ಭುವನೇಶ್ವರ್​:ಒಡಿಶಾ ರಾಜ್ಯಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿದ್ದ ಯುವತಿ ಜರಾಫುಲ್ಲಾ ನಾಯಕ್​ ನಿಗೂಢ ಸಾವಿನ ಪ್ರಕರಣ ಕೊನೆಗೂ ಬಯಲಾಗಿದೆ. ಆಕೆಯ ಪ್ರಿಯಕರನೆಂದು ಹೇಳಲಾಗಿರುವ ಹಾಗೂ ಪ್ರಕರಣದ ಪ್ರಮುಖ ಆರೋಪಿ ರಾಕೇಶ್​ ಸ್ವೈನ್​ ಎಂಬಾತ ಜರಾಫುಲ್ಲಾಳನ್ನು ಕೊಲೆ ಮಾಡಿದ್ದಾನೆಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 26ರಂದು ರಾತ್ರಿ ಉಳಿದುಕೊಂಡಿದ್ದ ಗೆಸ್ಟ್​ಹೌಸ್​ನಲ್ಲೇ ಜರಾಫುಲ್ಲಾಳ ಬಾಯ್​ಫ್ರೆಂಡ್​ ರಾಕೇಶ್​, ಆಕೆಯನ್ನು ಕೊಂದಿದ್ದಾನೆ. ಬಳಿಕ ಸಾಕ್ಷ್ಯಾನಾಶಕ್ಕಾಗಿ ಘಟನಾ ಸ್ಥಳ ಜಾಜ್​ಪುರ್​ದಿಂದ 90 ಕಿ.ಮೀ ದೂರದಲ್ಲಿರುವ ಕೌಖಿಯಾ ಬಳಿ ಮೃತದೇಹ ಎಸೆದಿರುವುದು ಬಹಿರಂಗವಾಗಿದೆ. ಪೊಲೀಸ್​ ವಿಚಾರಣೆಯಲ್ಲಿ ಆರೋಪಿ ರಾಕೇಶ್​, ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿರಿ:ಕುಡಿದ ಅಮಲಿನಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನಡುರಾತ್ರಿ ನುಗ್ಗಿದ! ಮುಂದೆ ಆಗಿದ್ದೆಲ್ಲವೂ ಅವಾಂತರ
ರಾಕೇಶ್​ ವಿರುದ್ಧ ಪೊಲೀಸರಿಗೆ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿದ್ದು, ಬಲವಾದ ಸಾಕ್ಷಿಗಳನ್ನು ಕಲೆಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಲಭ್ಯವಾಗಿರುವ ಸಾಕ್ಷಿಗಳ ಪ್ರಕಾರ ರಾಕೇಶ​ನೇ ಜರಾಫುಲ್ಲಾಳನ್ನು ಕೊಂದಿರುವುದು ಬಹುತೇಕ ಖಚಿತವಾಗಿದ್ದು, ಆದಷ್ಟು ಬೇಗ ಸಾವಿಗೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಹೇಳಿದ್ದಾರೆ.

ಸದ್ಯ ಲಭ್ಯವಾಗಿರುವ ಸಾಕ್ಷಿಗಳ ಪ್ರಕಾರ ಜನವರಿ 26ರ ರಾತ್ರಿ ಜರಾಫುಲ್ಲಾ ಮತ್ತು ಆಕೆಯ ಬಾಯ್​ಫ್ರೆಂಡ್​ ರಾಕೇಶ್​ ಭುವನೇಶ್ವರದ ಖಂದಗಿರಿಯಲ್ಲಿರುವ ಧರ್ಮ ವಿಹಾರ ಖಾಸಗಿ ಗೆಸ್ಟ್​ಹೌಸ್​ನಲ್ಲಿ ತಂಗಿದ್ದರು. ರೂಮ್​ ನಂ. 201ರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದ್ದಾಗಿ ರಾಕೇಶ್​ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅದೇ ರಾತ್ರಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿ ಕೊನೆಗೆ ರಾಕೇಶ್​, ಜರಾಫುಲ್ಲಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿರಿ:ಪತಿಯ ಅತಿಯಾದ ಚಟ, ಕಿರುಕುಳಕ್ಕೆ ಬೇಸತ್ತು ಐಪಿಎಸ್​ ಅಧಿಕಾರಿಯಿಂದ ದೂರು ದಾಖಲು!
ಪೊಲೀಸರು ಗೆಸ್ಟ್​ಹೌಸ್​ ಪರಿಶೀಲಿಸಿದಾಗಲೂ ಉಸಿರುಗಟ್ಟಿಸಿ ಕೊಂದಿರುವುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಮರಣೋತ್ತರ ವರದಿಯಲ್ಲೂ ಸಹ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿದೆ. ಅಂದು ರಾತ್ರಿ ಇಬ್ಬರು ನಡುವೆ ಜಗಳ ನಡೆದಿರುವು ಗೆಸ್ಟ್​ಹೌಸ್​ ಸಿಬ್ಬಂದಿಗೂ ತಿಳಿದಿದೆ. ಆದರೆ, ಯಾವ ಕಾರಣಕ್ಕೆ ಜಗಳ ಆಡುತ್ತಿದ್ದಾರೆ ಎಂಬುದು ತಿಳಿಯಲಿಲ್ಲ ಎಂದು ಸಿಬ್ಬಂದಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಜರಾಫುಲ್ಲಾಳನ್ನು ಕೊಲೆ ಮಾಡಿದ ಬಳಿಕ ತನ್ನ ಸ್ನೇಹಿತನನ್ನು ಕರೆಸಿಕೊಂಡ ರಾಕೇಶ್​, ಮೃತದೇಹವನ್ನು ಸ್ಕೂಟರ್​ ಮೇಲೆ ಕೂರಿಸಿಕೊಂಡು ಜಾಜ್​ಪುರ್​ ಜಿಲ್ಲೆಯ ಕೌಖಿಯಾದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಇದಕ್ಕೂ ಮುನ್ನ ಮಾರ್ಗ ಮಧ್ಯೆ ಜರಾಫುಲ್ಲಾಳ ಮೊಬೈಲ್​ ಫೋನ್​ ಅನ್ನು ಎಸೆದು ಸಾಕ್ಷ್ಯಾನಾಶಕ್ಕೆ ಪ್ರಯತ್ನಿಸಿದ್ದ.
ಇದನ್ನೂ ಓದಿರಿ:ಮದ್ವೆಯಾದ 2 ತಿಂಗಳಲ್ಲಿ ಗಂಡನಿಂದಲೇ ಬಿ.ಟೆಕ್​ ವಿದ್ಯಾರ್ಥಿನಿ ಹತ್ಯೆ: ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪಾಲಕರು!
ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ರಾಕೇಶ್​ನನ್ನು ಬಂಧಿಸಿದ್ದರು. ಅಲ್ಲದೆ, ಜರಾಫುಲ್ಲಾಳ ಮೊಬೈಲ್​ ಬೇರೊಬ್ಬರ ಕೈಗೆ ಸಿಕ್ಕಿ ಅದನ್ನು ಪೊಲೀಸ್​ ಠಾಣೆಗೆ ತಂದು ನೀಡಿದ್ದ. ಬಳಿಕ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಪ್ರಕರಣದಲ್ಲಿ ಮಹತ್ವದ ಸಾಕ್ಷಿಗಳನ್ನು ಕಲೆಹಾಕಿದ್ದಾರೆ.

ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ರಾಕೇಶ್​, ಇಬ್ಬರು ಹೋಟೆಲ್​ನಲ್ಲಿರ ಇರುವಾಗ ದೈಹಿಕ ಸಂಪರ್ಕ ನಡೆಸಿದೆವು. ಆದರೆ, ಬೆಳಗಾಗುವಷ್ಟರಲ್ಲಿ ಆಕೆ ಪ್ರಜ್ಞೆ ತಪ್ಪಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸ್ನೇಹಿತನ ಸ್ಕೂಟರ್​ನಲ್ಲಿ ಹೋಗುವಾಗ ಆಕೆ ಮೃತಪಟ್ಟಿರುವುದು ಖಚಿತವಾಯಿತು. ಹೀಗಾಗಿ ಏನು ಮಾಡಬೇಕೆಂದು ತಿಳಿಯದೇ ರಸ್ತೆ ಬದಿ ಶವ ಎಸೆದು ಹೋದೆವು ಎಂದಿದ್ದ. ಅಲ್ಲದೆ, ಆಕೆಯ ಸಾವಿಗೆ ಫುಡ್​ ಪಾಯಿಸನ್​ ಸಾಧ್ಯತೆ ಇರುಬಹುದು ಎನ್ನಲಾಗಿತ್ತು. ಆದರೆ, ಇದು ಕೊಲೆ ಎಂಬುದು ಕೊನೆಗೂ ಸಾಕ್ಷ್ಯಾಧಾರಗಳಿಂದ ಬಹಿರಂಗವಾಗಿದೆ. ಸದ್ಯ ಬಂಧನದಲ್ಲಿರುವ ರಾಕೇಶ್​ ವಿಚಾರಣೆ ನಡೆದಿದೆ.(ಏಜೆನ್ಸೀಸ್​)
ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!
ಪ್ರೇಯಸಿ ಶವ ತಂದು ರಸ್ತೆಬದಿ ಎಸೆದ ಪ್ರಕರಣ: ಜ.26ರ ರಾತ್ರಿ ಹೋಟೆಲ್​ ರೂಮ್ ಘಟನೆ ಬಿಚ್ಚಿಟ್ಟ ಪ್ರಿಯಕರ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 7 =
Remember me
