ಲಕ್ಷ್ಮೀಪುರ ಖೇರಿ:ಉತ್ತರ ಪ್ರದೇಶದ ಮಾಜಿ ಶಾಸಕ ನಿರ್ವೇಂದ್ರ ಕುಮಾರ್​ ಮುನ್ನಾ ಅವರ ಹತ್ಯೆಯಾಗಿದೆ.ಇವರು ನಿಘಾಸನ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು.
ಭೂವಿವಾದಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಮಾಜಿ ಶಾಸಕನನ್ನು ದುಷ್ಕರ್ಮಿಗಳು ಹೊಡೆದು ಕೊಂದಿದ್ದಾರೆ. ಭೂಮಿಗೆ ಸಂಬಂಧಪಟ್ಟಂತೆ ಮೊದಲು ಸಣ್ಣ ಗಲಾಟೆಯಾಯಿತು. ಆದರೆ ಪರಿಸ್ಥಿತಿ ಉಲ್ಬಣಗೊಂಡು ನಿರ್ವೇಂದ್ರ ಕುಮಾರ್​ ಅವರು ಗಂಭೀರ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಭೂಮಿಗೆ ಸಂಬಂಧಪಟ್ಟ ವಿವಾದ ಕೋರ್ಟ್​​ನಲ್ಲಿದೆ.ಇದನ್ನೂ ಓದಿ:ಶತಮಾನದಷ್ಟು ಹಳೆಯ ಅಮರಾವತಿ ರಥ ಬೆಂಕಿಗಾಹುತಿ: ಪತ್ತೆಯಾಗದ ಕಾರಣ
ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಬಂದವರನ್ನು ನಿರ್ವೇಂದ್ರ ಕುಮಾರ್​ ತಡೆಯಲು ಯತ್ನಿಸಿದಾಗ ಅವರಿಗೆ ಕೋಲಿನಿಂದ ಹೊಡೆದಿದ್ದಾರೆ. ನಿರ್ವೇಂದ್ರ ಕುಮಾರ್​ ಅವರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೇ ಸಾವನ್ನಪ್ಪಿದ್ದಾರೆ. ಇವರ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)
ಕಿರಿಕ್​ ನಟಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್​ ವಕ್ತಾರೆ ವಿರುದ್ಧ ಕೇಸ್​: ತುಂಡುಡುಗೆ ಕಸರತ್ತಿಗೆ ಪರ-ವಿರೋಧ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nine =
Remember me
