ಹೈದರಾಬಾದ್​:ಗಣೇಶೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸೋದು ಬೇರೆ, ಸದ್ದುಗದ್ದಲವೆಬ್ಬಿಸಿ ಸುತ್ತಮುತ್ತಲಿನವರಿಗೆ ಕಿರಿಕಿರಿ ಉಂಟುಮಾಡೋದು ಬೇರೆ. ನರ್ಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯೋಧರೊಬ್ಬರು ಇಂತಹ ಕಿರಿಕಿರಿಯ ಕಾರಣಕ್ಕೆ ರೊಚ್ಚಿಗೆದ್ದು ತಮ್ಮ ಅಧಿಕೃತ ರಿವಾಲ್ವರ್ ತೆಗೆದುಕೊಂಡು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಘಟನೆ ನಡೆದಿದೆ.
ಈ ಬಗ್ಗೆ ದೂರು ದಾಖಲಾಗಿದ್ದು, ಮಾಜಿ ಯೋಧನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಗುರುವಾರ ತಡರಾತ್ರಿ ಅವರಿದ್ದ ಅಪಾರ್ಟ್​ಮೆಂಟ್​ ನ ಆವರಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಯುವಕರ ಗುಂಪು ಕರ್ಕಶ ಹಾಡುಗಳನ್ನು ಲೌಡ್​ ಸ್ಪೀಕರ್​ ಮೂಲಕ ಹಾಕಿದ್ದರಿಂದ ಯೋಧ ಮನಸ್ಸಿನ ಸಮಾಧಾನ ಕಳೆದುಕೊಂಡಿದ್ದರು. ಯುವಕರ ಬಳಿ ಹೋಗಿ ಹಾಡಿನ ವ್ಯಾಲ್ಯೂಮ್ ಕಡಿಮೆ ಮಾಡುವಂತೆ ಮನವಿ ಮಾಡಿದಾಗ ಅವರು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಕುಲ್‌ಭೂಷಣ್‌ ಜಾಧವ್‌ ಪರ ವಾದಿಸಲು ಭಾರತದ ವಕೀಲರನ್ನು ಬಿಡಲ್ಲ ಎಂದ ಪಾಕ್‌!
ಯುವಕರ ನಡವಳಿಕೆಯಿಂದ ರೊಚ್ಚಿಗೆದ್ದ ಯೋಧ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಯಾವುದಕ್ಕೂ ಅವರು ಮಣಿಯದಿದ್ದಾಗ ತಮ್ಮ ಅಧಿಕೃತ ರಿವಾಲ್ವರ್ ತೆಗೆದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಫೂಟೇಜನ್ನು ಸ್ಥಳೀಯ ಟಿವಿ ಚಾನೆಲ್ ಪ್ರಸಾರ ಮಾಡಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. (ಏಜೆನ್ಸೀಸ್)
ವಿಡಿಯೋ: ಕೃಷಿಕರ ಕಮಾಲ್‌- ಬೈಕ್‌ನಿಂದ ಮೆಕ್ಕೆಜೋಳ ಬಿಡಿಸುವುದನ್ನು ನೋಡಿದ್ದೀರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 10 =
Remember me
