ನವದೆಹಲಿ:ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಇಂದು ಮಾಂಸಕ್ಕಿರುವ ಬೇಡಿಕೆಯಿಂದಲೇ ಅದರ ಬೆಲೆ ದುಬಾರಿಯಾಗಿದೆ. ಬೆಲೆ ಏರಿಕೆಯಿಂದಾಗಿ ಕೆಜಿಗಟ್ಟಲೆ ಮಾಂಸ ಕೊಳ್ಳುತ್ತಿದ್ದ ಕಡೆ ಅರ್ಧ ಕೆ.ಜಿ ಪಡೆದು ಸುಮ್ಮನಾಗುತ್ತಿದ್ದಾರೆ. ಮಾಂಸ ತಿನ್ನುವ ಆಸೆಯಿದ್ದರೂ ಬೆಲೆಯನ್ನು ನೋಡಿ ಬಾಯಿ ಕಚ್ಚಿಕೊಂಡ ಉದಾಹರಣೆಗಳೂ ಇವೆ. ಇನ್ನು ಸಾಮಾನ್ಯ ಜನರಂತೂ ಕುರಿ ಮಾಂಸವನ್ನು ಖರೀದಿಸಲು ಸಾಧ್ಯವಿಲ್ಲ. ಇದೆಲ್ಲದರ ನಡುವೆ ಮೊಟ್ಟೆ ಬೆಲೆಯೂ ಕೂಡ ಏರುಗತಿಯಲ್ಲಿದೆ. ಆದರೆ, ಇದೀಗ ಮಾಂಸ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಹಿಂದು ಧರ್ಮದ ಆಚರಣೆಯಲ್ಲಿ ಕೆಲವೊಂದು ವಾರ ಮಾಂಸಾಹಾರ ಸೇವಿಸುವುದಿಲ್ಲ. ಉದಾಹರಣೆಗೆ ಶನಿವಾರ, ಸೋಮವಾರ ಮತ್ತು ಶುಕ್ರವಾರ ವ್ರತ ಆಚರಣೆ ಹೆಸರಲ್ಲಿ ಮಾಂಸ ಸೇವನೆ ತ್ಯಜಿಸುತ್ತಾರೆ. ಅಲ್ಲದೆ, ಕೆಲ ತಿಂಗಳಲ್ಲೂ ಮಾಂಸಾಹಾರ ಸೇವಿಸುವುದಿಲ್ಲ. ಅವುಗಳಲ್ಲಿ ಶ್ರಾವಣ ಮಾಸವು ಕೂಡ ಒಂದು. ಈ ತಿಂಗಳಲ್ಲಿ ಮಾಂಸಕ್ಕೆ ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿಯುತ್ತದೆ. ಇದೀಗ ಶ್ರಾವಣ ಮಾಸ ಆರಂಭವಾಗಿರುವುದರಿಂದ ಮಾಂಸದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಬೆಲೆ ಹೆಚ್ಚಳದಿಂದಾಗಿ ಹೊಟ್ಟೆ ತುಂಬ ತಿನ್ನಲು ಸಾಧ್ಯವಾಗದ ನಾನ್ ವೆಜ್ ಪ್ರಿಯರಿಗೊಂದು ಸಂತಸದ ಸುದ್ದಿ ಸಿಕ್ಕಿದೆ. ಕೋಳಿ ಮಾಂಸದ ಬೆಲೆ ಭಾರಿ ಇಳಿಕೆಯಾಗಿದೆ. ಇದುವರೆಗೂ ಒಂದು ಕೆಜಿ ಕೋಳಿ ಮಾಂಸದ ಬೆಲೆ 280 ರಿಂದ 300 ರೂ.ವರೆಗೂ ಇತ್ತು. ಆದರೆ, ಈಗ ಆ ಮೊತ್ತ ಕಡಿಮೆಯಾಗಿದೆ. ಸದ್ಯ 180 ರಿಂದ 200 ರೂ.ಗೆ ಇಳಿಕೆಯಾಗಿದೆ.
ರಾಜ್ಯದಲ್ಲಿ ಕೋಳಿ ಲಭ್ಯತೆ ಹೆಚ್ಚಿರುವುದೇ ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಅಲ್ಲದೆ, ಇಂದಿನಿಂದ ಶ್ರಾವಣ ಮಾಸ ಆರಂಭವಾಗಿರುವುದರಿಂದ ನಾನ್ ವೆಜ್​ಗೆ ಹೆಚ್ಚಿನ ಬೇಡಿಕೆ ಇಲ್ಲದಿರುವುದು ಕೂಡ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಶ್ರಾವಣ ಮಾಸ ಬಂತೆಂದರೆ ಮನೆಯಲ್ಲಿ ಮಹಿಳೆಯರು ಪೂಜೆ, ವರಲಕ್ಷ್ಮೀ ವ್ರತ, ಮಂಗಳಗೌರಿ ವ್ರತ ಮಾಡುತ್ತಾರೆ. ಈ ಸಮಯದಲ್ಲಿ ಕೋಳಿ, ಮಟನ್, ಮೀನು ಮತ್ತು ಮೊಟ್ಟೆಗಳನ್ನು ಬೇಯಿಸಲು ಸಹ ಆದ್ಯತೆ ನೀಡುವುದಿಲ್ಲ.
ಈ ಹಿನ್ನಲೆಯಲ್ಲಿ ಕೋಳಿಮಾಂಸದ ಬೆಲೆ ಈ ಮಟ್ಟಿಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳ ಸೀಸನ್ ಕೂಡ ಆರಂಭವಾಗಲಿದೆ. ವರಲಕ್ಷ್ಮೀ ವ್ರತ, ರಾಖಿ ಹಬ್ಬ, ಕೃಷ್ಣಾಷ್ಟಮಿ ಮತ್ತು ಶೀಘ್ರದಲ್ಲೇ ವಿನಾಯಕ ಚೌತಿಯಂತಹ ಹಬ್ಬಗಳೂ ಬರಲಿದ್ದು, ಈ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಮಾಡದಿರುವುದರಿಂದ ವ್ಯಾಪಾರಸ್ಥರು ಕೊಂಚ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಇನ್ನು ಶ್ರಾವಣ ಮಾಸವು ಮೊಟ್ಟೆ ಬೆಲೆಯ ಮೇಲೂ ಪರಿಣಾಮ ಬೀರಿದೆ. ಕಳೆದ ತಿಂಗಳು ಒಂದು ಮೊಟ್ಟೆಗೆ 7 ರೂ. ಇತ್ತು. ಆದರೆ, ಇದೀಗ ಮೊಟ್ಟೆಯ ಬೆಲೆ 6ರಿಂದ 6.50 ರೂ. ಇದೆ. ಸಗಟು ಮಾರುಕಟ್ಟೆಯಲ್ಲಿ 5 ರಿಂದ 5.50 ರೂ.ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಮಾಂಸ ಪ್ರಿಯರಿಗೆ ಇದೀಗ ಸಂತಸದ ಸುದ್ದಿ ಎಂದೇ ಹೇಳಬಹುದಾಗಿದೆ.(ಏಜೆನ್ಸೀಸ್​)
ಅವಮಾನಗಳನ್ನು ನುಂಗಿ ಹಂತ ಹಂತವಾಗಿ ಬೆಳೆದ ನಟ ವಿಜಯ್​ ಸೇತುಪತಿ ಬಳಿ ಇದೆಯಾ ಇಷ್ಟೊಂದು ಆಸ್ತಿ?!

ಯಾವುದೇ ಕಾರಣಕ್ಕೂ ಜೇನುತುಪ್ಪದ ಜತೆ ಈ ಆಹಾರಗಳನ್ನು ಸೇವಿಸಬೇಡಿ! ತಿಂದ್ರೆ ನಿಮ್ಮ ಆರೋಗ್ಯಕ್ಕೆ ಡೇಂಜರ್​

ಈ 3 ಪ್ರಮುಖ ಕಾರಣಗಳಿಂದಲೇ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋತಿದ್ದು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × three =
Remember me
