ನೋಯ್ಡಾ:ಆತಂಕಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್​ ನಾಯಕ ಕಮಲ್​ನಾಥ್ ಅವರ ಸೋದರಸಂಬಂಧಿ ಮತ್ತು ಅವರ ಪತ್ನಿಯನ್ನು ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿರುವ ನಿವಾಸದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.​ಶುಕ್ರವಾರ ಘಟನೆ ನಡೆದಿದ್ದು, ಮೃತಪಟ್ಟವರನ್ನು ನರೇಂದ್ರ ನಾಥ್​ (70), ಪತ್ನಿ ಸುಮನ್​ (65) ಎಂದು ಗುರುತಿಸಲಾಗಿದೆ. ನರೇಂದ್ರ ಅವರು ಕಮಲ್​ನಾಥ್​ ಅವರ ಸೋದರಸಂಬಂಧಿ. ಮನೆಯ ಬೇಸ್​ಮೆಂಟ್​ನಲ್ಲಿರುವ ಬಟ್ಟೆಗಳ ರಾಶಿಯಲ್ಲಿ ನರೇಂದ್ರ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಪತ್ನಿ ಸುಮನ್​ ಅವರ ದೇಹ ಮೊದಲನೇ ಮಹಡಿಯ ಡ್ರಾಯಿಂಗ್​ ರೂಮ್​ನಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
ಇದನ್ನೂ ಓದಿರಿ:ಸೆಕ್ಸ್​ ವಿಡಿಯೋ ಶೂಟಿಂಗ್​ ಮಾಡಿದ್ದೂ ಅಲ್ಲದೇ ಪೋರ್ನ್​ ವೆಬ್​ಸೈಟ್​ನಲ್ಲಿ ಹರಿಬಿಟ್ಟ ಹಾಟ್​ ತಾರೆ ಅರೆಸ್ಟ್​
ಅಪರಿಚಿತ ದುಷ್ಕರ್ಮಿಗಳು ನರೇಂದ್ರ ಅವರ ಕತ್ತು ಹಿಸುಕುವ ಮೊದಲು ಅವರನ್ನು ಕಟ್ಟಿಹಾಕಿ, ಮೊಂಡಾದ ವಸ್ತುವಿನಿಂದ ಕ್ರೂರವಾಗಿ ಹಿಂಸಿಸಿದ್ದು, ಗಾಯದ ಕಲೆಗಳು ಪತ್ತೆಯಾಗಿವೆ. ಸುಮನ್​ ಅವರಿಗೆ ಹಿಗ್ಗಾಮುಗ್ಗ ಥಳಿಸಿ, ಎದೆಯ ಎಡಭಾಗಕ್ಕೆ ಗುಂಡು ಹಾರಿಸಿದ್ದಾರೆ.
ಗ್ರೇಟರ್​ ನೋಯ್ಡಾದ ಆಲ್ಫಾ 2 ಸೆಕ್ಟರ್​ನಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನರೇಂದ್ರ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೇರ್​ ಪಾರ್ಟ್​ ವ್ಯವಹಾರ ಮಾಡುತ್ತಿದ್ದರು. ಅಲ್ಲದೆ, ಹಣ ಸಾಲ ನೀಡುತ್ತಿದ್ದರು. ಪರಿಚಯಸ್ಥರು ಮತ್ತು ಅಕ್ಕಪಕ್ಕದ ವ್ಯಾಪಾರಿಗಳು ನರೇಂದ್ರ ಅವರಿಂದ ಸಾಲ ಪಡೆದುಕೊಳ್ಳುತ್ತಿದ್ದರು. ಸುಮನ್​ ಅವರು ದೆಹಲಿ ಮೂಲದ ಎನ್​ಜಿಒದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು.
ನರೇಂದ್ರ ಅವರು ಆಗಾಗ ತಮ್ಮ ಬೇಸ್​ಮೆಂಟ್​ನಲ್ಲಿ ಸ್ಥಳೀಯ ವ್ಯಾಪಾರಿಗಳು, ಮೇಸನ್ಸ್​ ಮತ್ತು ಎಲೆಕ್ಟ್ರಿಷಿಯನ್​ಗಳನ್ನು ಭೇಟಿ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಪಾರ್ಟಿಗೆಂದು ನರೇಂದ್ರ ಅವರು ಕೆಲವರನ್ನು ಮನೆಗೆ ಆಹ್ವಾನಿಸಿದ್ದರಂತೆ. ಬೇಸ್​ಮೆಂಟ್​ನಲ್ಲಿ ವೈನ್​ ಗ್ಲಾಸ್​, ಲಿಕ್ಕರ್​ ಬಾಟಲ್ಸ್​, ಮೊಮೊಸ್​, ನೂಡಲ್ಸ್​ ಮತ್ತು ಸಿಗರೇಟ್​ ಹಾಗೂ ಬೀಡಿಗಳು ಬಿದ್ದಿರುವುದನ್ನು ತನಿಖಾಗಾರರು ಗಮನಿಸಿದ್ದಾರೆ.
ಇದನ್ನೂ ಓದಿರಿ:ಮಧ್ಯರಾತ್ರಿ ಎಚ್ಚರಗೊಂಡಾಗ ಪತಿ ನನ್ನ ಬಳಿಯಿರಲಿಲ್ಲ: ತನ್ನದೇ ರಹಸ್ಯ ಘಟನೆ ಬಿಚ್ಚಿಟ್ಟ ಮಹಿಳೆ!
ಅಲ್ಲದೆ, ಗುರುವಾರ ರಾತ್ರಿ ಸುಮನ್​ ಅವರು ತಮ್ಮ ಮಗಳಿಗೆ ಫೋನ್​ ಮಾಡಿ ಬೇಸ್​ಮೆಂಟ್​ನಲ್ಲಿ ಪಾರ್ಟಿ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅದು ಆಕೆಗೆ ಇಷ್ಟವಿಲ್ಲದಿರುವುದಾಗಿಯು ತಿಳಿಸಿದ್ದಾರೆ. ಆದರೆ, ಬೆಳಗಾಗುವಷ್ಟರಲ್ಲಿ ನರೇಂದ್ರ ಮತ್ತು ಪತ್ನಿ ಸುಮನ್​ ಬರ್ಬರವಾಗಿ ಹತ್ಯೆಯಾಗಿರುವುದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಥಟ್​ ಅಂತಾ ಹೇಳಿ… ಈ ಚಿತ್ರದಲ್ಲಿರೋ ವ್ಯಕ್ತಿಗಳೆಷ್ಟು?: ನಿಮ್ಮ ಉತ್ತರ ಸರಿಯೇ? ಕ್ಲಿಕ್​ ಮಾಡಿ ನೋಡಿ!

ಮಗನ ಡೆತ್​ನೋಟ್​ ನೋಡಿ ಪಾಪಪ್ರಜ್ಞೆಯಿಂದ ಬಳಲುತ್ತಿರುವೆ- ನಾನು ತಪ್ಪು ಮಾಡಿಬಿಟ್ನಾ?

ಪತ್ನಿಯ ಎಲ್​ಐಸಿ ಪಾಲಿಸಿ ಮೇಲೆ ಕಣ್ಣು ಹಾಕಿದ ಚಾರ್ಟೆರ್ಡ್ ಅಕೌಂಟೆಂಟ್ ಪತಿ ಮಾಡಿದ್ದೇನು ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
