ನವದೆಹಲಿ: ಕರೊನಾ ಸೋಂಕಿನಿಂದ ಬಚಾವ್​ ಆಗಲು ಸ್ಯಾನಿಟೈಸರ್​ ಬಳಕೆ ಕೂಡ ಒಂದು ಮಾರ್ಗ. ಆದರೆ ಅತಿಯಾಗಿ ಸ್ಯಾನಿಟೈಸರ್ ಬಳಸಿದರೆ ಅದು ಕೂಡ ಹಾನಿಕಾರಕವಾಗಿ ಪರಿಣಮಿಸಲಿದೆ!
ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್​ ಸೈನ್ಸಸ್​ (ಎಐಐಎಂಎಸ್​) ಮತ್ತು ಅಮೆರಿಕನ್ ಸೊಸೈಟಿ ಆಫ್​ ಮೈಕ್ರೊಬಯಾಲಜಿ ಆಯೋಜಿಸಿದ್ದ ವೆಬಿನಾರ್​ನಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ. ಆ್ಯಂಟಿ ಬಯಾಟಿಕ್​ ರೆಸಿಸ್ಟೆನ್ಸ್ ಕುರಿತು ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ವೆಬಿನಾರ್​ನಲ್ಲಿ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಬಗ್ಗೆ ವಿವಿಧ ವಿಚಾರಗಳು ಚರ್ಚೆ ಆಗಿವೆ.
ಅತಿಯಾದ ಸ್ಯಾನಿಟೈಸರ್ ಹಾಗೂ ಆ್ಯಂಟಿ ಮೈಕ್ರೋಬಿಯಲ್​ ಸೋಪ್​ಗಳ ಬಳಕೆಯಿಂದ ಆ್ಯಂಟಿ ಮೈಕ್ರೋಬಿಯಲ್​ ರೆಸಿಸ್ಟೆನ್ಸ್ ಹೆಚ್ಚಾಗುವುದರಿಂದ ಪರಿಸ್ಥಿತಿ ಮತ್ತಷ್ಟು ವ್ಯತಿರಿಕ್ತವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆ್ಯಂಟಿ ಮೈಕ್ರೋಬಿಯಲ್ ಔಷಧಗಳಿಗೆ ರೋಗಕಾರಕ ಮೈಕ್ರೋಬ್​​ಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದನ್ನು ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ. ಇದನ್ನು ಈಗಲೇ ಸರಿಯಾಗಿ ನಿರ್ವಹಿಸದಿದ್ದರೆ 2050ರ ಸುಮಾರಿಗೆ 1 ಕೋಟಿ ಮಂದಿ ಇದರ ಅಪಾಯ ಎದುರಿಸಬೇಕಾಗುತ್ತದೆ ಎಂಬ ಅಂದಾಜಿಸಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
