅಪಾಯಕಾರಿ ಎಂದಿದ್ದಾರೆ. ತಮ್ಮ ನಯವಾದ ಮಾತುಗಳಿಂದ ಅಮಾಯಕರನ್ನು ವಂಚಿಸುತ್ತಿದ್ದಾರೆ. ಪವನ್​ ಅವರು ಹಿಂದಿನ ಟಿಡಿಪಿ ಸರ್ಕಾರದ ಭಾಗವಾಗಿದ್ದರು ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ನಾನಿ ಆರೋಪ ಮಾಡಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತು ಟಿಡಿಪಿಗಾಗಿ ಪವನ್​ ಅವರು ಮತಯಾಚನೆ ಮಾಡುತ್ತಿದ್ದಾರೆ. ಪವನ್​ ಅವರು ಜನಸೇನಾ ಪಕ್ಷ ಕೇವಲ 15 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಜನಸೇನಾ ಸರ್ಕಾರ ರಚಿಸುವ ಪ್ರಶ್ನೆ ಎಲ್ಲಿದೆ ಎಂದರು. ವೈಎಸ್‌ಆರ್‌ಸಿಪಿ ಸರ್ಕಾರವು ಮುಂದಿನ ಅವಧಿಯಲ್ಲೂ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಿದೆ ಎಂದು ನಾನಿ ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​)
ಏಷ್ಯಾಕಪ್​ 2023 ವೇಳಾಪಟ್ಟಿ ಪ್ರಕಟ: 15 ವರ್ಷದ ಬಳಿಕ ಪಾಕ್​ ಆತಿಥ್ಯ, ಶತ್ರು ನೆಲದಲ್ಲಿ ಭಾರತ ಆಡಲಿದೆಯೇ?

ಕೊಳೆತು ದುರ್ವಾಸನೆ ಬರುತ್ತಿದ್ದ ಹೆತ್ತವರ ಶವಗಳ ನಡುವೆ ಬದುಕಿದ್ದ 4 ದಿನಗಳ ಕಂದಮ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + one =
Remember me
